ಆ್ಯಪ್ನಗರ

ನನ್ನಂತಿರುವ ಸೊಸೆಯಂದಿರೇ ಬೇಕು; ರಾಬ್ರಿ ದೇವಿ

ಸೋಸೆಯೆಂದರೆ ಹೇಗಿರಬೇಕು ಎಂಬುದಕ್ಕೆ ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರ ವ್ಯಾಖ್ಯಾನ ನೋಡಿ!

ಎಕನಾಮಿಕ್ ಟೈಮ್ಸ್ 12 Jun 2017, 12:46 pm
ಪಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಪತ್ನಿ ಮಾಜಿ ಸಿಎಂ ರಾಬ್ರಿ ದೇವಿ ತಮ್ಮಿಬ್ಬರು ಗಂಡು ಮಕ್ಕಳಿಗೆ ದೇಸಿ ಹುಡುಗಿಯರನ್ನು ಹುಡುಕುತ್ತಿದ್ದಾರೆ.
Vijaya Karnataka Web no mall going girls for my sons former bihar chief minister rabri devi
ನನ್ನಂತಿರುವ ಸೊಸೆಯಂದಿರೇ ಬೇಕು; ರಾಬ್ರಿ ದೇವಿ


ಬಿಹಾರ ಸರಕಾರದಲ್ಲಿ ಸಚಿವರಾಗಿರುವ ತೇಜ್ ಪ್ರತಾಪ್ ಮತ್ತು ತೇಜಸ್ವಿ ಪ್ರಸಾದ್ ಯಾದವ್ ಅವರಿಗೆ ವಿವಾಹ ಮಾಡಲು ನಿರ್ಧರಿಸಿರುವ ಲಾಲು ದಂಪತಿ ದೇಸಿ ವಧುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರ 70ನೇ ಜನ್ಮ ದಿನಾಚರಣೆಯನ್ನು ತಮ್ಮ ನಿವಾಸದಲ್ಲಿ ಭಾನುವಾರ ಆಚರಿಸಿಕೊಂಡರು. ಈ ಸಂದರ್ಭ ಮಕ್ಕಳ ಮದುವೆ ಬಗ್ಗೆ ಮಾತನಾಡಿದ ರಾಬ್ರಿ ದೇವಿ, ಸಿನಿಮಾ, ಮಾಲ್ ಸುತ್ತುವ ಫ್ಯಾಶನ್ ಹುಡುಗಿಯರು ಬೇಡ, ಜವಾಬ್ದಾರಿಯಿಂದ ಮನೆ ನಡೆಸಿಕೊಂಡು ಹೋಗುವ, ಹಿರಿಯವರನ್ನು ಗೌರವಿಸುವ ಉತ್ತಮ ಮನೆತನದ ಹುಡುಗಿಯರು ಬೇಕು. ನನ್ನಂತೆ ಮನೆಯ ಹೊರಗೂ ಜವಾಬ್ದಾರಿ ಹೊತ್ತುಕೊಳ್ಳುವ ಸೊಸೆಯಂದಿರು ಬೇಕು. ಮುಖ್ಯವಾಗಿ ತೇಜ್ ಪ್ರತಾಪ್‌ ತುಂಬ ಧಾರ್ಮಿಕ ಮನೋಭಾವದವನಾಗಿದ್ದು, ಸುಸಂಸ್ಕೃತ ಹಿನ್ನೆಲೆ ಇರುವ ಹುಡುಗಿಯೇ ಬೇಕು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌