ಆ್ಯಪ್ನಗರ

ಮುದ್ದು ಮುದ್ದಾಗಿ ಹಾಡುತ್ತಿರುವ ಯಶ್‌-ರಾಧಿಕಾ ಪುತ್ರಿ ಆಯ್ರಾ! ವಿಡಿಯೋ ವೈರಲ್‌

ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿಗಳಾದ ರಾಧಿಕಾ ಪಂಡಿತ್‌ ಮತ್ತು ಯಶ್‌ ಮಗಳು ಆಯ್ರಾ ಸೋಶಿಯಲ್‌ ಮೀಡಿಯಾದಲ್ಲಿ ತುಂಬ ಫೇಮಸ್‌. ಆ ಪುಟಾಣಿಯ ಹೊಸದೊಂದು ವಿಡಿಯೋ ಸಖತ್‌ ವೈರಲ್‌ ಆಗಿದೆ.

Vijaya Karnataka Web 19 Oct 2020, 1:45 pm
ನಟಿ ರಾಧಿಕಾ ಪಂಡಿತ್‌ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಅವರು ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಶೇರ್‌ ಮಾಡುತ್ತಾರೆ. ಅದರಲ್ಲೂ ಪುಟಾಣಿ ಆಯ್ರಾ ವಿಡಿಯೋಗಳು ಅಭಿಮಾನಿಗಳ ಗಮನ ಸೆಳೆಯುತ್ತವೆ. ಈಗ ಹೊಸದೊಂದು ವಿಡಿಯೋ ಮೂಲಕ ಆಯ್ರಾ ಮಿಂಚುತ್ತಿದ್ದಾಳೆ.
Vijaya Karnataka Web ಆಯ್ರಾ ಯಶ್‌


ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? 'ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ...' ಭಜನೆಯನ್ನು ತುಂಬ ಕ್ಯೂಟ್‌ ಆಗಿ ಹಾಡಿದ್ದಾಳೆ ಆಯ್ರಾ. 'ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ. ನಾದ ಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆ..' ಎಂಬ ಸಾಲುಗಳನ್ನು ತನ್ನ ತೊದಲು ನುಡಿಗಳಿಂದ ಆಯ್ರಾ ಹಾಡಿರುವುದು ಎಲ್ಲರಿಗೂ ಇಷ್ಟ ಆಗಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

'ಈಗ ಅವಳು ಇನ್ನೂ ಚೆನ್ನಾಗಿ ಹಾಡುತ್ತಾಳೆ. ಇದನ್ನು ರೆಕಾರ್ಡ್‌ ಮಾಡಿದ್ದು ಜೂನ್‌ ತಿಂಗಳಲ್ಲಿ. ನಮ್ಮ ಮನೆಯಲ್ಲಿ ಲೆಜೆಂಡ್‌ ಪಂಡಿತ್‌ ಭೀಮಸೇನ್‌ ಜೋಷಿ ಅವರ ಅತಿ ಕಿರಿಯ ಅಭಿಮಾನಿ ಇವಳು. ಈ ಹಾಡಿನೊಂದಿಗೆ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯ ಕೋರುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್‌. ಒಂದು ದಿನದೊಳಗೆ ಈ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

also read: ಫಾರ್ಮ್‌ಹೌಸ್‌ನಲ್ಲಿ ಮುದ್ದಿನ ಕರುವಿಗೆ ಬಾಳೆ ಹಣ್ಣು ತಿನ್ನಿಸಿದ ಯಶ್ ಮಗಳು ಆಯ್ರಾ

ಹಾಗಂತ ಈ ಭಜನೆಯನ್ನು ಯಶ್‌ ಅಥವಾ ರಾಧಿಕಾ ಅವರು ಆಯ್ರಾಗೆ ಹೇಳಿಕೊಟ್ಟಿಲ್ಲ. ಬದಲಿಗೆ, ರಾಧಿಕಾ ಅವರ ತಂದೆ ಕಲಿಸಿಕೊಟ್ಟಿರುವುದಂತೆ. ಕೆಲವೇ ದಿನಗಳ ಹಿಂದೆ ಯಶ್‌ ಅವರು ಪುತ್ರ ಯಥರ್ವ್‌ಗೆ 'ಜಾನಿ ಜಾನಿ ಯೆಸ್‌ ಪಪ್ಪಾ..' ರೈಮ್ಸ್‌ ಹೇಳಿಕೊಡುತ್ತಿರುವ ವಿಡಿಯೋ ಕೂಡ ಇದೇ ರೀತಿ ವೈರಲ್‌ ಆಗಿತ್ತು. ಒಟ್ಟಾರೆ ಲಾಕ್‌ಡೌನ್‌ನಲ್ಲಿ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆದಿರುವ ಯಶ್‌ ಈಗ 'ಕೆಜಿಎಫ್‌: ಚಾಪ್ಟರ್‌ 2' ಸಿನಿಮಾದ ಶೂಟಿಂಗ್‌ ಸಲುವಾಗಿ ಹೈದರಾಬಾದ್‌ಗೆ ತೆರಳಿದ್ದಾರೆ.

also read: ಯಶ್‌-ರಾಧಿಕಾ ಪಂಡಿತ್‌ ಪುತ್ರನಿಗೆ ನಾಮಕರಣ; ಮುದ್ದಿನ ಮಗನಿಗೆ ಮುದ್ದಾದ ಹೆಸರಿಟ್ಟ 'ರಾಕಿಂಗ್' ಜೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌