ಆ್ಯಪ್ನಗರ

ನೆಟ್‌ ಅರ್ಜಿ ಕರೆಕ್ಷನ್‌ಗೆ ಅವಕಾಶ: ನಾಳೆಯೇ ಡೆಡ್‌ಲೈನ್‌

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡದ ಅಭ್ಯರ್ಥಿಗಳು ಈಗ ನಾಳೆ (ಏಪ್ರಿಲ್‌ 14ರ) ಮಧ್ಯರಾತ್ರಿಯ ಒಳಗೆ ಎನ್‌ಟಿಎ ವೆಬ್‌ನಲ್ಲಿ ಲಾಗಿನ್‌ ಆಗಿ, ತಮ್ಮ ಅರ್ಜಿಯನ್ನು ಸರಿಪಡಿಸಬಹುದಾಗಿದೆ. ಇದಕ್ಕೆ ಹೆಚ್ಚುವರಿ ಅರ್ಜಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೂ ಇನ್ನೊಂದು ಅವಕಾಶ ನೀಡಲಾಗಿದ್ದು, ಅಂಥವರು ಶುಲ್ಕ ಪಾವತಿಸಿ, ಪರೀಕ್ಷೆ ಬರೆಯಲು ಅರ್ಹತೆ ಪಡೆಯಬಹುದಾಗಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

Vijaya Karnataka Web 13 Apr 2019, 3:21 pm
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ನಡೆಸುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (ನೆಟ್‌) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಈ ಪರೀಕ್ಷೆ ನಡೆಸುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ) ಅವಕಾಶ ನೀಡಿದೆ. ಇದಕ್ಕೆ ನಾಳೆ ( ಏಪ್ರಿಲ್‌ 14 ) ಅಂತಿಮ ದಿನವಾಗಿದೆ.
Vijaya Karnataka Web net ugc june

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡದ ಅಭ್ಯರ್ಥಿಗಳು ಈಗ ನಾಳೆ (ಏಪ್ರಿಲ್‌ 14ರ) ಮಧ್ಯರಾತ್ರಿಯ ಒಳಗೆ ಎನ್‌ಟಿಎ ವೆಬ್‌ನಲ್ಲಿ ಲಾಗಿನ್‌ ಆಗಿ, ತಮ್ಮ ಅರ್ಜಿಯನ್ನು ಸರಿಪಡಿಸಬಹುದಾಗಿದೆ. ಇದಕ್ಕೆ ಹೆಚ್ಚುವರಿ ಅರ್ಜಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೂ ಇನ್ನೊಂದು ಅವಕಾಶ ನೀಡಲಾಗಿದ್ದು, ಅಂಥವರು ಶುಲ್ಕ ಪಾವತಿಸಿ, ಪರೀಕ್ಷೆ ಬರೆಯಲು ಅರ್ಹತೆ ಪಡೆಯಬಹುದಾಗಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಫೋಟೋ ಸರಿಯಾಗಿ ಅಪ್‌ಲೋಡ್‌ ಮಾಡದ, ಸಹಿ ಸರಿ ಇರದ ಅಭ್ಯರ್ಥಿಗಳಿಗೆ ಇದನ್ನು ಸರಿಪಡಿಸಿಕೊಳ್ಳಲು ಕೂಡ ಅವಕಾಶವಿದೆ. ಈಗಾಗಲೇ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾತ್ರ ಈ ರೀತಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಯನ್ನು 8076535482, 7703859909 ಈ ನಂಬರ್‌ಗೆ ಎಸ್‌ಎಂಎಸ್‌ ಮಾಡಿ ಕೂಡ ಪಡೆಯಬಹುದು.
ಮಾಹಿತಿಗೆ ವೆಬ್‌: https://ntanet.nic.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ