ಆ್ಯಪ್ನಗರ

ಎಸ್‌ಬಿಐ ಪಿಒ ಮೈನ್ಸ್‌ 2019: 2,000 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಶೀಘ್ರದಲ್ಲೇ ಅಡ್ಮಿಟ್‌ ಕಾರ್ಡ್‌

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಖಾಲಿಯಿರುವ 2,000 ಪ್ರೊಬೆಷರಿ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದುದೆ. ಮೊದಲ ಹಂತದ ಪ್ರಿಲಿಮಿನರಿ ಪರೀಕ್ಷೆ ಅಂತ್ಯವಾಗಿದ್ದು, ಇದೀಗ ಮೈನ್ಸ್‌ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

Times Now 4 Jul 2019, 3:06 pm
ಹೊಸದಿಲ್ಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಶೀಘ್ರದಲ್ಲೇ ಎಸ್‌ಬಿಐ ಪಿಒ ಮೈನ್ಸ್‌ 2019 ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಿದೆ. ಖಾಲಿಯಿರುವ 2,000 ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಜುಲೈ 20, 2019ರಂದು ಮೈನ್ಸ್‌ ಪರೀಕ್ಷೆ ನಡೆಯಲಿದೆ.
Vijaya Karnataka Web state bank of india will release sbi po mains 2019 admit card soon check here
ಎಸ್‌ಬಿಐ ಪಿಒ ಮೈನ್ಸ್‌ 2019: 2,000 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಶೀಘ್ರದಲ್ಲೇ ಅಡ್ಮಿಟ್‌ ಕಾರ್ಡ್‌


ಎಸ್‌ಬಿಐ ಪಿಒ ಮೈನ್‌ 2019 ಪ್ರವೇಶ ಪತ್ರ ಈ ವಾರಂತ್ಯಕ್ಕೆ ಅಥವಾ ಮುಂದಿನ ವಾರದ ಆರಂಭಿಕ ದಿನಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜುಲೈ 8, 2019ಕ್ಕೆ ಬಹುತೇಕ ಪ್ರವೇಶ ಪತ್ರವನ್ನು ಎಸ್‌ಬಿಐ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.

ಎಸ್‌ಬಿಐ ಪಿಒ ಮೈನ್ಸ್‌ 2019 ಪ್ರವೇಶ ಪತ್ರ ಬಿಡುಗಡೆಯ ಅಪ್‌ಡೇಟ್‌ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ ಚೆಕ್‌ ಮಾಡುತ್ತಿರಿ.

ಎಸ್‌ಬಿಐ ಪಿಒ ಮೈನ್‌ 2019 ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ?
ಎಸ್‌ಬಿಐ ನೇಮಕಾತಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್ ವಿಳಾಸ: sbi.co.in/careers
ಹೋಮ್‌ಪೇಜ್‌ನಲ್ಲಿ ನೇಮಕಾತಿ ವಿಭಾಗವನ್ನು ಹುಡುಕಿ, ಪ್ರೊಬೆಷನರಿ ಆಫೀಸರ್ಸ್‌ ನೇಮಕಾತಿ ವಿಭಾಗವನ್ನು ಆಯ್ಕೆ ಮಾಡಿ.
ಪ್ರವೇಶ ಪತ್ರ ಬಿಡುಗಡೆಯಾದ ತಕ್ಷಣ ಅದರ ಲಿಂಕ್‌ಅನ್ನು ಅಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ.

ಎಸ್‌ಬಿಐ ಪಿಒ ಪ್ರಿಲಿಮಿನರಿ ಪರೀಕ್ಷೆಯು ಜೂನ್‌ 8 & 9, 2019ಕ್ಕೆ ನಡೆದಿತ್ತು. ಏಪ್ರಿಲ್‌ 1, 2019ಕ್ಕೆ ಎಸ್‌ಬಿಐ ಖಾಲಿಯಿರುವ 2,000 ಪ್ರೊಬೆಷನರಿ ಆಫೀಸರ್‌ (ಪಿಒ) ಹುದ್ದೆಗಳಿಗೆ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ