ಆ್ಯಪ್ನಗರ

17 ಹೀರೋಗಳು ರಿಜೆಕ್ಟ್ ಮಾಡಿದ್ದ 'ರಾಕ್ಷಸನ್‌' ಚಿತ್ರ ಯಶಸ್ಸು ಕಂಡಿದ್ದು ಹೇಗೆ?

ನಟ ವಿಷ್ಣು ವಿಶಾಲ್- ಅಮಲಾ ಪೌಲ್ ಅಭಿನಯದ 'ರಾಕ್ಷಸನ್' ಚಿತ್ರವು 2018ರಲ್ಲಿ ತೆರೆಕಂಡು ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಕುರಿತು ಒಂದು ಅಚ್ಚರಿ ಮಾಹಿತಿಯನ್ನು ವಿಷ್ಣು ವಿಶಾಲ್ ಹೊರಹಾಕಿದ್ದಾರೆ.

Vijaya Karnataka Web 28 Jul 2020, 5:01 pm
2018ರಲ್ಲಿ ತೆರೆಕಂಡ ತಮಿಳಿನ 'ರಾಕ್ಷಸನ್‌' ಚಿತ್ರವು ನಟ ವಿಷ್ಣು ವಿಶಾಲ್‌ ಮತ್ತು ಅಮಲಾ ಪೌಲ್‌ಗೆ ದೊಡ್ಡ ಬ್ರೇಕ್ ನೀಡಿತ್ತು. ಜೊತೆಗೆ ತಮಿಳಿನ ಬೆಸ್ಟ್‌ ಥ್ರಿಲ್ಲರ್ ಸಿನಿಮಾಗಳಲ್ಲಿ 'ರಾಕ್ಷಸನ್‌' ಕೂಡ ಒಂದು ಎನ್ನುವ ಕೀರ್ತಿಗೆ ಪಾತ್ರವಾಯಿತು. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್‌ ಮಾಡಿದ ಈ ಸಿನಿಮಾ ತೆಲುಗಿಗೂ ರಿಮೇಕ್ ಆಗಿತ್ತು. ಆದರೆ, ಇಂತಹ ಹಿಟ್ ಸಿನಿಮಾದಲ್ಲಿ ನಟಿಸಲು 17 ಹೀರೋಗಳು ಹಿಂದೇಟು ಹಾಕಿದ್ದರು ಎಂದರೇ ನೀವು ನಂಬುತ್ತೀರಾ? ನಂಬಲೇಬೇಕು. ಯಾಕೆಂದರೆ, ಈ ವಿಚಾರವನ್ನು ಸ್ವತಃ 'ರಾಕ್ಷಸನ್' ಹೀರೋ ವಿಷ್ಣು ವಿಶಾಲ್‌ ಬಹಿರಂಗಪಡಿಸಿದ್ದಾರೆ.
Vijaya Karnataka Web unknown facts about vishnu vishal amala paul starrer ratsasan movie
17 ಹೀರೋಗಳು ರಿಜೆಕ್ಟ್ ಮಾಡಿದ್ದ 'ರಾಕ್ಷಸನ್‌' ಚಿತ್ರ ಯಶಸ್ಸು ಕಂಡಿದ್ದು ಹೇಗೆ?


22 ನಿರ್ಮಾಪಕರು ಸ್ಕ್ರಿಪ್ಟ್‌ ರಿಜೆಕ್ಟ್ ಮಾಡಿದ್ರು
ಈಚೆಗೆ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ವಿಷ್ಣು ವಿಶಾಲ್ ಹೇಳಿದ್ದಾರೆ. 17 ನಟರು 'ರಾಕ್ಷಸನ್‌'ನಲ್ಲಿ ಹೀರೋ ಆಗುವುದಕ್ಕೆ ನಿರಾಕರಣೆ ಮಾಡಿದ್ದರು. ಅಷ್ಟೇ ಅಲ್ಲ, 22 ನಿರ್ಮಾಪಕರು 'ರಾಕ್ಷಸನ್‌' ಕಥೆ ಕೇಳಿ, ಇದನ್ನು ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರಂತೆ. ಕೊನೆಗೆ ವಿಷ್ಣು ವಿಶಾಲ್‌ಗೂ ಈ ಸಿನಿಮಾದ ಆಫರ್ ಕೈತಪ್ಪಿ ಹೋಗುವುದರಲ್ಲಿತ್ತಂತೆ. ಆದರೆ, ಅದೃಷ್ಟ ಚೆನ್ನಾಗಿದ್ದರಿಂದ ಅವರಿಗೆ ಮತ್ತೆ ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಯಿತು. ರಾಮ್‌ ಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ದಿಲ್ಲಿ ಬಾಬು ಮತ್ತು ಆರ್‌. ಶ್ರೀಧರ್‌ ನಿರ್ಮಾಣ ಮಾಡಿದ್ದರು.

ಥ್ರಿಲ್ಲಿಂಗ್ ಆಗಿದ್ದ 'ರಾಕ್ಷಸನ್‌'
'ರಾಕ್ಷಸನ್‌' ಭರ್ಜರಿ ಯಶಸ್ಸು ಕಾಣಲು ಮುಖ್ಯ ಕಾರಣ, ಅದರ ಕಥೆ ಹಾಗೂ ನಿರೂಪಣೆ. ಹಿನ್ನೆಲೆ ಸಂಗೀತ ಕೂಡ 'ರಾಕ್ಷಸನ್' ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ನಿರ್ದೇಶಕ ರಾಮ್‌ ಕುಮಾರ್ ಬಹಳ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದರು. ಸಣ್ಣ ಸುಳಿವು ಕೂಡ ನೀಡದೇ ಸೈಕೋ ವ್ಯಕ್ತಿಯೊಬ್ಬ ಸಾಲು ಸಾಲು ಕೊಲೆ ಮಾಡುತ್ತಿರುತ್ತಾನೆ. ಆ ಕೊಲೆ ಪ್ರಕರಣಗಳನ್ನು ಪೊಲೀಸ್ ಅಧಿಕಾರಿಯಾದ ಕಥಾನಾಯಕ ಹೇಗೆ ಭೇದಿಸುತ್ತಾನೆ ಅನ್ನೋದೇ 'ರಾಕ್ಷಸನ್' ಕಥಾನಕ. ಸದ್ಯ ಈ ಸಿನಿಮಾದ ಯಶಸ್ಸಿನಿಂದಾಗಿ ವಿಷ್ಣು ಕೈಯಲ್ಲಿ ಐದಾರು ಸಿನಿಮಾಗಳಿವೆ. ಅಂದಹಾಗೆ, ಬಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಜೊತೆ ವಿಷ್ಣು ಡೇಟಿಂಗ್ ಮಾಡುತ್ತಿದ್ದಾರೆ.

ಮುಂಡಾಸುಪಟ್ಟಿಗೂ ಹೀಗೆ ಆಗಿತ್ತು!
ವಿಷ್ಣು ವಿಶಾಲ್- ನಿರ್ದೇಶಕ ರಾಮ್‌ ಕುಮಾರ್ ಕಾಂಬಿನೇಷನ್‌ನಲ್ಲಿ 2014ರಲ್ಲಿ 'ಮಂಡಾಸುಪಟ್ಟಿ' ಸಿನಿಮಾ ಮಾಡಿದ್ದರು. ಆ ಚಿತ್ರ ಕೂಡ ಬ್ಲಾಕ್‌ ಬಸ್ಟರ್ ಹಿಟ್ ಆಗಿತ್ತು. ಅಚ್ಚರಿ ಎಂದರೆ, ಆ ಸಿನಿಮಾದಲ್ಲಿ ನಟಿಸುವುದಕ್ಕೂ ಅನೇಕರು ನಟರು ಹಿಂದೇಟು ಹಾಕಿದ್ದರಂತೆ. ಕೊನೆಗೆ ವಿಷ್ಣುಗೆ ಅವಕಾಶ ಸಿಕ್ಕಿದ್ದರಿಂದ ಅವರಿಗೆ ಯಶಸ್ಸು ಸಿಕ್ಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌