ಆ್ಯಪ್ನಗರ

BARC ನಲ್ಲಿ ಭದ್ರತಾ ಸಹಾಯಕ ಮತ್ತು ರಕ್ಷಕ ಹುದ್ದೆಗಳ ಉದ್ಯೋಗಾವಕಾಶ

BARC Vacancy 2019: ಭಾಭಾ ಆಟೋಮಿಕ್ ರಿಸರ್ಚ್‌ ಕೇಂದ್ರ, ಮುಂಬೈನಲ್ಲಿ ಸೆಕ್ಯೂರಿಟಿ ಆಫೀಸರ್, ಭದ್ರತಾ ರಕ್ಷಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್‌ ಈ ಕೆಳಗಿನಂತಿದೆ.

Vijaya Karnataka Web 18 Nov 2019, 11:56 am

ಮಹಾರಾಷ್ಟ್ರದ ಮುಂಬೈ ಸಮೀಪದ ಟ್ರಾಂಬೆಯಲ್ಲಿರುವ ಭಾಭಾ ಆಟೋಮಿಕ್ ರಿಸರ್ಚ್‌ ಸೆಂಟರ್‌ನಲ್ಲಿ(BARC), ಅಗತ್ಯ ಅಸಿಸ್ಟಂಟ್ ಸೆಕ್ಯುರಿಟಿ ಆಫೀಸರ್‌(ಎ) ಹಾಗೂ ಸೆಕ್ಯುರಿಟಿ ಗಾರ್ಡ್‌ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತರಿಂದ ಅಪ್ಲಿಕೇಶನ್‌ ಆಹ್ವಾನಿಸಲಾಗಿದೆ. BARC ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ.
Vijaya Karnataka Web BARC assistant security officer and security guard recruitment 2019
BARC recruitment 2019


ಹುದ್ದೆಗಳ ವಿವರ

ಭದ್ರತಾ ಸಹಾಯಕ ಅಧಿಕಾರಿಗಳು: 19

ಭದ್ರತಾ ರಕ್ಷಕ ಹುದ್ದೆಗಳು : 73

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 16-11-2019

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 06-12-2019

ಪೋಸ್ಟ್‌ ಮೆಟ್ರಿಕ್ ಹಾಸ್ಟೆಲ್‌ಗಳ ವಾರ್ಡನ್ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ಶೈಕ್ಷಣಿಕ ಅರ್ಹತೆ

- ಭದ್ರತಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.

- ಭದ್ರತಾ ರಕ್ಷಕ ಹುದ್ದೆಗೆ 10 ನೇ ತರಗತಿ ಪಾಸ್ ಮಾಡಿರಬೇಕು.

- ಎರಡು ಹುದ್ದೆಗಳಿಗೂ ಕನಿಷ್ಠ 5 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.

ನೌಕಾಪಡೆಯಲ್ಲಿ ಕೆಡೆಟ್ ಎಂಟ್ರಿ ಸ್ಕೀಮ್‌ನಲ್ಲಿ ಉದ್ಯೋಗಾವಕಾಶ

ಹುದ್ದೆಗಳ ನೇಮಕಾತಿ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ದೈಹಿಕ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಲಿಖಿತ ಪರೀಕ್ಷೆ ನಡೆಸಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ವೇತನ ಶ್ರೇಣಿ

ಭದ್ರತಾ ಸಹಾಯಕ ಅಧಿಕಾರಿಗಳು: ರೂ.35,400 ಜತೆಗೆ ಇತರೆ ಭತ್ಯೆಗಳು.

ಭದ್ರತಾ ರಕ್ಷಕ ಹುದ್ದೆಗಳು : ರೂ.18.000 ಮತ್ತು ಇತರೆ ಭತ್ಯೆಗಳು.

ವಯೋಮಿತಿ

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ.

- ಹಿಂದುಳಿದ ವರ್ಗಗಳು, ಪ.ಜಾತಿ. ಪ.ಪಂಗಡ ಅಭ್ಯರ್ಥಿಗಳಿಗೆ ಜಾತಿವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಭಾರತೀಯ ಸೇನೆಯಲ್ಲಿ ಯುವತಿಯರಿಗೆ ಉದ್ಯೋಗಾವಕಾಶ.. ಅರ್ಜಿ ಆಹ್ವಾನ

ಅರ್ಜಿ ಶುಲ್ಕ

- ಭದ್ರತಾ ಸಹಾಯಕ ಅಧಿಕಾರಿ ಹುದ್ದೆಗೆ ಶುಲ್ಕ ರೂ.150.

- ಭದ್ರತಾ ರಕ್ಷಕ ಹುದ್ದೆಗಳಿಗೆ ರೂ.100.

- ಪ.ಜಾತಿ, ಪ.ಪಂಗಡ ಹುದ್ದೆಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ವಿಧಾನ

ಅರ್ಹತೆಗಳನ್ನು ಪೂರೈಸುವ ಅಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಅಪ್ಲಿಕೇಶನ್‌ ಫಿಲ್‌ ಮಾಡುವ ಮೊದಲು ಇಮೇಲ್‌ ವಿಳಾಸ ನೀಡಿ BARC ಅಧಿಕೃತ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಬೇಕು. ರಿಜಿಸ್ಟ್ರೇಷನ್‌ ಮತ್ತು ಲಾಗಿನ್‌ಗಾಗಿ ಕೆಳಗೆ ಡೈರೆಕ್ಟ್‌ ಲಿಂಕ್‌ ನೀಡಲಾಗಿದೆ.

ನೇಮಕಾತಿ ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ರಿಜಿಸ್ಟ್ರೇಷನ್‌ಗಾಗಿ ಕ್ಲಿಕ್ ಮಾಡಿ

ಲಾಗಿನ್‌ಗಾಗಿ ಕ್ಲಿಕ್ ಮಾಡಿ

ಭಾಭಾ ಅಟೋಮಿಕ್ ರಿಸರ್ಚ್‌ ಸೆಂಟರ್ ವೆಬ್‌ಸೈಟ್‌ಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ