ಆ್ಯಪ್ನಗರ

ಅಂಚೆ ಸಹಾಯಕ ಹುದ್ದೆಗೆ ಆಯ್ಕೆಪಟ್ಟಿ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗದ ಮೂಲಕ ನೇಮಕಾತಿ ನಡೆಸುವ ಅಂಚೆ ಸಹಾಯಕ (ಪೋಸ್ಟಲ್‌ ಅಸಿಸ್ಟಂಟ್‌ ) ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

Vijaya Karnataka Web 21 May 2020, 5:09 pm
ಸಿಬ್ಬಂದಿ ನೇಮಕಾತಿ ಆಯೋಗದ ಮೂಲಕ ನೇಮಕಾತಿ ನಡೆಸುವ ಅಂಚೆ ಸಹಾಯಕ (ಪೋಸ್ಟಲ್‌ ಅಸಿಸ್ಟಂಟ್‌ ) ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.
Vijaya Karnataka Web indian post result 2020
postal assistant result 2020


ಭಾರತೀಯ ಅಂಚೆಯು, ಖಾಲಿ ಇದ್ದ ಪೋಸ್ಟಲ್‌ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, PA SBCO, PA CO, RO ಹುದ್ದೆಗಳನ್ನು ವೇತನ ಶ್ರೇಣಿ 4 ರ ಅನ್ವಯ ಭರ್ತಿ ಮಾಡಲು ಎಸ್‌ಎಸ್‌ಸಿ ನೇಮಕಾತಿಯಲ್ಲಿ ಭಾಗವಹಿಸಿತ್ತು. ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್‌ ರ್ಯಾಂಕ್‌ ಮೂಲಕ ಅಭ್ಯರ್ಥಿಗಳನ್ನು ಅಂಚೆಯ ವಿವಿಧ ಘಟಕಗಳಿಗೆ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.

ನೇಮಕಾತಿ ಆಯ್ಕೆಪಟ್ಟಿಯಲ್ಲಿ ಹೆಸರು, ರ್ಯಾಂಕ್‌, ರಿಜಿಸ್ಟರ್ ನಂಬರ್ ಮತ್ತು ವರ್ಗದ ಮಾಹಿತಿಯನ್ನು ನೀಡಲಾಗಿದೆ. ಈ ಆಯ್ಕೆಪಟ್ಟಿಯು ಬಿಹಾರ ವೃತ್ತಕ್ಕೆ ಸಂಬಂಧಿಸಿದ್ದು, ಅಲ್ಲಿನ ವಿವಿಧ ವಿಭಾಗಗಳಿಗೆ, ವಿಭಾಗವಾರು ಅಭ್ಯರ್ಥಿಗಳ ಮಾಹಿತಿ ನೀಡಲಾಗಿದೆ. ಈ ಹುದ್ದೆಗಳಿಗೆ 2017 ರಲ್ಲಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು.

ಕೆಪಿಎಸ್‌ಸಿ ಸಾಮಾನ್ಯ ಜ್ಞಾನ ಪತ್ರಿಕೆಯ ಪಠ್ಯಕ್ರಮ, ಸಿದ್ಧತೆ ಕುರಿತು ಮಾಹಿತಿ ಇಲ್ಲಿದೆ..

ಈ ಕೆಳಗಿನ ಪಿಡಿಎಫ್‌ ಫೈಲ್‌ ಮೇಲೆ ಕ್ಲಿಕ್ ಮಾಡಿ ಸೆಲೆಕ್ಷನ್‌ ಲಿಸ್ಟ್‌ ಚೆಕ್‌ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ