ಆ್ಯಪ್ನಗರ

ಬಿಎಚ್‌ಇಎಲ್‌ನ ಎಂಜಿನಿಯರ್, ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿದೆ ಲಿಂಕ್

ಮೇ 25,2019 ಹಾಗೂ ಮೇ 26,2019ರಂದು ಎರಡು ಶಿಫ್ಟ್‌ಗಳಲ್ಲಿ ಎಂಜಿನಿಯರ್ ಹಾಗೂ ಎಕ್ಸಿಕ್ಯುಟಿವ್ ಹುದ್ದೆಗಳಿಗೆ (ಎಚ್‌ಆರ್‌ ಹಾಗೂ ಫೈನಾನ್ಸ್‌) ಕಂಪ್ಯೂಟರ್‌ ಆಧಾರಿತ ಟೆಸ್ಟ್‌ ಮೋಡ್‌ನಲ್ಲಿ ಎಂಜಿನಿಯರ್ ಟ್ರೈನಿ ಹಾಗೂ ಎಕ್ಸಿಕ್ಯುಟಿವ್ ಟ್ರೈನಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ.

Vijaya Karnataka Web 19 May 2019, 3:53 pm
ಹೊಸದಿಲ್ಲಿ: ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್‌) ಎಂಜಿನಿಯರ್ ಟ್ರೈನಿ ಹಾಗೂ ಎಕ್ಸಿಕ್ಯುಟಿವ್ ಟ್ರೈನಿ ಪ್ರವೇಶ ಪತ್ರ 2019 ಬಿಡುಗಡೆ ಮಾಡಿದೆ. ಬಿಎಚ್‌ಇಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಬಿಡುಗಡೆ ಆಗಿದ್ದು, ಅರ್ಹ ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
Vijaya Karnataka Web bhel screen shot


ಮೇ 25,2019 ಹಾಗೂ ಮೇ 26,2019ರಂದು ಎರಡು ಶಿಫ್ಟ್‌ಗಳಲ್ಲಿ ಎಂಜಿನಿಯರ್ ಹಾಗೂ ಎಕ್ಸಿಕ್ಯುಟಿವ್ ಹುದ್ದೆಗಳಿಗೆ (ಎಚ್‌ಆರ್‌ ಹಾಗೂ ಫೈನಾನ್ಸ್‌) ಕಂಪ್ಯೂಟರ್‌ ಆಧಾರಿತ ಟೆಸ್ಟ್‌ ಮೋಡ್‌ನಲ್ಲಿ ಪರೀಕ್ಷೆ ನಡೆಯಲಿದೆ.

ಇನ್ನು, ಇ - ಪ್ರವೇಶ ಪತ್ರಗಳನ್ನು ಈ ಮೇಲ್ಕಂಡ ಹುದ್ದೆಗಳಿಗೆ ಡೌನ್‌ಲೋಡ್‌ ಮಾಡಿಕೊಳ್ಳಲು ಬಿಎಚ್‌ಇಎಲ್‌ ವೆಬ್‌ಸೈಟ್‌ https://careers.bhel.inನಲ್ಲಿ ಲಿಂಕ್‌ಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಪ್ರವೇಶ ಪತ್ರದಲ್ಲಿ ಎಕ್ಸಾಂ ಅಥವಾ ಪರೀಕ್ಷೆಯ ಕೇಂದ್ರಗಳ ರಿಪೋರ್ಟಿಂಗ್‌ ಟೈಮ್‌ ಬಗ್ಗೆ ಮಾಹಿತಿ ನೀಡಲಾಗಿದೆ. ಮಾನ್ಯವಲ್ಲದ ಪ್ರವೇಶ ಪತ್ರ ಹಾಗೂ ಒರಿಜಿನಲ್‌ ಐಡಿ ಪ್ರೂಫ್‌ ಇಲ್ಲದೆ ಅಭ್ಯರ್ಥಿಗಳು ಯಾವುದೇ ಸಂದರ್ಭದಲ್ಲೂ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಹಾಗಿಲ್ಲ.

ಇನ್ನು, ಅಂಚೆ ಮೂಲಕ ವೈಯಕ್ತಿಕವಾಗಿ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಯಾವುದೇ ಕಾರಣಕ್ಕೂ ಕಳಿಸಲಾಗುವುದಿಲ್ಲ ಎಂದು ಸೂಚನೆ ನೀಡಲಾಗಿದೆ.

ಬಿಎಚ್‌ಇಎಲ್‌ ಎಂಜಿನಿಯರ್ ಟ್ರೈನಿ ಹಾಗೂ ಎಕ್ಸಿಕ್ಯುಟಿವ್ ಟ್ರೈನಿ ಪ್ರವೇಶ ಪತ್ರ 2019 ಡೈರೆಕ್ಟ್ ಲಿಂಕ್‌ ಇಲ್ಲಿದೆ ನೋಡಿ

ಇನ್ನು, ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಯಾವುದಾದರೂ ಸಮಸ್ಯೆಗಳಾದರೆ, ಅರ್ಹ ಅಭ್ಯರ್ಥಿಗಳು bhel.helpdesk2019@gmail.comಗೆ ಇ - ಮೇಲ್‌ ಮಾಡಬಹುದು. ಅಥವಾ ಮೇ 24,2019ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಫೆಸಿಲಿಟೇಶನ್‌ ಕೌಂಟರ್‌ಗೆ ಭೇಟಿ ನೀಡಬಹುದು. https://careers.bhel.in ನಲ್ಲಿ ಫೆಸಿಲಿಟೇಶನ್‌ ಕೌಂಟರ್‌ಗಳ ವಿಳಾಸ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ