ಆ್ಯಪ್ನಗರ

ತೆಲುಗಿನ ಖ್ಯಾತ ಪೋಷಕ ನಟ ನರ್ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು

ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದ ನರ್ಸಿಂಗ್ ಯಾದವ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಸಂಜೆ ಅವರು ಮನೆಯಲ್ಲಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದರು. ರಾಮ್ ಗೋಪಾಲ್ ವರ್ಮಾ ಸಿನಿಮಾಗಳಲ್ಲಿ ಖಾಯಂ ಆಗಿ ಕಾಣಿಸುತ್ತಿದ್ದರು ನರ್ಸಿಂಗ್ ಯಾದವ್.

Vijaya Karnataka Web 10 Apr 2020, 3:04 pm

ತೆಲುಗು ಚಿತ್ರರಂಗದ ಖ್ಯಾತ ಪೋಷಕ ನಟ ನರ್ಸಿಂಗ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ (ಏಪ್ರಿಲ್ 9) ಸಂಜೆ ಪ್ರಜ್ಞೆ ತಪ್ಪಿಬಿದ್ದ ಅವರನ್ನು ಹೈದರಾಬಾದಿನ ಸೋಮಾಜಿಗೂಡದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web ನರ್ಸಿಂಗ್ ಯಾದವ್


ಇದುವರೆಗೂ ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನರ್ಸಿಂಗ್ ಯಾದವ್ ಅಭಿನಯಿಸಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ ಎಂದಿವೆ ಮೂಲಗಳು.

ಗುರುವಾರ ಸಂಜೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅವರನ್ನು ಪತ್ನಿ ಚೈತ್ರಾ ಯಾದವ್ ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ನರ್ಸಿಂಗ್ ಯಾದವ್ ವೆಂಟಿಲೇಟರ್ ನಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನರ್ಸಿಂಗ್ ಯಾದವ್ ಪೋಷಿಸಿರುವ ಬಹುತೇಕ ಪಾತ್ರಗಳು ಖಳನಟನಾದರೂ ಅವು ತಮಾಷೆಯಿಂದ ಕೂಡಿರುತ್ತಿದ್ದವು.

ಕಿಲ್ಲರ್ ವೆಂಕಟೇಶ್ ಅನಾರೋಗ್ಯ; ದರ್ಶನ್‌ ನಂತರ ಧನಸಹಾಯ ಮಾಡಿದ ನಟ ಸೃಜನ್ ಲೋಕೇಶ್

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾಗಳಲ್ಲಿ ನರ್ಸಿಂಗ್ ಯಾದವ್ ಖಾಯಂ ಆಗಿ ಕಾಣಿಸುತ್ತಿದ್ದರು. ಮೆಟ್ಟಿಲಿಂದ ಇಳಿಯಬೇಕಾದರೆ ತಲೆಗೆ ತಗುಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಪ್ರಜ್ಞೆ ತಪ್ಪಿದೆ ಎಂದಿವೆ ಟಾಲಿವುಡ್ ಮೂಲಗಳು.

ಆದರೆ ಅವರ ಪತ್ನಿ ಚೈತ್ರಾ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಹಲವಾರು ದಿನಗಳಿಂದ ತಮ್ಮ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು ನಿಯತವಾಗಿ ಡಯಾಲಿಸಿಸ್‌ಗೂ ಒಳಗಾಗುತ್ತಿದ್ದಾರೆ ಎಂದಿದ್ದಾರೆ.

ಹಿರಿಯ ನಟ ಕಿಲ್ಲರ್‌ ವೆಂಕಟೇಶ್‌ ಸ್ಥಿತಿ ಗಂಭೀರ! ಪ್ರಾಣ ಉಳಿಸಲು ಹೋರಾಡುತ್ತಿರುವ 'ನವರಸ ನಾಯಕ' ಜಗ್ಗೇಶ್‌

ವಿಜಯ್ ನಿರ್ಮಲಾ ನಿರ್ದೇಶನದ ಹೇಮ ಹೇಮೀಲು ಸಿನಿಮಾ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದ ನರ್ಸಿಂಗ್ ಯಾದವ್ ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌