Please enable javascript.ಸತ್ವವುಳ್ಳ ಹಾಗಲಕಾಯಿ - ಸತ್ವವುಳ್ಳ ಹಾಗಲಕಾಯಿ - Vijay Karnataka

ಸತ್ವವುಳ್ಳ ಹಾಗಲಕಾಯಿ

Vijaya Karnataka Web 5 Dec 2015, 4:54 am
Subscribe

ಹಾಗಲಕಾಯಿ ಎಂದೊಡನೆ ಕೆಲವರ ಮುಖ ಕಿವುಚಿದಂತಾಗುತ್ತದೆ. ಆದರೆ ಇದರ ಔಷಧೀಯ ಗುಣಗಳನ್ನು ಬಲ್ಲವರಿಗೆ ಇದೊಂದು ಸಂಜೀವಿನಿ.

ಸತ್ವವುಳ್ಳ ಹಾಗಲಕಾಯಿ
ಹಾಗಲಕಾಯಿ ಎಂದೊಡನೆ ಕೆಲವರ ಮುಖ ಕಿವುಚಿದಂತಾಗುತ್ತದೆ. ಆದರೆ ಇದರ ಔಷಧೀಯ ಗುಣಗಳನ್ನು ಬಲ್ಲವರಿಗೆ ಇದೊಂದು ಸಂಜೀವಿನಿ.

ಪ್ರತಿದಿನ ಬೆಳಗ್ಗೆ 30ಮಿ.ಲೀ.ಅಥವಾ ಉಪಾಹಾರ ಮತ್ತು ಊಟಕ್ಕೂ ಮುನ್ನ ಮೂರು ಹೊತ್ತು 10ಮಿ.ಲೀ. ಹಾಗಲಕಾಯಿ ರಸವನ್ನು ಸೇವಿಸುವುದರಿಂದ ಮತ್ತು ಹಾಗಲಕಾಯಿಯ ತುಂಡುಗಳನ್ನು ಉಪ್ಪು ಸವರಿಕೊಂಡು ತಿನ್ನುವುದರಿಂದ ಮಧುಮೇಹ ರೋಗವನ್ನು ನಿಯಂತ್ರಿಸಬಹುದು. ಮೊಸರಿನೊಂದಿಗೆ ಹಾಗಲಕಾಯಿಯನ್ನು ಸೇವಿಸಬಹುದು. ಮಧುಮೇಹದಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ಬಹುಪಾಲು ಕಡಿಮೆಯಾಗುತ್ತದೆ.

ಹಾಗಲಗಿಡದ ಬಳ್ಳಿಯ ಎಲೆಗಳಿಂದ ರಸ ತೆಗೆದು 10ಮಿ.ಲೀ.ಅನ್ನು ಕೆಲವು ದಿನಗಳವರೆಗೆ ಪ್ರತಿನಿತ್ಯ ತೆಗೆದುಕೊಳ್ಳಬೇಕು ಅಥವಾ ಹಾಗಲ ಎಲೆಗಳನ್ನು ನುಣ್ಣಗೆ ಅರೆದು ರಸ ಹಿಂಡದೆಯೇ ಹಾಗೆಯೇ ಸೇವಿಸಬೇಕು. ಹಸಿ ಹಾಗಲಕಾಯಿ ಇಲ್ಲವೇ ಎಲೆಯ ರಸವನ್ನು ಸೇವಿಸುವುದರಿಂದ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಗುಣವಾಗುತ್ತವೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ