ಆ್ಯಪ್ನಗರ

ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ ಪುನೀತ್ ಅವರ ಈ ಫೋಟೋ!

ಪುನೀತ್ ರಾಜ್‌ಕುಮಾರ್ ಅವರು ಈ ಲಾಕ್‌ಡೌನ್‌ ಅವಧಿಯಲ್ಲಿ ಗಡ್ಡದ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಅವರ ಲುಕ್ ಕೂಡ ಫ್ಯಾನ್ಸ್‌ಗೆ ಸಖತ್ ಇಷ್ಟವಾಗಿತ್ತು. ಇದೀಗ ಆ ಲುಕ್‌ನ ಮತ್ತೊಂದು ಫೋಟೋ ವೈರಲ್ ಆಗಿದೆ.

Vijaya Karnataka Web 10 Aug 2020, 1:14 pm
'ಪವರ್ ಸ್ಟಾರ್‌' ಪುನೀತ್ ರಾಜ್‌ಕುಮಾರ್‌ ಈ ಲಾಕ್‌ಡೌನ್‌ನಲ್ಲಿ ಗಡ್ಡದ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದರು. ಕೊರೊನಾ ಹಾವಳಿಯಿಂದಾಗಿ ಯಾವುದೇ ಶೂಟಿಂಗ್ ಇರಲಿಲ್ಲ. ಆ ಸಲುವಾಗಿ ಅವರು ಗಡ್ಡ ಬಿಟ್ಟಿದ್ದರು. ಸಾಮಾನ್ಯವಾಗಿ ಅವರು ಕ್ಲೀನ್‌ ಶೇವ್‌ನಲ್ಲೇ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ಗಡ್ಡದ ಲುಕ್‌ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಅದರಲ್ಲೂ ಈಚೆಗೆ ಅವರದ್ದೊಂದು ಫೋಟೋ ಸಖತ್ ವೈರಲ್ ಆಗಿದೆ.
Vijaya Karnataka Web yuvarathnaa actor puneeth rajkumars new beard look photo goes viral
ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ ಪುನೀತ್ ಅವರ ಈ ಫೋಟೋ!


ಹೌದು, ಈಚೆಗೆ ಅಪ್ಪು, ತಮ್ಮ ಸ್ನೇಹಿತರ ಜೊತೆ ಗ್ರೌಂಡ್‌ನಲ್ಲಿ ಆಟ ಆಡುವಾಗ ಛಾಯಾಗ್ರಾಹಕ ಚಂದನ್‌ ಗೌಡ ಒಂದು ಫೋಟೋ ಕ್ಲಿಕ್ಕಿಸಿದ್ದರು. ಇದೀಗ ಆ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ. ಬಿಯರ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಪ್ಪು, ಫುಟ್‌ಬಾಲ್ ಆಡುತ್ತಿದ್ದಾರೆ. ಆಗ ತೆಗೆದಿರುವ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

'ಒಮ್ಮೆಯಾದರೂ, ಈ ಲುಕ್‌ನಲ್ಲಿ ಪುನೀತ್ ತೆರೆಮೇಲೆ ಕಾಣಿಸಿಕೊಳ್ಳಬೇಕು...', 'ಈ ರೀತಿ ಅವರನ್ನು ತೆರೆಮೇಲೆ ನ್ಯಾಚುರಲ್ ಆಗಿ ತೋರಿಸುವುದಕ್ಕೆ ನಮ್ಮ ನಿರ್ದೇಶಕರು ಪ್ಲ್ಯಾನ್ ಮಾಡಬೇಕು..' ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ 'ವೀರ ಕನ್ನಡಿಗ' ಚಿತ್ರದಲ್ಲಿ ಲೈಟ್ ಆಗಿ ಅವರು ಗಡ್ಡ ಬಿಟ್ಟಿದ್ದರು. ಈಚೆಗೆ ಬಂದ 'ರಾಜಕುಮಾರ' ಚಿತ್ರದಲ್ಲೂ ಕೂಡ ಅವರು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದರು.

ಇದೀಗ ಅಪ್ಪು ಬಿಯರ್ಡ್‌ ಲುಕ್ ಸಖತ್ ಟ್ರೆಂಡ್ ಸೃಷ್ಟಿಸಿರುವುದರಿಂದ, ಅದೇ ಲುಕ್‌ನಲ್ಲಿ ಅವರು ತೆರೆಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹಿಂದೆ 'ಯುವರತ್ನ' ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಈ ಬಗ್ಗೆ 'ವಿಜಯ ಕರ್ನಾಟಕ'ದ ಜೊತೆ ಮಾತನಾಡಿದ್ದರು. 'ಪುನೀತ್‌ ಅವರಿಗೆ ಗಡ್ಡ ವಿಭಿನ್ನವಾಗಿ ಕಾಣುತ್ತಿದೆ. ನನ್ನ 'ರಾಜಕುಮಾರ' ಸಿನಿಮಾದಲ್ಲಿ ಎಮೋಷನಲ್‌ ಸೀನ್‌ಗೆ ಸ್ವಲ್ಪ ಗಡ್ಡ ಬಿಡಿಸಿದ್ದೆ. ಈಗಲೂ ಈ ಲುಕ್‌ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಇನ್ನೊಮ್ಮೆ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರು ಓಕೆ ಹೇಳಿ, ನನಗೂ ಓಕೆ ಎನಿಸಿದರೆ ನಮ್ಮ ಚಿತ್ರದ ಇಂಟ್ರಡಕ್ಷನ್‌ ಹಾಡಿನಲ್ಲಿಅವರು ಬಿಯರ್ಡ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ' ಎಂದು ಮಾಹಿತಿ ನೀಡಿದ್ದರು.

ಪುನೀತ್ ರಾಜ್‌ಕುಮಾರ್ ಅವರ ಈ ಸಾಹಸ ನೋಡಿ ಅಭಿಮಾನಿಗಳು ಫಿದಾ!

ಅದೇ ಥರ 'ಜೇಮ್ಸ್' ನಿರ್ದೇಶಕ ಚೇತನ್‌ ಕುಮಾರ್ ಕೂಡ ತಮ್ಮ ಸಿನಿಮಾದಲ್ಲಿ ಈ ಬಿಯರ್ಡ್‌ ಲುಕ್‌ ಬಳಸಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 'ನನ್ನ ಸಿನಿಮಾದಲ್ಲಿ ಪುನೀತ್‌ ಅವರು ಬೇರೆ ಬೇರೆ ಲುಕ್‌ನಲ್ಲಿಇರಲಿದ್ದಾರೆ. ಹಾಗಾಗಿ ಬಿಯರ್ಡ್‌ ಲುಕ್‌ ಕೂಡ ಇರಲಿ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಫೋಟೋ ಶೂಟ್‌ ಮಾಡಿ ಈ ಲುಕ್‌ ಟ್ರೈ ಮಾಡುತ್ತೇವೆ' ಎಂದು ಹೇಳಿದ್ದರು.

ನಿಮ್ಮ ಮನೆಯಲ್ಲಿಯೇ 'ಫ್ರೆಂಚ್ ಬಿರಿಯಾನಿ' ತಿನಿಸಲಿದ್ದಾರೆ ನಟ ಪುನೀತ್‌ ರಾಜ್‌ಕುಮಾರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌