ಆ್ಯಪ್ನಗರ

ಸ್ವಂತ ಒಟಿಟಿ ಆರಂಭಕ್ಕೆ ಮುಂದಾದ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್‌ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತನ್ನದೇ ಸ್ವಂತ ಆನ್ ಲೈನ್ ಸ್ಟ್ರೀಮಿಂಗ್ (ಒಟಿಟಿ) ಆರಂಭಿಸಲು ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಅಡವಿ ಶೇಷ್ ಅಭಿನಯದ ಸಿನಿಮಾವೊಂದನ್ನು ಮೊದಲ ಒಟಿಟಿ ಪ್ರಾಜೆಕ್ಟ್ ಆಗಲಿದೆ ಎಂದಿವೆ ಮೂಲಗಳು.

Vijaya Karnataka 14 Apr 2020, 7:50 pm

ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ಅವರು ತಮ್ಮದೇ ಸ್ವಂತ ಒಟಿಟಿ ವೇದಿಕೆ ಆರಂಭಿಸಿ ಆ ಮೂಲಕ ಸಿನಿಮಾ, ಧಾರಾವಾಹಿ, ವೆಬ್‌ ಸೀರೀಸ್‌ಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅವರು ಕೆಲವು ಪ್ರಮುಖ ಒಟಿಟಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಡಿಜಿಟಲ್‌ ಉದ್ಯಮದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಸಿನಿಮಾಗಳಿಗೆ ಒಟಿಟಿ ವೇದಿಕೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿರುವುದರಿಂದ ಸ್ವಂತ ಡಿಜಿಟಲ್‌ ವೇದಿಕೆ ಸ್ಥಾಪನೆಗೆ ಅವರು ಒಲವು ತೋರಿದ್ದಾರೆ.
Vijaya Karnataka Web ಮಹೇಶ್ ಬಾಬು


ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ಮನೆಯಲ್ಲಿರುವ ಮಹೇಶ್‌ ಬಾಬು ತಮ್ಮ ಬಿಡುವಿನ ಸಮಯದಲ್ಲಿ ಸ್ವಂತ ಒಟಿಟಿ ವೇದಿಕೆಗೆ ಸಂಬಂಧಪಟ್ಟ ಕೆಲಸಗಳ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಈ ಪ್ರಾಜೆಕ್ಟ್ ಗೆ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಕೈ ಜೋಡಿಸಲು ಮುಂದಾಗಿದೆ. ಲಾಕ್‌ಡೌನ್‌ ಮುಗಿದ ಮೇಲೆ ಮಹೇಶ್‌ ಬಾಬು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ.

ಶಿರಡಿಯಲ್ಲಿ ಮಹೇಶ್ ಬಾಬು; ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್

ಪ್ರಿನ್ಸ್‌ ಅಂದುಕೊಂಡಂತೆ ಆದರೆ 'ಎವರು', 'ಗೂಢಚಾರಿ', 'ಕ್ಷಣಂ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ನಟ ಅಡವಿ ಶೇಷ್‌ ಅಭಿನಯದ ಸಿನಿಮಾವೊಂದು ಅವರ ಮೊದಲ ಒಟಿಟಿ ಪ್ರಾಜೆಕ್ಟ್ ಆಗಲಿದೆ. ಈ ಮೊದಲು ತೆಲುಗಿನ ಮತ್ತೊಬ್ಬ ಸ್ಟಾರ್‌ ನಟ ಅಲ್ಲು ಅರ್ಜುನ್‌ ಅವರು 'ಆಹಾ' ಹೆಸರಿನ ಸ್ವಂತ ಒಟಿಟಿ ವೇದಿಕೆ ಆರಂಭಿಸಿದ್ದರು.

ಬಿಗ್ ಬಾಸ್ ತೆಲುಗು ಹೊಸ ಸೀಸನ್ ನಿರೂಪಣೆ ‘ಪ್ರಿನ್ಸ್’ ಮಹೇಶ್ ಬಾಬು ಹೆಗಲಿಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌