ಆ್ಯಪ್ನಗರ

BEL Jobs 2019: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಉದ್ಯೋಗಾವಕಾಶ

BEL Apprentice Recruitment 2019: ಬಿಇಎಲ್‌ನ ಅಪ್ರೆಂಟಿಸ್ ಹುದ್ದೆಗಳಿಗೆ ಗ್ರಾಜುಯೇಟ್ ಮತ್ತು ಡಿಪ್ಲೊಮ ಟೆಕ್ನೀಷಿಯನ್ ವಿಭಾಗದಲ್ಲಿ ವಿದ್ಯಾರ್ಹತೆ ಪಡೆದವರು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Vijaya Karnataka Web 9 Nov 2019, 2:21 pm

ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಪೋಸ್ಟ್‌ಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಬಿಇಎಲ್‌ನ ಮಚಲಿಪಟ್ಟಣಂ ವಿಭಾಗದಲ್ಲಿ ನೇಮಕ ಮಾಡಲಾಗುತ್ತದೆ.
Vijaya Karnataka Web bel apprentice recruitment 2019 machilipatnam
bel apprentice recruitment 2019 machilipatnam apply online


ಬಿಇಎಲ್‌ನ ಅಪ್ರೆಂಟಿಸ್ ಹುದ್ದೆಗಳಿಗೆ ಗ್ರಾಜುಯೇಟ್ ಮತ್ತು ಡಿಪ್ಲೊಮ ಟೆಕ್ನೀಷಿಯನ್ ವಿಭಾಗದಲ್ಲಿ ವಿದ್ಯಾರ್ಹತೆ ಪಡೆದವರು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ: ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ

ನೇಮಕಾತಿ ವಿಭಾಗಗಳು

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು : ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್‌, ಸಿವಿಲ್.

ಟೆಕ್ನೀಷಿಯನ್ (ಡಿಪ್ಲೊಮ) ಅಪ್ರೆಂಟಿಸ್ ಹುದ್ದೆಗಳು: ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್‌, ಸಿವಿಲ್, ಇಲೆಕ್ಟ್ರಿಕಲ್

ವಿದ್ಯಾರ್ಹತೆ

ಆಯಾ ವಿಭಾಗದ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಗ್ರಾಜುಯೇಟ್ ಮತ್ತು ಡಿಪ್ಲೊಮದಲ್ಲಿ ಪಡೆದಿರಬೇಕು. ಅಂಗೀಕೃತ ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರಬೇಕು.

ಕರ್ನಾಟಕ ಕಾರಾಗೃಹ ಇಲಾಖೆ ವಾರ್ಡರ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಕರೆದು, ಲಿಖಿತ ಪರೀಕ್ಷೆ ನೀಡುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಸಹ ಪಡೆಯಬೇಕಿದ್ದು, ವೆಬ್‌ಸೈಟ್‌ ವಿಳಾಸ www.mhrdnats.gov.in ಗೆ ಭೇಟಿ ನೀಡಬೇಕು. ಅಗತ್ಯ ಮಾಹಿತಿಗಳಾದ ಶೈಕ್ಷಣಿಕ ಅರ್ಹತೆ, ಪ್ರಾಥಮಿಕ ಮಾಹಿತಿಗಳನ್ನು ನೀಡಿ ಎನ್‌ರೋಲ್‌ ಮಾಡಬೇಕು. ನಂತರ ರಿಜಿಸ್ಟರ್ ನಂಬರ್ ಜೆನೆರೇಟ್ ಆಗುತ್ತದೆ. ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ನೇರ ಸಂದರ್ಶನಕ್ಕೆ ಕೊಂಡೊಯ್ಯಬೇಕು.

ಸಂದರ್ಶನ ದಿನಾಂಕ: 10-11-2019

ಸಂದರ್ಶನ ಸ್ಥಳ: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್, ರವೀಂದ್ರನಾಥ್ ಟ್ಯಾಗೋರ್ ರೋಡ್, ಮಚಲಿಪಟ್ಟಣಂ - 521001.

KPSC: JTO ಹುದ್ದೆಗಳ ನೇಮಕ.. ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಪ್ರೆಂಟಿಸ್ ಹುದ್ದೆಗಳ ಅವಧಿ ಒಂದು ವರ್ಷ. ಕರ್ತವ್ಯ ಸಮಯದಲ್ಲಿ ಗ್ರಾಜುಯೇಟ್‌ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ರೂ.11,110, ಡಿಪ್ಲೊಮ ಟೆಕ್ನೀಷಿಯನ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ರೂ.10,400 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ನೇಮಕಾತಿಯಲ್ಲಿ ಜಾತಿವಾರು ಮೀಸಲಾತಿ ಸರ್ಕಾರಿ ನಿಯಮದ ಪ್ರಕಾರ ಅನ್ವಯವಾಗಲಿದೆ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ