ಆ್ಯಪ್ನಗರ

CCRAS Jobs: 186 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CCRAS Recruitment 2019: ಆಯುಷ್‌ ಸಚಿವಾಲಯದ ಅಧೀನದಲ್ಲಿರುವ ಸಿಸಿಆರ್‌ಎಎಸ್ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ಓದಿ ತಿಳಿಯಿರಿ.

Vijaya Karnataka Web 30 Sep 2019, 6:38 pm

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್(CCRAS), ಕೇಂದ್ರ ಆಯುಷ್ ಸಚಿವಾಲಯದ ಸ್ವಾಯತ್ತ ಅಂಗವಾಗಿದ್ದು, ಈ ಮಂಡಳಿಯಲ್ಲಿ ಅಗತ್ಯವಿರುವ ವಿವಿಧ ಗ್ರೂಪ್‌ನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
Vijaya Karnataka Web CCRAS Recruitment 2019 Apply online


CCRAS ನಲ್ಲಿ ಗ್ರೂಪ್‌ ಎ, ಗ್ರೂಪ್ ಬಿ, ಗ್ರೂಪ್ ಸಿ ಸೇರಿದಂತೆ ಒಟ್ಟು 186 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗಾವಕಾಶ: ಕೋರ್ಟ್‌ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗ್ರೂಪ್‌ ಎ ಹುದ್ದೆಗಳು (ರಿಸರ್ಚ್ ಆಫೀಸರ್)

ಕೆಮಿಸ್ಟ್:5

ಫಾರ್ಮಾಕೋಲಜಿ: 2

ಬಯೋಕೆಮಿಸ್ಟ್ರಿ: 10

ಮೆಡಿಸಿನ್: 6

ಎನಿಮಲ್/ಎಕ್ಸ್‌ಪೆರಿಮೆಂಟಲ್ ಪೆಥಾಲಜಿ:2

ಪೆಥಾಲಜಿ: 14

ಆಯುರ್ವೇದ:12

ಮೈಕ್ರೋಬಯಾಲಜಿ: 4

ಲೈಬ್ರರಿ ಆಂಡ್ ಇನ್ಫಾರ್ಮೇಷನ್ ಆಫೀಸರ್: 1

ಗ್ರೂಪ್ ಬಿ ಹುದ್ದೆಗಳು (ಅಸಿಸ್ಟಂಟ್ ರಿಸರ್ಚ್ ಆಫೀಸರ್)

ಬಾಟನಿ: 4

ಕೆಮಿಸ್ಟ್ರಿ:4

ಕ್ಲಿನಿಕಲ್ ಸೈಕಾಲಜಿ: 2

ಫಾರ್ಮ್ ಮ್ಯಾನೇಜರ್: 1

ಬಯೋ ಟೆಕ್ನಾಲಜಿ: 3

ಫಾರ್ಮಾಕೋಗ್ನೊಸಿ:3

ಫಿಸಿಯೋಥೆರಫಿ: 1

ಫಾರ್ಮಾಕೋಲಜಿ: 12

ಸ್ಟಾಫ್ ನರ್ಸ್: 49

ಭಾರತೀಯ ಆಹಾರ ನಿಗಮದಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕ: ಪದವಿ ಆಗಿರುವವರು ಅರ್ಜಿ ಸಲ್ಲಿಸಿ

ಗ್ರೂಪ್ ಸಿ ಹುದ್ದೆಗಳು (ರಿಸರ್ಚ್ ಅಸಿಸ್ಟಂಟ್)

ಬಯೋಕೆಮಿಸ್ಟ್ರಿ-ನಾನ್ ಮೆಡಿಕಲ್: 2

ಬಾಟನಿ: 19

ಕೆಮಿಸ್ಟ್ರಿ: 11

ಫಾರ್ಮಾಕೋಲಜಿ: 3

ಆರ್ಗ್ಯಾನಿಕ್ ಕೆಮಿಸ್ಟ್ರಿ: 1

ಗಾರ್ಡನ್ ಸೂಪರ್‌ವೈಸರ್: 1

ಕ್ಯೂರೇಟರ್: 2

ಗಾರ್ಡೆನ್: 3

ಫಾರ್ಮಸಿ: 4

ಸಂಸ್ಕೃತ: 1

ಲೈಬ್ರರಿ ಅಂಡ್ ಇನ್ಫಾರ್ಮೇಷನ್ ಅಸಿಸ್ಟಂಟ್ : 2

ಸ್ಟಾಟಿಸ್ಟಿಕಲ್ ಅಸಿಸ್ಟಂಟ್ : 1

ಟ್ರಾನ್ಸ್‌ಲೇಟರ್(ಹಿಂದಿ-ಅಸಿಸ್ಟಂಟ್): 1

ವಿದ್ಯಾರ್ಹತೆ

ಮೇಲಿನ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದಿರಬೇಕು. ಬೋಧನೆ ಹಾಗೂ ಸಂಶೋಧನೆ ವಿಷಯಗಳಲ್ಲಿ ಅನುಭವ ಹೊಂದಿರಬೇಕು.

ವಯೋಮಿತಿ

ಗ್ರೂಪ್‌ ಎ ಹುದ್ದೆಗಳ ಪೈಕಿ ಲೈಬ್ರರಿ ಸೈನ್ಸ್ ಅಂಡ್ ಇನ್ಫಾರ್ಮೇಷನ್ ಆಫೀಸರ್ ಹುದ್ದೆಗೆ 45 ವರ್ಷ ಮತ್ತು ಇತರೆ ಹುದ್ದೆಗಳಿಗೆ 40 ವರ್ಷ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಹುದ್ದೆಗಳಿಗೆ ಗರಿಷ್ಟ 30 ವರ್ಷ ಗರಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ.

ಭಾರತ ಸರ್ಕಾರದ ನಿಯಮಾನುಸಾರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ISRO Jobs: ಸೈಂಟಿಸ್ಟ್, ಎಂಜಿನಿಯರ್ ಹುದ್ದೆಗಳಿಗೆ ಅ.14 ರೊಳಗೆ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಅಕ್ಟೋಬರ್ 1, 2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ ಶುಲ್ಕ ಎಷ್ಟು?

- ಗ್ರೂಪ್‌ ಎ, ಬಿ, ಸಿ 3 ಹುದ್ದೆಗಳಿಗೂ ಎಸ್‌ಸಿ / ಎಸ್‌ಟಿ / PWD / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

- ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗ್ರೂಪ್ ಎ ಹುದ್ದೆಗಳಿಗೆ ರೂ.1500, ಗ್ರೂಪ್ ಬಿ ಹುದ್ದೆಗಳಿಗೆ ರೂ.500, ಗ್ರೂಪ್ ಸಿ ಹುದ್ದೆಗಳಿಗೆ ರೂ.200 ಅರ್ಜಿ ಶುಲ್ಕ ಪಾವತಿಸಬೇಕು.

-ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕಾಗಿದ್ದು, ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

- ಸಿಸಿಆರ್ಎಎಸ್‌ನ ಅಧಿಕೃತ ವೆಬ್‌ಸೈಟ್ www.ccras.nic.in ಗೆ ಭೇಟಿ ನೀಡಿ.

- ಆನ್‌ಲೈನ್‌ ಅರ್ಜಿ ಸಲ್ಲಿಕೆ ಎರಡು ಹಂತಗಳನ್ನು ಒಳಗೊಂಡಿದ್ದು, ಮೊದಲಿಗೆ ಇಮೇಲ್ ವಿಳಾಸ ನೀಡಿ ರಿಜಿಸ್ಟರ್ ಆಗಬೇಕು. ನಂತರ ಅಗತ್ಯ ಮಾಹಿತಿಗಳನ್ನು ಅರ್ಜಿ ಸಲ್ಲಿಸಬಹುದು.

- ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಪ್ರತ್ಯೇಕ ಅರ್ಜಿ ಶುಲ್ಕಗಳನ್ನು ಪಾವತಿಸಬೇಕಾಗಿದೆ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಲಿಂಕ್‌ಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ