ಆ್ಯಪ್ನಗರ

ಡಾ. ರಾಜ್‌ ಆಡಿ ಬೆಳೆದ ಗಾಜನೂರಿನ ಮನೆಗೆ ಪುನೀತ್‌ ರಾಜ್‌ಕುಮಾರ್‌ ಭೇಟಿ! ಕಾರಣ ಏನು?

ತಮ್ಮ ಹುಟ್ಟೂರು ಗಾಜನೂರಿನ ಬಗ್ಗೆ ಅಣ್ಣಾವ್ರಿಗೆ ಅಪಾರ ಅಭಿಮಾನವಿತ್ತು. ಈಗ ಅದೇ ಗ್ರಾಮಕ್ಕೆ ಪುನೀತ್ ರಾಜ್‌ಕುಮಾರ್‌ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ದಿಢೀರ್‌ ಭೇಟಿ ನೀಡಲು ಕಾರಣವೇನು? ಇಲ್ಲಿದೆ ಮಾಹಿತಿ...

Vijaya Karnataka Web 24 Dec 2020, 11:08 pm
'ಪವರ್‌ ಸ್ಟಾರ್‌' ಪುನೀತ್‌ ರಾಜ್‌ಕುಮಾರ್‌ ಅವರು ಕಳೆದೆರಡು ದಿನಗಳಿಂದ ಹಳ್ಳಿಯ ಪರಿಸರದಲ್ಲಿ ವಿಹರಿಸುತ್ತಿದ್ದಾರೆ. ಈ ವೇಳೆ ಅವರು ಡಾ. ರಾಜ್‌ಕುಮಾರ್‌ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರು ಆಡಿ ಬೆಳೆದ ಆ ಹಳ್ಳಿ ಮನೆಯ ತುಂಬೆಲ್ಲ ಓಡಾಡಿದ್ದಾರೆ ಪುನೀತ್‌. ಆ ಕ್ಷಣದ ಫೋಟೋಗಳು ಈಗ ವೈರಲ್‌ ಆಗುತ್ತಿವೆ.
Vijaya Karnataka Web ಪುನೀತ್‌ ರಾಜ್‌ಕುಮಾರ್‌


ಡಾ. ರಾಜ್‌ಕುಮಾರ್‌ ಅವರು ಎಷ್ಟೇ ದೊಡ್ಡ ಸ್ಟಾರ್‌ ಆಗಿದ್ದರೂ ತಮ್ಮ ಹುಟ್ಟೂರನ್ನು ಮರೆತಿರಲಿಲ್ಲ. ಸಂದರ್ಭ ಬಂದಾಗಲೆಲ್ಲ ಗಾಜನೂರು ಬಗ್ಗೆ ಅವರು ಮಾತನಾಡುತ್ತಿದ್ದರು. ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಆ ಮೂಲಕ ಹುಟ್ಟೂರಿನ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದರು. ಈಗ ಅದೇ ಊರಿಗೆ ಭೇಟಿ ನೀಡಿರುವ ಪುನೀತ್‌ ರಾಜ್‌ಕುಮಾರ್‌ ಅವರು ಖುಷಿಖುಷಿಯಾಗಿ ಕೆಲವು ಸಮಯ ಕಳೆದಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಪುನೀತ್‌ ರಾಜ್‌ಕುಮಾರ್‌ ಅವರು ಸಾಕ್ಷ್ಯಚಿತ್ರವೊಂದರ ಸಲುವಾಗಿ ದೊಡ್ಡ ಗಾಜನೂರಿಗೆ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ಇದರ ಚಿತ್ರೀಕರಣ ನಡೆಯುತ್ತಿದೆ. ವನ್ಯಜೀವಿಗಳ ಕುರಿತು ಈ ಸಾಕ್ಷ್ಯಚಿತ್ರ ತಯಾರಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ವೇಳೆ ಬಿಡುವು ಮಾಡಿಕೊಂಡು ತಮ್ಮ ತಂದೆಯ ಮನೆಗೆ 'ಪವರ್‌ ಸ್ಟಾರ್‌' ಭೇಟಿ ನೀಡಿದ್ದಾರೆ.

also read: ಅಣ್ಣಾವ್ರು ದೇವರನ್ನು ನೋಡಿದ ಆ ಕ್ಷಣ! ಡಾ. ರಾಜ್‌ಕುಮಾರ್ ಅವರ ಅಪರೂಪದ ವಿಡಿಯೋ ವೈರಲ್

ಡಾ. ರಾಜ್‌ ಓಡಾಡಿದ ಜಾಗಗಳನ್ನೆಲ್ಲ ಪುನೀತ್‌ ಮತ್ತೊಮ್ಮೆ ಕಣ್ತುಂಬಿಕೊಂಡರು. ಹಳೇ ಮನೆಯ ತುಂಬೆಲ್ಲ ಓಡಾಡಿ ಸಂಭ್ರಮಿಸಿದರು. ಈ ವೇಳೆ ಅವರ ಅತ್ತೆ ನಾಗಮ್ಮ (ಡಾ. ರಾಜ್‌ ತಂಗಿ) ಕೂಡ ಜೊತೆಗಿದ್ದರು. ಗಾಜನೂರಿಗೆ ಬಂದಾಗ ಅಣ್ಣಾವ್ರು ಕುಳಿತುಕೊಳ್ಳುತ್ತಿದ್ದ ಆಲದ ಮರದ ಬಳಿಗೂ ತೆರಳಿದ ಪುನೀತ್‌, ಅಲ್ಲಿ ಕೆಲವು ಸಮಯ ಕಳೆದರು. ತಂದೆಯ ನೆನಪುಗಳನ್ನು ಮೆಲುಕು ಹಾಕಿದರು.

also read: ಡಾ. ರಾಜ್‌ಕುಮಾರ್‌ ಬಗ್ಗೆ ಹಲವರಿಗೆ ತಿಳಿದಿರದ ವಿಷಯ ಬಹಿರಂಗ ಮಾಡಿದ 'ನವರಸ ನಾಯಕ' ಜಗ್ಗೇಶ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌