ಆ್ಯಪ್ನಗರ

ಎಂಜಿನಿಯರಿಂಗ್ ಪದವೀಧರರಿಗೆ ಐಒಸಿಎಲ್ ನಲ್ಲಿ ಜಾಬ್ಸ್

ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆಗಳಿಗೆ ನೇಮಕ

Vijaya Karnataka 12 Mar 2019, 5:00 am
ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್‌ 27 ಕೊನೆಯ ದಿನವಾಗಿದೆ.
Vijaya Karnataka Web indian oil corporation recruitment 2019
ಎಂಜಿನಿಯರಿಂಗ್ ಪದವೀಧರರಿಗೆ ಐಒಸಿಎಲ್ ನಲ್ಲಿ ಜಾಬ್ಸ್

ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಷಯಗಳಲ್ಲಿ ಬಿಇ/ಬಿಟೆಕ್‌ ಮಾಡಿದವರು ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಂದರೆ ಕೆಮಿಕಲ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಇನ್‌ಸ್ಟ್ರುಮೆಂಟ್‌ ಎಂಜಿನಿಯರಿಂಗ್‌ ಅಥವಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 26 ವರ್ಷ. ರಿಸರ್ಚ್‌ ಆಫೀಸರ್‌ ಹುದ್ದೆಯ ಅಭ್ಯರ್ಥಿಗಳು ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ. ಎಂಎಸ್ಸಿ (ಕೆಮಿಸ್ಟ್ರಿ) ತೇರ್ಗಡೆಯಾಗಿರುವ 30 ವರ್ಷದೊಳಗಿನ ಅಭ್ಯರ್ಥಿಗಳು ಅಸಿಸ್ಟೆಂಟ್‌ ಆಫೀಸರ್‌ (ಮಾರ್ಕೆಟಿಂಗ್‌ ವಿಭಾಗ) ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ