ಆ್ಯಪ್ನಗರ

ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನಲ್ಲಿ ಐಟಿಐ ಪಾಸ್‌ ಆದವರಿಗೆ ಉದ್ಯೋಗಾವಕಾಶ

ಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್ (ಐಒಸಿಎಲ್) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್‌ ಪ್ರಕಟಿಸಿದೆ..

Vijaya Karnataka Web 28 Nov 2020, 3:07 pm
ಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್ (ಐಒಸಿಎಲ್) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್‌ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
Vijaya Karnataka Web ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನಲ್ಲಿ ಐಟಿಐ ಪಾಸ್‌ ಆದವರಿಗೆ ಉದ್ಯೋಗಾವಕಾಶ

iocl recruitment 2020



ಆಸಕ್ತರು ಐಒಸಿಎಲ್‌ನ ಅಫೀಶಿಯಲ್ ವೆಬ್‌ಸೈಟ್‌ ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಡಿಸೆಂಬರ್ 12, 2020 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಟೆಕ್ನಿಕಲ್ ಮತ್ತು ನಾನ್‌-ಟೆಕ್ನಿಕಲ್ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳನ್ನು ದಕ್ಷಿಣ ಭಾರತದ ( ತಮಿಳುನಾಡು, ಪುದುಚೇರಿ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ತೆಲಂಗಾಣ) ಹಲವು ಪ್ರದೇಶಗಳಲ್ಲಿ ನೇಮಕ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ27-11-2020
ಅಪ್ಲಿಕೇಶನ್‌ ಸಲ್ಲಿಕೆಗೆ ಕೊನೆ ದಿನಾಂಕ 12-12-2020
ಲಿಖಿತ ಪರೀಕ್ಷೆ ದಿನಾಂಕ03-01-2021

ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಕೊಂಚ ಸಡಿಲಿಕೆ: ವಿವಿಧ ಹುದ್ದೆಗಳಿಗೆ ನೇಮಕ ಆದೇಶ

ವಯೋಮಿತಿ ಅರ್ಹತೆ : ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ, ಎಸ್‌ಸಿ / ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಟೈಪ್ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಮತ್ತು ಇತರೆ ಅರ್ಹತೆಗಳ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತದೆ.

ಕರ್ನಾಟಕದಲ್ಲಿ ಒಟ್ಟು 65 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ನೇಮಕಾತಿ: ಬೆಂಗಳೂರು ಕೇಂದ್ರದಲ್ಲಿನ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ ?
ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್‌ www.iocl.com ಗೆ ಭೇಟಿ ನೀಡಿ. Careers>> Latest Job Opening >> Engagement of Trade Apprentices in Southern Region (Marketing Division)-FY 2020-21 Phase-I ಆಯ್ಕೆಗಳನ್ನು ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು.

ನೋಟಿಫಿಕೇಶನ್‌ಗಾಗಿ ಕ್ಲಿಕ್ ಮಾಡಿ

ಉದ್ಯೋಗ ವಿವರ

INR 8000 to 15000 /Month
ಹುದ್ದೆಯ ಹೆಸರುಅಪ್ರೆಂಟಿಸ್ ಹುದ್ದೆಗಳ ನೇಮಕ
ವಿವರಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್‌ನಿಂದ ಅಧಿಸೂಚನೆ
ಪ್ರಕಟಣೆ ದಿನಾಂಕ2020-11-27
ಕೊನೆ ದಿನಾಂಕ2020-12-12
ಉದ್ಯೋಗ ವಿಧಇಂಟರ್ನ್‌
ಉದ್ಯೋಗ ಕ್ಷೇತ್ರಸರ್ಕಾರಿ ವಲಯ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಐಟಿಐ ವಿದ್ಯಾರ್ಹತೆ
ಕಾರ್ಯಾನುಭವ0 Year

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಲಿಮಿಟೆಡ್
ವೆಬ್‌ಸೈಟ್‌ ವಿಳಾಸhttps://iocl.com/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಕರ್ನಾಟಕ
ಸ್ಥಳಕರ್ನಾಟಕ
ಪ್ರದೇಶಕರ್ನಾಟಕ
ಅಂಚೆ ಸಂಖ್ಯೆ560001
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ