ಆ್ಯಪ್ನಗರ

ಮತ್ತೊಂದು ಇತಿಹಾಸ ಬರೆದ ರಾಕಿಭಾಯ್ ಯಶ್ ; ಜೈ ಎಂದ ನೆಟ್ಟಿಗರು

ಯಶ್ ಅವರಿಗೆ ರಾಕಿಭಾಯ್ ಎಂಬ ಹೆಸರು ತಂದುಕೊಟ್ಟಿದ್ದು 'ಕೆಜಿಎಫ್' ಸಿನಿಮಾ. ಮೇಕಿಂಗ್, ಕಥೆ, ಸಂಗೀತ, ಡೈಲಾಗ್ ಎಲ್ಲ ವಿಚಾರದಲ್ಲೂ ಈ ಚಿತ್ರ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಭಾರೀ ಪ್ರಮಾಣದ ಜನಪ್ರಿಯತೆ ಗಳಿಸಿತ್ತು. ಈಗ ಈ ಸಿನಿಮಾ ವಿಚಾರವಾಗಿ ಮತ್ತೊಂದು ದಾಖಲೆ ಆಗಿದೆ. ಅದು ಎಲ್ಲ ಸಿನಿಮಾವನ್ನು ಬೀಟ್ ಮಾಡಿರೋದು ಅಚ್ಚರಿಯ ಸುದ್ದಿ.

Vijaya Karnataka Web 9 Dec 2019, 10:51 am
ಯಶ್ ಅವರಿಗೆ ರಾಕಿಭಾಯ್ ಎಂಬ ಹೆಸರು ತಂದುಕೊಟ್ಟಿದ್ದು 'ಕೆಜಿಎಫ್' ಸಿನಿಮಾ. ಮೇಕಿಂಗ್, ಕಥೆ, ಸಂಗೀತ, ಡೈಲಾಗ್ ಎಲ್ಲ ವಿಚಾರದಲ್ಲೂ ಈ ಚಿತ್ರ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಭಾರೀ ಪ್ರಮಾಣದ ಜನಪ್ರಿಯತೆ ಗಳಿಸಿತ್ತು. ಈಗ ಈ ಸಿನಿಮಾ ವಿಚಾರವಾಗಿ ಮತ್ತೊಂದು ದಾಖಲೆ ಆಗಿದೆ. ಅದು ಎಲ್ಲ ಸಿನಿಮಾವನ್ನು ಬೀಟ್ ಮಾಡಿರೋದು ಅಚ್ಚರಿಯ ಸುದ್ದಿ.
Vijaya Karnataka Web yash starrer kgf chapter 1 movie got highest views on amazon prime
ಮತ್ತೊಂದು ಇತಿಹಾಸ ಬರೆದ ರಾಕಿಭಾಯ್ ಯಶ್ ; ಜೈ ಎಂದ ನೆಟ್ಟಿಗರು


ಅಮೆಜಾನ್ ಪ್ರೈಮ್‌ನಲ್ಲಿ 'ಕೆಜಿಎಫ್‌' ಚಿತ್ರದ್ದೇ ಸೌಂಡ್

2018ರಲ್ಲಿ ತೆರೆಕಂಡ 'ಕೆಜಿಎಫ್' ಚಿತ್ರ ಕನ್ನಡ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಗಲ್ಲಾಪೆಟ್ಟಿಗೆಯಲ್ಲೂ ಕೂಡ ದೊಡ್ಡ ಸೌಂಡ್ ಮಾಡಿದೆ. ಅಮೆಜಾನ್ ಪ್ರೈಮ್‌ನಲ್ಲಿ ಅತ್ಯಧಿಕ ವೀಕ್ಷಣೆ ಹೊಂದಿ 'ಕೆಜಿಎಫ್' ಥಿಯೇಟರ್ ಮಾತ್ರವಲ್ಲದೆ ಒಟಿಟಿ (ಓವರ್ ದಿ ಟಾಪ್) ಪ್ಲ್ಯಾಟ್‌ಫಾರ್ಮ್‌ನಲ್ಲೂ ಜಯಭೇರಿ ಗಳಿಸಿದೆ.

ಬೆಂಗಳೂರಿಗೆ ಯಶ್ ನೋಡಲು ಬರ್ತಾರೆ ಹೊರ ರಾಜ್ಯದವರು

ಯಶ್ ಅವರಿಗೆ ಈಗ ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಅವರನ್ನು ಭೇಟಿಯಾಗುವುದೇ ಇದಕ್ಕೆ ದೊಡ್ಡ ಸಾಕ್ಷಿ. ಇತ್ತೀಚೆಗಷ್ಟೇ ಫಿಲಿಪೈನ್ಸ್‌ನಿಂದ ಅಭಿಮಾನಿಯೊಬ್ಬರು ಬೆಂಗಳೂರಿಗೆ ಬಂದು ಯಶ್ ಅವರನ್ನು ಮೀಟ್ ಮಾಡಿದ್ದರು.

'ಕೆಜಿಎಫ್‌'ನಿಂದ ಬದಲಾದ ಯಶ್ ಲೈಫ್

'ಕೆಜಿಎಫ್' ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಈ ಚಿತ್ರ ಡಬ್ ಆಗಿತ್ತು. ಥಿಯೇಟರ್‌ನಲ್ಲಿಯೂ ಕೂಡ ಈ ಚಿತ್ರ ಒಳ್ಳೆಯ ಮೆಚ್ಚುಗೆ ಗಳಿಸಿತ್ತು, ತುಂಬ ದೊಡ್ಡ ಮಟ್ಟದಲ್ಲಿ ಕ್ರೇಜ್, ಟ್ರೆಂಡ್ ಹುಟ್ಟುಹಾಕಿತ್ತು. ತದನಂತರದಲ್ಲಿ ಅಮೆಜಾನ್‌ನಲ್ಲೂ ಕೂಡ ದೊಡ್ಡ ಮಟ್ಟದ ಸೌಂಡ್ ಮಾಡಿದೆ. ಒಟಿಟಿ ಪ್ಲ್ಯಾಟ್‌ಫಾರ್ಮ್‌ನಲ್ಲೂ ಕೂಡ ಸಿನಮಾ ವೀಕ್ಷಿಸುವ ಪ್ರೇಕ್ಷಕರು ಕೂಡ 'ಸಲಾಮ್ ರಾಕಿ ಭಾಯ್' ಎಂದಿದ್ದಾರೆ. 2019ರಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ಎಲ್ಲ ಸಿನಿಮಾಗಳ ಪೈಕಿ 'ಕೆಜಿಎಫ್'ಚಿತ್ರ ಅತಿ ಹೆಚ್ಚು ವೀಕ್ಷಣೆ ಪಡೆದಿದೆ. ಈ ಚಿತ್ರದ ನಂತರದಲ್ಲಿ ಯಶ್‌ ಅವರಿಗೆ ಸಾಕಷ್ಟು ಪ್ರಶಸ್ತಿ, ಬಿರುದುಗಳು ಸಿಕ್ಕಿವೆ.

2020ರಲ್ಲಿ ತೆರೆಕಾಣಲಿದೆ ಕೆಜಿಎಫ್ ಸಿನಿಮಾ

'ಕೆಜಿಎಫ್‌' ಸಿನಿಮಾದಿಂದ ಯಶ್ ಅವರ ಜನಪ್ರಿಯತೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಈಗ ಆ ಸಿನಿಮಾದ ಪಾರ್ಟ್‌ 2ಕ್ಕೆ ಸಿದ್ಧತೆಗಳು ನಡೆಯುತ್ತಿವೆ. 2020ರ ಮಧ್ಯಭಾಗದಲ್ಲಿ ಆ ಸಿನಿಮಾ ತೆರೆಕಾಣಬಹುದು. ಪಂಚಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಯಶ್ ತಮ್ಮ ಮುಡಿಗೇರಿಸಿಕೊಂಡಿದ್ದರು.

ದೇಶದ ಅತ್ಯಂತ ಪ್ರಭಾವಿ ಯುವರಕರ ಪಟ್ಟಿಯಲ್ಲಿ ಯಶ್

ಕೆಜಿಎಫ್ ಚಿತ್ರಕ್ಕಾಗಿ ಯಶ್‌ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಅದನ್ನೇ ಮೆಂಟೇನ್‌ ಮಾಡಿಕೊಂಡು ಬಂದಿದ್ದಾರೆ. ಪಾರ್ಟ್‌ 2 ಚಿತ್ರೀಕರಣ ಇರುವುದರಿಂದ ಅದು ಹಾಗೇ ಇದೆ. ಇದೀಗ ಗಡ್ಡವೇ ಒಂದು ಟ್ರೆಂಡ್ ಆಗಿದೆ. ಉದ್ದ ಗಡ್ಡ ಬಿಡುವುದೇ ಒಂದು ಫ್ಯಾಷನ್‌ ಆಗಿದೆ. ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕರ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದೆ. ಇದೇ ವೇಳೆ, ತಮಗೆ ಸ್ಫೂರ್ತಿಯಾದ ಮೂವರು ವ್ಯಕ್ತಿಗಳ ಬಗ್ಗೆ ಯಶ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌