ಆ್ಯಪ್ನಗರ

ಆಂಧ್ರದಲ್ಲಿ ರಾಮ್ ಗೋಪಾಲ್ ವರ್ಮಾರನ್ನು ಪೊಲೀಸರು ತಡೆದಿದ್ದೇಕೆ?

ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ನಿರ್ದೇಶನದ 'ಲಕ್ಷ್ಮೀಸ್ ಎನ್‌ಟಿಆರ್' ಸಿನಿಮಾ, ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದು, ಇದು ರಾಜಕೀಯವಾಗಿ ಹಲವು ಜನರ ಗಮನ ಸೆಳೆದಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಚುನಾವಣೆ ವೇಳೆಯಲ್ಲಿ ನಿಷೇಧಿಸಬೇಕೆಂದು ಹಲವರು ಪಟ್ಟು ಹಿಡಿದಿದ್ದರು.

TIMESOFINDIA.COM 29 Apr 2019, 12:31 pm
ಸೌತ್ ಇಂಡಿಯನ್ ಮೂಲದ ಬಾಲಿವುಡ್‌ನಲ್ಲೂ ಮಿಂಚು ಹರಿಸಿರುವ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರನ್ನು ಹೈದರಾಬಾದ್‌ನಲ್ಲಿ ತಡೆದು ನಿಲ್ಲಿಸಿಲಾಗಿದೆ. ಈ ಬಗ್ಗೆ ಪೊಲೀಸರ ಮೇಲೆ ಸಾಕಷ್ಟು ಕೋಪಗೊಂಡಿರುವ ನಿರ್ದೇಶಕ ವರ್ಮಾ ಅವರು ಟ್ವೀಟ್ ಮೂಲಕ ತಮ್ಮ ಕೋಪವನ್ನು ಹೊರಹಾಕಿದ್ದಾರೆ.
Vijaya Karnataka Web varma2904


ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ನಿರ್ದೇಶನದ 'ಲಕ್ಷ್ಮೀಸ್ ಎನ್‌ಟಿಆರ್' ಸಿನಿಮಾ, ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದು, ಇದು ರಾಜಕೀಯವಾಗಿ ಹಲವು ಜನರ ಗಮನ ಸೆಳೆದಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಚುನಾವಣೆ ವೇಳೆಯಲ್ಲಿ ನಿಷೇಧಿಸಬೇಕೆಂದು ಹಲವರು ಪಟ್ಟು ಹಿಡಿದಿದ್ದರು. ಆದರೆ ಈ ಚಿತ್ರವು ತೆಲಂಗಾಣದಲ್ಲಿ ಬಿಡುಗಡೆಯಾಗಿ ಹಲವು ವಿವಾದಗಳನ್ನು ಹುಟ್ಟುಹಾಕಿದೆ.

'ಲಕ್ಷ್ಮೀಸ್ ಎನ್‌ಟಿಆರ್' ಚಿತ್ರವು ತೆಲುಗಿನ ಪ್ರಸಿದ್ಧ ಸ್ಟಾರ್ ಎನ್‌ಟಿ ರಾಮರಾವ್ ಅವರ ಜೀವನ ಚರಿತ್ರೆಯ ಭಾಗವಾಗಿರುವ ಕಾರಣಕ್ಕೆ ಸಹಜವಾಗಿಯೇ ಅದು ಹಲವು ರಾಜಕೀಯ ಸಂಗತಿಗಳೊಂದಿಗೆ ಬೆಸೆದುಕೊಂಡಿದೆ. ಈ ಕಾರಣಕ್ಕೆ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹಾಗೂ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ 'ಲಕ್ಷ್ಮೀಸ್ ಎನ್‌ಟಿಆರ್' ಚಿತ್ರವು ಬಿಡುಗಡೆಯ ಬಳಿಕ ಮತ್ತೆ ವಿವಾದಕ್ಕೆ ತುತ್ತಾಗುತ್ತಿದೆ. ಅಷ್ಟೇ ಅಲ್ಲ, ರಾಜಕೀಯ ಕಾರಣಕ್ಕೆ ಈ ಚಿತ್ರವು ಮತ್ತೆ ಮತ್ತೆ ಟಾರ್ಗೆಟ್ ಆಗುತ್ತಿದೆ.

ಇದೀಗ, ಈ ಚಿತ್ರದ 'ಪ್ರೆಸ್ ಮೀಟ್‌'ಅನ್ನು 'ಲಕ್ಷ್ಮೀಸ್ ಎನ್‌ಟಿಆರ್' ಸಿನಿಮಾ ಡೈರೆಕ್ಟರ್ ಹೈದರಾಬಾದ್‌ ಹೊಟೆಲ್‌ ಒಂದರಲ್ಲಿ ನಿಗದಿ ಪಡಿಸಿದ್ದರು. ಆದರೆ, ಪೊಲೀಸ್ ಪೋರ್ಸ್ ವರ್ಮಾ ಅವರು ಪ್ರೆಸ್ ಮೀಟ್ ಮಾಡದಂತೆ ಅವರನ್ನು ಹೊಟೆಲ್‌ ಹೊರಗಡೆಯೇ ತಡೆದಿದೆ. ಈ ಕಾರಣಕ್ಕೆ ಕೋಪಗೊಂಡಿರುವ ವರ್ಮಾ ಅವರು "ಆಂಧ್ರದಲ್ಲಿ ಪ್ರಜಾಪ್ರಭುತ್ವ ಕೆಲಸ ಮಾಡುತ್ತಿಲ್ಲ' ಎಂದು ಹೇಳುವ ಮೂಲಕ ತಮ್ಮ ಭಾರೀ ಆಕ್ರೋಶವನ್ನು ಹೊರಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌