‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿತ್ತು. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್ಗೆ ನಾಮನಿರ್ದೇಶನ ಮಾಡಲಾಗಿತ್ತು. 2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳ ಪೈಕಿ ಪ್ರತಿಭಾವಂತರನ್ನು ಆಯ್ಕೆ ಮಾಡುವ ಸದಾವಕಾಶವನ್ನು ಓದುಗರಿಗೆ ‘ವಿಜಯ ಕರ್ನಾಟಕ ವೆಬ್’ ಒದಗಿಸಿತ್ತು. ಇದೀಗ ‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ ಮುಕ್ತಾಯಗೊಂಡಿದೆ. ಜನವರಿ 15ರವರೆಗೆ ವೋಟ್ ಮಾಡಲು ಸಿನಿ ಪ್ರಿಯರಿಗೆ ಅವಕಾಶ ನೀಡಲಾಗಿತ್ತು. ಈಗ ವೋಟಿಂಗ್ ಲೈನ್ಸ್ ಕ್ಲೋಸ್ ಆಗಿದ್ದು, ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ವಿಜೇತರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಮಯ ಬಂದಿದೆ. ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ‘ಅತ್ಯುತ್ತಮ ಓಟಿಟಿ ಸಿನಿಮಾ’ ಪ್ರಶಸ್ತಿ ‘ರತ್ನನ್ ಪ್ರಪಂಚ’ ಸಿನಿಮಾ ಪಾಲಾಗಿದೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ರತ್ನನ್ ಪ್ರಪಂಚ’ಗೆ ಮೆಚ್ಚುಗೆಯ ಸುರಿಮಳೆ
ಅತ್ಯುತ್ತಮ ಓಟಿಟಿ ಸಿನಿಮಾ - ರತ್ನನ್ ಪ್ರಪಂಚ
ಕಳೆದ ವರ್ಷ.. ಅಂದ್ರೆ 2021ರಲ್ಲಿ ಡಾಲಿ ಧನಂಜಯ, ಉಮಾಶ್ರೀ, ಅನು ಪ್ರಭಾಕರ್, ರವಿಶಂಕರ್ ಗೌಡ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರ ನೇರವಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ರೋಹಿತ್ ಪದಕಿ ನಿರ್ದೇಶನದ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಮ್ಮ-ಮಗನ ಅನುಬಂಧವನ್ನು ಸಾರುವ ‘ರತ್ನನ್ ಪ್ರಪಂಚ’ ಚಿತ್ರ ಹೆಂಗಳೆಯರ ಮನಗೆದ್ದಿತ್ತು. ಇದೀಗ 'ವಿಜಯ ಕರ್ನಾಟಕ ವೆಬ್' ವತಿಯಿಂದ ನಡೆಸಿದ 'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲೂ ‘ಅತ್ಯುತ್ತಮ ಓಟಿಟಿ’ ವಿಭಾಗದಲ್ಲಿ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ಅತೀ ಹೆಚ್ಚು ಮತಗಳು ಲಭ್ಯವಾಗಿವೆ. ಹೀಗಾಗಿ ರತ್ನನ್ ಪ್ರಪಂಚ ಚಿತ್ರ ‘ಅತ್ಯುತ್ತಮ ಓಟಿಟಿ ಸಿನಿಮಾ’ ಪ್ರಶಸ್ತಿಗೆ ಭಾಜನವಾಗಿದೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ಉಮಾಶ್ರೀಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ
ಪೈಪೋಟಿ ನೀಡಿದ ಚಿತ್ರಗಳು ಯಾವುವು?
'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲಿ ಅತ್ಯುತ್ತಮ ಓಟಿಟಿ ಸಿನಿಮಾ ವಿಭಾಗದಲ್ಲಿ ‘ರತ್ನನ್ ಪ್ರಪಂಚ’ ಜೊತೆಗೆ ‘ಜೈ ಭೀಮ್’, ‘ಇಕ್ಕಟ್’, '1980', 'ಟಕ್ ಜಗದೀಶ್' ಚಿತ್ರಗಳು ನಾಮನಿರ್ದೇಶನಗೊಂಡಿದ್ದವು.
'ವಿಕ ವೆಬ್ ಸಿನಿಮಾ ಅವಾರ್ಡ್ಸ್-2021'; 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ಮುಡಿಗೇರಿಸಿಕೊಂಡ 'ಯುವರತ್ನ'
ವೋಟಿಂಗ್ನಲ್ಲಿ ಅಂತಿಮವಾಗಿ ‘ರತ್ನನ್ ಪ್ರಪಂಚ’ ಚಿತ್ರಕ್ಕೆ 78% ವೋಟ್ಸ್ ಬಿದ್ದಿವೆ. ಜೈ ಭೀಮ್ ಚಿತ್ರಕ್ಕೆ 18%, ಇಕ್ಕಟ್ ಸಿನಿಮಾಗೆ 2%, 1980 ಚಿತ್ರಕ್ಕೆ 1% ಮತ್ತು ಟಕ್ ಜಗದೀಶ್ ಚಿತ್ರಕ್ಕೆ 1% ವೋಟ್ಸ್ ಸಿಕ್ಕಿವೆ. ಹೀಗಾಗಿ, ಅತಿ ಹೆಚ್ಚು ಮತಗಳನ್ನು ಪಡೆದ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ‘ಅತ್ಯುತ್ತಮ ಓಟಿಟಿ ಸಿನಿಮಾ’ ಪ್ರಶಸ್ತಿ ಸಿಕ್ಕಿದೆ.
'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ 'ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021' ಘೋಷಿಸಲಾಗಿದೆ.