ಆ್ಯಪ್ನಗರ

AAI Recruitment 2020: ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ 368 ವಿವಿಧ ಹುದ್ದೆಗಳ ನೇಮಕ

ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾವು, ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಪೋಸ್ಟ್‌ಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು

Vijaya Karnataka Web 27 Nov 2020, 2:36 pm
ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾವು, ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಪೋಸ್ಟ್‌ಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. 2021 ರ ಜನವರಿ 14 ರ ವರೆಗೂ ಅರ್ಜಿ ಸಲ್ಲಿಸಬಹುದು. ಒಟ್ಟು 368 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ.
Vijaya Karnataka Web aai recruitment 2020
aai recruitment 2020


ಹುದ್ದೆಗಳ ವಿವರ
ಮ್ಯಾನೇಜರ್ (ಅಗ್ನಿಶಾಮಕ ಸೇವೆಗಳು)11
ಮ್ಯಾನೇಜರ್ ( ಟೆಕ್ನಿಕಲ್) 2
ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್ ) 264
ಜೂನಿಯರ್ ಎಕ್ಸಿಕ್ಯೂಟಿವ್ ( ಏರ್‌ಪೋರ್ಟ್‌ ಆಪರೇಷನ್ಸ್‌)83
ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್) 8

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 15-12-2020

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 14-01-2021

ಅಮೆಜಾನ್‌ನಿಂದ 10 ಲಕ್ಷ ಉದ್ಯೋಗಾವಕಾಶ

ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್ / ಬಿಎಸ್ಸಿ / ಎಂಬಿಎ ವಿದ್ಯಾರ್ಹತೆಗಳನ್ನು ಪಾಸ್‌ ಮಾಡಿರಬೇಕು.

ವಯೋಮಿತಿ ಅರ್ಹತೆಗಳು

ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 32 ವರ್ಷ, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ 27 ವರ್ಷಗಳನ್ನು ನವೆಂಬರ್ 30, 2020 ಕ್ಕೆ ಮೀರದಂತೆ ನಿಗದಿಪಡಿಸಲಾಗಿದೆ.

ಎನ್‌ಬಿಸಿಸಿ'ಯಲ್ಲಿ 100 ಇಂಜಿನಿಯರ್ ಹುದ್ದೆಗಳ ನೇಮಕ

ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆ / ಸಂದರ್ಶನ / ದೈಹಿಕ ಸಾಮರ್ಥ್ಯ ಪರೀಕ್ಷೆ / ಸಹಿಷ್ಣುತೆ ಪರೀಕ್ಷೆ / ಡ್ರೈವಿಂಗ್ ಟೆಸ್ಟ್ / ಧ್ವನಿ ಪರೀಕ್ಷೆಯನ್ನು ಅಗತ್ಯ ಹುದ್ದೆಗಳಿಗೆ ನಡೆಸಲಾಗುತ್ತದೆ. ಆನ್‌ಲೈನ್‌ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.

ರೈಟ್ಸ್‌ ಲಿಮಿಡೆಟ್‌ನಿಂದ 170 ಇಂಜಿನಿಯರ್ ಹುದ್ದೆಗಳ ನೇಮಕ

ಅಪ್ಲಿಕೇಶನ್‌ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ರೂ.1000, ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳು ರೂ.170 ಅಪ್ಲಿಕೇಶನ್‌ ಶುಲ್ಕ ಪಾವತಿಸಬೇಕು. ಇತರೆ ಹೆಚ್ಚಿನ ಮಾಹಿತಿಗೆ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ನೋಟಿಫಿಕೇಶನ್‌ಗಾಗಿ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.

AAI Recruitment 2020 - Notification

ಉದ್ಯೋಗ ವಿವರ

INR 40000 to 180000 /Month
ಹುದ್ದೆಯ ಹೆಸರುಮ್ಯಾನೇಜರ್, ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕ
ವಿವರಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದಿಂದ ನೇಮಕಾತಿ ಅಧಿಸೂಚನೆ
ಪ್ರಕಟಣೆ ದಿನಾಂಕ2020-11-27
ಕೊನೆ ದಿನಾಂಕ2021-01-14
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಸಾರ್ವಜನಿಕ ವಲಯ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಬಿಇ / ಬಿ.ಟೆಕ್ / ಬಿಎಸ್ಸಿ / ಎಂಬಿಎ
ಕಾರ್ಯಾನುಭವ0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ
ವೆಬ್‌ಸೈಟ್‌ ವಿಳಾಸhttps://www.aai.aero/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸರಾಜೀವ್ ಗಾಂಧಿ ಭವನ
ಸ್ಥಳಸಾಫ್ದಾರ್‌ಜಂಗ್ ಏರ್‌ಪೋರ್ಟ್‌
ಪ್ರದೇಶನವದೆಹಲಿ
ಅಂಚೆ ಸಂಖ್ಯೆ110003
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ