ಆ್ಯಪ್ನಗರ

ಇಂಥ ನೀಚ ಸಿಎಂ ಬೆಳೆಸಿದ್ದೇ ಅಪರಾಧ: ಎಚ್‌ಡಿಡಿ

ಇಂದು ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಸಿಎಂ ಕಾಂಗ್ರೆಸ್‌ನ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ.

Vijaya Karnataka Web 10 Feb 2018, 6:37 pm
ಬೆಂಗಳೂರು: ಇಂಥ ನೀಚ ಮುಖ್ಯಮಂತ್ರಿಯನ್ನು ಬೆಳೆಸಿ ನಾನು ಜೀವನದಲ್ಲಿ ಮಹಾ ಅಪರಾಧ ಮಾಡಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌. ಡಿ. ದೇವೇಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Vijaya Karnataka Web h d deve gowda remarks neech cm siddaramaiah
ಇಂಥ ನೀಚ ಸಿಎಂ ಬೆಳೆಸಿದ್ದೇ ಅಪರಾಧ: ಎಚ್‌ಡಿಡಿ


ಕೆಂಗೇರಿ ಉಪನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಅವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಇಂದು ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಸಿಎಂ ಕಾಂಗ್ರೆಸ್‌ನ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೀಳು ಮಟ್ಟದ ರಾಜಕಾರಣಿ ಎಂದು ಹೀಗಳೆದಿದ್ದಾರೆ.



ಈ ಹಿಂದೆರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ನಿಮಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಈಗ ಮುಖ್ಯಮಂತ್ರಿ ಆದ ಬಳಿಕ ಶ್ರವಣ ಬೆಳಗೊಳದ ಕಾರ್ಯಕ್ರಮದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತದೆ ಎಂದು ನಾನು ನೋಡುತ್ತೇನೆ. ನೀವು ಎನೇನು ಮಾಡಿದ್ದೀರಿ ಎಂಬುದನ್ನು ದಾಖಲೆ ಸಮೇತ ಮಾತನಾಡುತ್ತೇನೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತ ಇದ್ದೀರಿ. ಇನ್ನೇನು ನಿಮ್ಮ ಟೈಂ ಮುಗಿಯುತ್ತ ಬಂದಿದೆ ಅಲ್ಲವೇ? ಇನ್ನು 120 ದಿನ ಮಾತ್ರ ತಾನೆ? ಎಂದರು.

ಸಿದ್ದರಾಮಯ್ಯ ಕೈ ಎತ್ತೆತ್ತಿ ಭಾಷಣ ಮಾಡುವುದನ್ನ ನಾನೂ ನೋಡಿದ್ದೇನೆ. ನನಗೂ ಡ್ಯಾನ್ಸ್ ಮಾಡಲು ಬರುತ್ತದೆ. ಸಿದ್ದರಾಮಯ್ಯ ಅವರೇ ನೀವು ಒಬ್ಬರೇ ದೊಡ್ಡ ಸತ್ಯವಂತರೇ? ಏನು ಇವರ ಮನೆ ಪಕ್ಕ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದಾರೆಯೇ? ಎಂದು ಸಿಎಂ ವಿರುದ್ಧ ಮಾಜಿ ಪ್ರಧಾನಿ ಚಾಟಿ ಬೀಸಿದರು.

ಬೆಂಗಳೂರಿನ ಅಭಿವೃದ್ಧಿಗೆ ನಾನು ಮುಖ್ಯ ಮಂತ್ರಿಯಾಗಿ ಮತ್ತು ಪ್ರದಾನ ಮಂತ್ರಿಯಾಗಿ ಏನು ಕೊಡುಗೆ ಕೊಟ್ಟಿದೀನಿ ಅಂತ ಬಿಡಿ ಬಿಡಿಯಾಗಿ ಹೇಳುತ್ತೇನೆ. ಕಾವೇರಿ ನೀರು ತರಲು ರೂ. 1400 ಕೋಟಿ ಮತ್ತು ಕೃಷ್ಣ ನದಿಗೆ ರೂ. 1000 ಕೋಟಿ ಕೊಟ್ಟಿದೀನಿ. ವೀರಪ್ಪ ಮೊಯಿಲಿ ಅವರು ಬಿಟ್ಟು ಹೋಗಿದ್ದ ರೂ. 120 ಕೋಟಿ ಸಾಲವನ್ನು ನಾನು ತೀರಿಸಿದೆ. ಬೆಂಗಳೂರಿನಲ್ಲಿ ಹೊರ ವರ್ತುಲ ರಸ್ತೆಗಳು, ಮೇಲ್ಸೇತುವೆಗಳು, ಐಟಿ ಬಿಟಿಗೆ ನೆರವುಗಳು, ಇತ್ಯಾದಿ ಅಭಿವೃದ್ಧಿ ಪೂರಕ ಕೆಲಸಗಳನ್ನು ಮಾಡಿದ್ದು ಇದೇ ದೇವೇಗೌಡ. ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾರಾದರೂ ಒಬ್ಬ ಸಾಮಾಜಿಕ ನ್ಯಾಯ ಒದಗಿಸಿದ್ದರೆ ಅದು ಇದೇ ನಿಮ್ಮ ದೇವೇಗೌಡ. ಎಲ್ಲರಿಗೂ ನ್ಯಾಯ ಒದಗಿಸಬೇಕೆಂದು ಹಗಲಿರುಳು ದುಡಿದೆ. ಇಂದು ಬೆಂಗಳೂರಿನಲ್ಲಿ ಒಬ್ಬ ಹಿಂದುಳಿದ ಮಹಿಳೆ ಒಬ್ಬರು ಉಪ ಮೇಯರ್ ಆಗಿದ್ದಾರೆ. ಅದಕ್ಕೆ ಹೆಮ್ಮೆಯಿದೆ ಎಂದರು.

ಈ ಬಾರಿ ನಿಮ್ಮ ಮನೆ ಮಗ ಜವರಾಯಿ ಗೌಡನನ್ನು ಗೆಲ್ಲಿಸಿ ಕೊಡಿ, ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೀನಿ ಎಂದು ಮಾಜಿ ಪ್ರಧಾನಿ ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ