‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿತ್ತು. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್ಗೆ ನಾಮನಿರ್ದೇಶನ ಮಾಡಲಾಗಿತ್ತು. 2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳ ಪೈಕಿ ಪ್ರತಿಭಾವಂತರನ್ನು ಆಯ್ಕೆ ಮಾಡುವ ಸದಾವಕಾಶವನ್ನು ಓದುಗರಿಗೆ ‘ವಿಜಯ ಕರ್ನಾಟಕ ವೆಬ್’ ಒದಗಿಸಿತ್ತು. ಇದೀಗ ‘ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್’ ಮುಕ್ತಾಯಗೊಂಡಿದೆ. ಜನವರಿ 15ರವರೆಗೆ ವೋಟ್ ಮಾಡಲು ಸಿನಿ ಪ್ರಿಯರಿಗೆ ಅವಕಾಶ ನೀಡಲಾಗಿತ್ತು. ಈಗ ವೋಟಿಂಗ್ ಲೈನ್ಸ್ ಕ್ಲೋಸ್ ಆಗಿದ್ದು, ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ವಿಜೇತರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಮಯ ಬಂದಿದೆ. ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ‘ಅತ್ಯುತ್ತಮ ಹಾಸ್ಯ ನಟ’ ಪ್ರಶಸ್ತಿಗೆ ‘ಸಖತ್’, ‘ಯುವರತ್ನ’ ಮತ್ತು ‘ಪ್ರೇಮಂ ಪೂಜ್ಯಂ’ ಚಿತ್ರಗಳಲ್ಲಿ ಭರ್ಜರಿ ಕಾಮಿಡಿ ಕಿಕ್ ನೀಡಿದ್ದ ಸಾಧು ಕೋಕಿಲ ಆಯ್ಕೆಯಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್: ನಿಮ್ಮ ಪ್ರಕಾರ ಅತ್ಯುತ್ತಮ ಹಾಸ್ಯ ನಟ ಯಾರು?
ಅತ್ಯುತ್ತಮ ಹಾಸ್ಯ ನಟ - ಸಾಧು ಕೋಕಿಲ
2021ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್’, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’, ಲವ್ಲಿ ಸ್ಟಾರ್ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾಗಳು ತೆರೆಕಂಡಿದ್ದವು. ಈ ಚಿತ್ರಗಳಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಿದ್ದವರು ಕಾಮಿಡಿ ಕಿಂಗ್ ಸಾಧು ಕೋಕಿಲ. ನಟ ಸಾಧು ಕೋಕಿಲ ಅವರ ಕಾಮಿಡಿ ಕಚಗುಳಿ ಸಿನಿ ಪ್ರಿಯರಿಗೆ ಇಷ್ಟವಾಗಿತ್ತು. 'ವಿಜಯ ಕರ್ನಾಟಕ ವೆಬ್' ವತಿಯಿಂದ ನಡೆಸಿದ 'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲೂ ‘ಅತ್ಯುತ್ತಮ ಹಾಸ್ಯ ನಟ’ ವಿಭಾಗದಲ್ಲಿ ಸಾಧು ಕೋಕಿಲ ಅವರಿಗೆ ಅತೀ ಹೆಚ್ಚು ಮತಗಳು ಲಭ್ಯವಾಗಿವೆ. ಹೀಗಾಗಿ ಸಾಧು ಕೋಕಿಲ ‘ಅತ್ಯುತ್ತಮ ಹಾಸ್ಯ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
'ವಿಕ ವೆಬ್ ಸಿನಿಮಾ ಅವಾರ್ಡ್ಸ್-2021'; ಪುನೀತ್ ರಾಜ್ಕುಮಾರ್ 'ಅತ್ಯುತ್ತಮ ನಟ'
ಯಾರೆಲ್ಲಾ ನಾಮನಿರ್ದೇಶನಗೊಂಡಿದ್ದರು..?
'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲಿ ಅತ್ಯುತ್ತಮ ಹಾಸ್ಯ ನಟ ವಿಭಾಗದಲ್ಲಿ ಸಾಧು ಕೋಕಿಲ ಜೊತೆಗೆ ಧರ್ಮಣ್ಣ ಕಡೂರು, ಚಿಕ್ಕಣ್ಣ, ರವಿಶಂಕರ್, ರಜನಿಕಾಂತ್ ನಾಮನಿರ್ದೇಶನಗೊಂಡಿದ್ದರು.
'ವಿಕ ವೆಬ್ ಸಿನಿಮಾ ಅವಾರ್ಡ್ಸ್-2021'; 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ಮುಡಿಗೇರಿಸಿಕೊಂಡ 'ಯುವರತ್ನ'
ವೋಟಿಂಗ್ನಲ್ಲಿ ಅಂತಿಮವಾಗಿ ಸಾಧು ಕೋಕಿಲ ಅವರಿಗೆ 52% ವೋಟ್ಸ್ ಬಿದ್ದಿವೆ. ಧರ್ಮಣ್ಣ ಕಡೂರು ಅವರಿಗೆ 25%, ಚಿಕ್ಕಣ್ಣಗೆ 17%, ರವಿಶಂಕರ್ಗೆ 5% ಮತ್ತು ರಜನಿಕಾಂತ್ಗೆ 1% ವೋಟ್ಸ್ ಲಭಿಸಿವೆ. ಹೀಗಾಗಿ, ಅತಿ ಹೆಚ್ಚು ಮತಗಳನ್ನು ಪಡೆದ ಸಾಧು ಕೋಕಿಲ ಅವರಿಗೆ ‘ಅತ್ಯುತ್ತಮ ಹಾಸ್ಯ ನಟ’ ಪ್ರಶಸ್ತಿ ಸಿಕ್ಕಿದೆ.
'ಸ್ಯಾಂಡಲ್ವುಡ್ ಚಿತ್ರೋತ್ಸವ ಆನ್ಲೈನ್ ಪೋಲ್'ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ 'ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021' ಘೋಷಿಸಲಾಗಿದೆ.