ಆ್ಯಪ್ನಗರ

ಅಮ್ಮ-ಮಗನನ್ನು ಒಂದು ಮಾಡಿದ 'ಮಠ' ಗುರುಪ್ರಸಾದ್! ಜನ್ಮದಿನದಂದು ಪುಣ್ಯದ ಕೆಲಸ

ನಿರ್ದೇಶಕ ಗುರುಪ್ರಸಾದ್ ಇತ್ತೀಚಿಗೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಆದರೆ, ಕೇಕ್‌ ಕತ್ತರಿಸಿ, ಸಂಭ್ರಮಾಚರಣೆ ಮಾಡಿ ಅಲ್ಲ. ಬದಲಿಗೆ ಒಂದು ಅರ್ಥಪೂರ್ಣ ಕೆಲ ಮಾಡಿದ್ದಾರೆ.

Vijaya Karnataka Web 9 Nov 2019, 12:44 pm
ನಿರ್ದೇಶಕ 'ಮಠ' ಗುರುಪ್ರಸಾದ್ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದವರು. ಸದ್ಯ ಅವರೀಗ 'ರಂಗನಾಯಕ' ಸಿನಿಮಾ ಘೋಷಣೆ ಮಾಡುವುದರೊಂದಿಗೆ ಐದನೇ ಬಾರಿಗೆ 'ನವರಸ ನಾಯಕ' ಜಗ್ಗೇಶ್‌ ಅವರೊಂದಿಗೆ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಅವರ (ನ.2) ಜನ್ಮದಿನವಿತ್ತು. ಆ ಸಲುವಾಗಿ ಅವರೊಂದು ಮಹತ್ತರವಾದ ಕೆಲಸ ಮಾಡಿದ್ದಾರೆ.
Vijaya Karnataka Web ಗುರುಪ್ರಸಾದ್


ಆರಂಭದಲ್ಲೇ ಜಗ್ಗೇಶ್ 'ರಂಗನಾಯಕ'ನಿಗೆ ಟೈಟಲ್ ಕಿರಿಕ್!! ಏನಿದು ಹೊಸ ವಿವಾದ?

ಹೌದು, ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಗುರುಪ್ರಸಾದ್ ಅಂದುಕೊಂಡಿದ್ದರು. ಆ ಸಯಮಕ್ಕೆ ಸರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅವಧಿ ಮುಗಿದರೂ, ದಂಡ ಕಟ್ಟಲಾಗದೆ ಇನ್ನೂ ಮೂರು ವರ್ಷ ಜೈಲಿನಲ್ಲಿ ಕಳೆಯಬೇಕಾದ ಅನಿವಾರ್ಯತೆಯಲ್ಲಿ ಕೈದಿಯೊಬ್ಬರು ಇದ್ದಾರೆ. ಆ ಕೈದಿಯ ತಾಯಿ ಮಗನಿಗಾಗಿ ಹಂಬಲಿಸುತ್ತಿದ್ದಾರೆ ಎಂಬ ಮಾಹಿತಿ ಅವರಿಗೆ ತಿಳಿಯಿತು. ಕೂಡಲೇ ಕಾನೂನು ತಜ್ಞರೊಂದಿಗೆ ಮಾತನಾಡಿ, ದಂಡದ ಮೊತ್ತವನ್ನು ಪಾವತಿಸಿ, ಆತನಿಗೆ ಬಿಡುಗಡೆಯ ಭಾಗ್ಯ ನೀಡಿದ್ದಾರೆ ಗುರುಪ್ರಸಾದ್.‌ ಜತೆಗೆ ತಾಯಿ-ಮಗನನ್ನು ಒಂದು ಮಾಡಿದ್ದಾರೆ.


'ಮೊದಲಿನಿಂದಲೂ ಬರ್ತ್‌ಡೇಯನ್ನು ಭಿನ್ನವಾಗಿ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ಪರಪ್ಪನ ಅಗ್ರಹಾರದ ಈ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತು. ಹಾಗಾಗಿ, ಆತನನ್ನು ಬಿಡುಗಡೆ ಮಾಡಿಸುವ ಬಗ್ಗೆ ಯೋಚಿಸಿದೆವು. ಆತ ಹೊರಬಂದ ಮೇಲೆ ನಾವೇ ಒಂದು ಕೆಲಸ ನೀಡಿ, ಹೊಸ ಜೀವನ ನೀಡುವ ಕುರಿತು ಚಿಂತಿಸಿದೆವು. ಈ ಬಗ್ಗೆ ನಮ್ಮ ಚಿತ್ರದ ನಿರ್ಮಾಪಕ ವಿಖ್ಯಾತ್ ಮತ್ತು ಶಶಿಧರ್ ಬಳಿ ಮಾತನಾಡಿದೆವು. ಎಲ್ಲರ ಪ್ರಯತ್ನದಿಂದ ಅಮ್ಮ-ಮಗನನ್ನು ಒಂದು ಮಾಡಿದ್ದೇವೆ. ಒಂದು ಸಾತ್ವಿಕ ಆನಂದ ನಮಗಿದೆ. ಜೈಲಿನ ಸಿಬ್ಬಂದಿಗಳಿಗೂ ನಾವು ಅಭಿನಂದನೆ ಸಲ್ಲಿಸುತ್ತೇನೆ' ಎಂದು ಮಾಹಿತಿ ನೀಡಿದ್ದಾರೆ ಗುರುಪ್ರಸಾದ್‌.


ಜೈಲಿನಿಂದ ಆತ ಹೊರಬರುವಾದ ಅವರ ತಾಯಿ ಅಲ್ಲಿಯೇ ಇದ್ದರು. ಆದರೆ, ಈ ವಿಚಾರವನ್ನು ಗುರುಪ್ರಸಾದ್ ಹೇಳುವುದಿಲ್ಲ. ಆತ 'ಸಾರ್ ನಮ್ಮ ತಾಯಿಗೊಂದು ಫೋನ್‌ ಮಾಡಿಕೊಡಿ' ಎಂದರು ಗುರುಪ್ರಸಾದ್ ಮಾಡಿಕೊಡುವುದಿಲ್ಲ. ಕೊನೆಗೆ ದೂರದಲ್ಲಿದ್ದ ತಾಯಿಯನ್ನು ತೋರಿಸುತ್ತಾರೆ. 'ಅಮ್ಮ-ಮಗ ಭೇಟಿಯಾದ ಸಂದರ್ಭ ನೋಡಿದಾಗ, ಹಸು-ಕರು ಒಂದಾದಾಗ ಯಾವ ರೀತಿ ಭಾವ ಇರುತ್ತದೋ, ಅಂಥದ್ದೊಂದು ಕ್ಷಣವನ್ನು ನಾನಲ್ಲಿ ಕಂಡೆ. ಒಬ್ಬ ರೈಟರ್ ಆಗಿ, ನಿರ್ದೇಶಕನಾಗಿ, ಮನುಷ್ಯನಾಗಿ ಆ ಅನುಭವನ್ನು ಅನಂದಿಸಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ಅವರು. ಹಾಗಂತ, ಇದು 'ರಂಗನಾಯಕ' ಪ್ರಚಾರಕ್ಕಾಗಲಿ ಮಾಡಿರುವುದಲ್ಲ ಎಂಬುದನ್ನು ಸ್ಟಷ್ಟಪಡಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌