ಆ್ಯಪ್ನಗರ

ಭಾರತೀಯ ತೈಲ ನಿಗಮದಲ್ಲಿ ಟೆಕ್ನೀಷಿಯನ್, ಟ್ರೇಡ್ ಅಪ್ರೆಂಟಿಸ್‌ಗಳ ನೇಮಕ; ಅರ್ಜಿ ಆಹ್ವಾನ

IOCL ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಮತ್ತು ಅಗತ್ಯ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

Vijaya Karnataka Web 23 Mar 2020, 5:56 pm

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (IOCL) ನ ಮಾರ್ಕೆಟಿಂಗ್ ಡಿವಿಷನ್, ಟೆಕ್ನೀಷಿಯನ್ ತರಬೇತಿದಾರ ಮತ್ತು ಟ್ರೇಡ್ ತರಬೇತಿದಾರರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಮತ್ತು ಅಗತ್ಯ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
Vijaya Karnataka Web iocl recruitment 2020
IOCL Jobs 2020


ಹುದ್ದೆಗಳ ವಿವರ

ಟೆಕ್ನೀಷಿಯನ್‌ ಅಪ್ರೆಂಟಿಸ್ : 221

ಟ್ರೇಡ್ ಅಪ್ರೆಂಟಿಸ್ : 183

ಒಟ್ಟು ಹುದ್ದೆಗಳು : 404

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ : 21-03-2020

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ : 10-04-2020

ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ : 14-04-2020

ಲಿಖಿತ ಪರೀಕ್ಷೆ ದಿನಾಂಕ : 19-04-2020

ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ದಿನಾಂಕ : 23-04-2020

ಪರೀಕ್ಷೆ ಮುಂದೂಡಿದಾಗ ಸ್ಟಡಿ ಪ್ಲಾನ್‌ ಹೇಗಿರಬೇಕು?

ವಯೋಮಿತಿ ಅರ್ಹತೆಗಳು

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಇಸ್ರೋದಲ್ಲಿ ಸೈಂಟಿಸ್ಟ್‌, ಇಂಜಿನಿಯರ್, ಇತರೆ ವಿವಿಧ ಹುದ್ದೆಗಳ ನೇಮಕ; ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆಗಳು

ಟೆಕ್ನೀಷಿಯನ್ ಅಪ್ರೆಂಟಿಸ್‌ ಹುದ್ದೆಗೆ ಡಿಪ್ಲೊಮ ವಿದ್ಯಾರ್ಹತೆಯನ್ನು ಸಂಬಂಧಿಸಿದ ವಿಭಾಗಗಳಲ್ಲಿ ಉತ್ತೀರ್ಣರಾಗಿರಬೇಕು. ಟ್ರೇಡ್ ಅಪ್ರೆಂಟಿಸ್‌ಗಳಿಗೆ ಎಸ್‌ಎಸ್ಎಲ್‌ಸಿ ಜತೆಗೆ, ಅಗತ್ಯ ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು. ಟ್ರೇಡ್ ಅಪ್ರೆಂಟಿಸ್ ಅಕೌಂಟಂಟ್ ಹುದ್ದೆಗೆ ಯಾವುದೇ ಪದವಿ, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಮೆರಿಟ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ. ನಂತರ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ. ಕೆಳಗೆ ನೀಡಲಾದ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್‌ ಅರ್ಜಿ ಸಲ್ಲಿಸಿ.

ಐಓಸಿಎಲ್ ವೆಬ್‌ಸೈಟ್

Notification-IOCL-Marketing-Division-Apprentice 2020

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ