ಆ್ಯಪ್ನಗರ

ಎನ್‌ಎಲ್‌ಸಿಯಲ್ಲಿ ಅಪ್ರೆಂಟಿಸ್‌ಶಿಪ್‌: ಅರ್ಜಿ ಸಲ್ಲಿಕೆಗೆ ಜೂನ್ 4 ಕಡೆಯ ದಿನ

ರಾಜ್ಯ ಸರಕಾರದ ಮಾನ್ಯತೆ ಪಡೆದ ತಾಂತ್ರಿಕ ಶಿಕ್ಷಣ ಮಂಡಳಿ ಅಥವಾ ರಾಜ್ಯ ಮಂಡಳಿಯಲ್ಲಿ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿ ಡಿಪ್ಲೊಮಾ ಮಾಡಿದವರು ಈ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

Vijaya Karnataka 22 May 2019, 11:18 pm
ನವರತ್ನ ಕಂಪನಿಗಳಲ್ಲಿ ಒಂದಾಗಿರುವ 'ನವೇಲಿ ಲಿಗ್ನೈಟ್‌ ಕಾರ್ಪೊರೇಷನ್‌ ಇಂಡಿಯಾ ಲಿಮಿಟೆಡ್‌' (ಎನ್‌ಎಲ್‌ಸಿ) ಒಂದು ವರ್ಷದ ಅಪ್ರೆಂಟಿಸ್‌ಶಿಪ್‌ಗೆ ಎಂಜಿನಿಯರಿಂಗ್‌ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜೂನ್‌ 4 ಕೊನೆ ದಿನವಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪಾಂಡಿಚೇರಿ ಮತ್ತು ಲಕ್ಷದ್ವೀಪದ ಆಸಕ್ತ ಯುವಕರು ಈ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದು ಒಂದು ವರ್ಷಗಳ ಅವಧಿಯ ತರಬೇತಿಯಾಗಿರುತ್ತದೆ.
Vijaya Karnataka Web job


ಯಾವ ವಿಭಾಗದಲ್ಲಿ ಎಷ್ಟು ಹುದ್ದೆ?

ಕೆಮಿಕಲ್‌ ಎಂಜಿನಿಯರಿಂಗ್‌-12, ಸಿವಿಲ್‌ ಎಂಜಿನಿಯರಿಂಗ್‌-4, ಕಂಪ್ಯೂಟರ್‌ ಎಂಜಿನಿಯರಿಂಗ್‌-15, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌-48, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌-7, ಇನ್‌ಸ್ಟ್ರುಮೆಂಟೇಷನ್‌ ಆ್ಯಂಡ್‌ ಕಂಟ್ರೋಲ್‌ ಎಂಜಿನಿಯರಿಂಗ್‌-4, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌-73 ಮತ್ತು ಮೈನಿಂಗ್‌ ಎಂಜಿನಿಯರಿಂಗ್‌-7 ಸೇರಿ ಒಟ್ಟು 170 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ವಿದ್ಯಾರ್ಹತೆ: ರಾಜ್ಯ ಸರಕಾರದ ಮಾನ್ಯತೆ ಪಡೆದ ತಾಂತ್ರಿಕ ಶಿಕ್ಷಣ ಮಂಡಳಿ ಅಥವಾ ರಾಜ್ಯ ಮಂಡಳಿಯಲ್ಲಿ ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿ ಡಿಪ್ಲೊಮಾ ಮಾಡಿದವರು ಈ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಅಥವಾ ರಾಜ್ಯ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಡಿಪ್ಲೊಮಾ ಪೂರೈಸಿದವರು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 2017/18/19ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಆಯ್ಕೆ ಹೇಗೆ?: ಬೋರ್ಡ್‌ ಆಫ್‌ ಅಪ್ರೆಂಟಿಸ್‌ಶಿಪ್‌ ಟ್ರೇನಿಂಗ್‌ (ಎಸ್‌ಆರ್‌) ಆನ್‌ಲೈನ್‌ ಅಪ್ಲಿಕೇಶನ್‌ಗಳನ್ನು ಗಮನಿಸಿ ಅವುಗಳಲ್ಲಿ ಸೂಕ್ತವೆನಿಸಿದ್ದನ್ನು ಶಾರ್ಟ್‌ಲೀಸ್ಟ್‌ ಮಾಡುತ್ತದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಹಾಗೂ ಎಂಜಿನಿಯರಿಂಗ್‌ ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.12, 185 ಸ್ಟೈಫೆಂಡ್‌ ನೀಡಲಾಗುತ್ತದೆ.

ಡಿಪ್ಲೊಮಾ ಮಾಡಿದ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ
ಒಟ್ಟು 170 ಹುದ್ದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಜೂನ್‌ 2019
ಆಯ್ಕೆಪಟ್ಟಿ ಪ್ರಕಟವಾಗುವ ದಿನಾಂಕ : 10 ಜೂನ್‌ 2019
ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ: 17 ಜೂನ್‌ 2019
ಇನ್ನಷ್ಟು ವಿವರಗಳಿಗೆ ವೆಬ್‌: https://www.nlcindia.com/

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ