ಆ್ಯಪ್ನಗರ

ಹೆಚ್‌ಡಿಕೆ ಸಿಎಂ ಆಗಬೇಕು: ಕಾಶೆಂಪೂರ

ರೈತರ ಬಗ್ಗೆ ಕಾಳಜಿ ವಹಿಸಲು ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಆಗಬೇಕು. ಹೆಚ್‌ಡಿಕೆ ಅವರನ್ನು ಸಿಎಂ ಮಾಡುವುದು ನಮ್ಮ ಗುರಿ ಎಂದು ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.

ವಿಕ ಸುದ್ದಿಲೋಕ 23 Mar 2017, 4:28 pm
ಬೆಂಗಳೂರು: ರೈತರ ಬಗ್ಗೆ ಕಾಳಜಿ ವಹಿಸಲು ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಆಗಬೇಕು. ಇಳಿವಯಸ್ಸಿನಲ್ಲಿ ಪಕ್ಷ ಕಟ್ಟಲು ದೇವೇಗೌಡರು ಪಣತೊಟ್ಟಿದ್ದಾರೆ. ಹೆಚ್‌ಡಿಕೆ ಅವರನ್ನು ಸಿಎಂ ಮಾಡುವುದು ನಮ್ಮ ಗುರಿ ಎಂದು ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.
Vijaya Karnataka Web hdk will become cm kashempur
ಹೆಚ್‌ಡಿಕೆ ಸಿಎಂ ಆಗಬೇಕು: ಕಾಶೆಂಪೂರ


ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ, ರಾಜ್ಯದಲ್ಲೂ ಕೂಡ ರೈತರ ಸಾಲ ಮನ್ನಾ ಆಗಿಲ್ಲ ಎಂದು ದೂರಿದರು.

ಮನೆಯ ಸ್ತ್ರೀಯರಿಗೆ ಬಿಜೆಪಿಯವರು ಸ್ವಾತಂತ್ರ‌ ನೀಡದೆ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ‌ಇಂಥವರು ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡುತ್ತಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಟೀಕಿಸಿದರು. ಜನಸಾಮಾನ್ಯರ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಹಕ್ಕನ್ನು ಪ್ರಶ್ನಿಸಿದರೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಬಿಜೆಪಿ ಹೇಳುವುದೇ ಒಂದು ಮಾಡುವುದು ಇನ್ನೊಂದು ಎಂದರು.

ಕಾರ್ಯಕ್ರಮ ಶಿಸ್ತಿನಿಂದ ನಡೆಸಲು ದೇವೇಗೌಡರು ಖಡಕ್ ಸೂಚನೆ ನೀಡಿದರು. ಭಾಷಣ ಮಾಡುವಾಗ ಹಿಂಬದಿಯಲ್ಲಿ ಜನ ನಿಲ್ಲುವಂತಿಲ್ಲ. ಕುಮಾರಸ್ವಾಮಿ ಹೊರತುಪಡಿಸಿ ಉಳಿದವರು 5 ನಿಮಿಷ ಮಾತ್ರ ಭಾಷಣ ಮಾಡಬೇಕು ಎಂದು ದೇವೇಗೌಡ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ