ಆ್ಯಪ್ನಗರ

IBPS SO ಸ್ಕೋರ್‌ ಕಾರ್ಡ್‌ ರಿಲೀಸ್.. ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ

ಐಬಿಪಿಎಸ್‌ ಎಸ್‌ಒ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯ ಪರೀಕ್ಷೆ ಜೊತೆಗೆ ಸಂದರ್ಶನವು ಇರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

Vijaya Karnataka Web 13 Feb 2020, 1:33 pm
ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸನೆಲ್ ಸೆಲೆಕ್ಷನ್, ಐಬಿಪಿಎಸ್ ಎಸ್‌ಒ 2020 ಸ್ಕೋರ್‌ ಕಾರ್ಡ್ ಬಿಡುಗಡೆ ಮಾಡಿದೆ. ಸ್ಪೆಷಲಿಸ್ಟ್ ಆಫೀಸರ್ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ಕೋರ್‌ ಕಾರ್ಡ್‌ ಚೆಕ್‌ ಮಾಡಬಹುದು. ಮುಖ್ಯ ಪರೀಕ್ಷೆ ಫಲಿತಾಂಶವನ್ನು ಸಂಸ್ಥೆಯು ಫೆಬ್ರವರಿ 6, 2020 ರಂದು ಪ್ರಕಟಿಸಿತ್ತು.
Vijaya Karnataka Web ibps so score card 2020
ibps so result 2020


ಐಬಿಪಿಎಸ್ ಸ್ಪೆಷಲಿಸ್ಟ್ ಆಫೀಸರ್ ಮುಖ್ಯ ಪರೀಕ್ಷೆಯನ್ನು ಜನವರಿ 25, 2020 ರಂದು ದೇಶದಾದ್ಯಂತ ಬಿಡುಗಡೆ ಮಾಡಲಾಗಿತ್ತು. 60 ಅಂಕಗಳಿಗೆ, 60 ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗಿತ್ತು. ರಾಜ್‌ಭಾಷಾ ಅಧಿಕಾರಿ ಹುದ್ದೆಗೆ 60 ನಿಮಿಷ ಮತ್ತು ಇತರೆ ಹುದ್ದೆಗಳಿಗೆ 45 ನಿಮಿಷ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗಿನ ಸಿಂಪಲ್‌ ಸ್ಟೆಪ್ಟ್‌ ಫಾಲೋ ಮಾಡುವ ಮೂಲಕ ಸ್ಕೋರ್‌ ಕಾರ್ಡ್ ಚೆಕ್‌ ಮಾಡಿ.

IBPS SO 2020 ಸ್ಕೋರ್‌ ಕಾರ್ಡ್‌ ಚೆಕ್‌ ಮಾಡುವುದು ಹೇಗೆ?
- ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಅಫೀಶಿಯಲ್ ವೆಬ್‌ ibps.in ಗೆ ಭೇಟಿ ನೀಡಿ.
- 'IBPS SO 2020 Score card' ಗೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
- ಹೊಸ ಪೇಜ್‌ ಓಪನ್ ಆಗುತ್ತದೆ. ಲಾಗಿನ್‌ ಡೀಟೇಲ್ಸ್‌ ನೀಡಿ ಎಂಟರ್ ಮಾಡಿ.
- ಸ್ಕೋರ್‌ ಕಾರ್ಡ್‌ ಪ್ರದರ್ಶನವಾಗುತ್ತದೆ.
- ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಮುಂದಿನ ಅಗತ್ಯಗಳಿಗೆ ಹಾರ್ಡ್‌ ಕಾಪಿಯನ್ನು ಇಟ್ಟುಕೊಳ್ಳಿ.

KPSC Jobs: 600 ಅಸಿಸ್ಟಂಟ್ ಇಂಜಿನಿಯರ್, 325 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅಧಿಸೂಚನೆ

ಐಬಿಪಿಎಸ್‌ ಎಸ್‌ಒ ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯ ಪರೀಕ್ಷೆ ಜೊತೆಗೆ ಸಂದರ್ಶನವು ಇರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಇಂಟರ್‌ವ್ಯೂ ದಿನಾಂಕ ಶೀಘ್ರದಲ್ಲಿ ಪ್ರಕಟಗೊಳ್ಳಲಿದೆ.

310 ಪ್ರಾಂಶುಪಾಲರು, 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಧಿಸೂಚನೆ

ಐಬಿಪಿಎಸ್‌ 163 ಸ್ಪೆಷಲಿಸ್ಟ್‌ ಪೋಸ್ಟ್‌ಗಳನ್ನು ನೇಮಕಾತಿ ಮಾಡಲಿದೆ. ಈ ಪ್ರಕ್ರಿಯೆಯು ಏಪ್ರಿಲ್ 2020 ರ ಅಂತ್ಯಕ್ಕೆ ಮುಗಿಯಲಿದೆ. ಇತರೆ ಹೆಚ್ಚಿನ ಮಾಹಿತಿಗಳನ್ನು ಐಬಿಪಿಎಸ್‌ ವೆಬ್‌ನಲ್ಲಿ ಚೆಕ್‌ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ