ಆ್ಯಪ್ನಗರ

ಕಲಬುರಗಿ ಇಎಸ್‌ಐಸಿಯಲ್ಲಿ ನೇಮಕ, ಜುಲೈ 2, 3ಕ್ಕೆ ಸಂದರ್ಶನ

ಪ್ರೊಫೆಸರ್‌ ಮತ್ತು ಸೀನಿಯರ್‌ ರೆಸಿಡೆಂಟ್‌ ಹುದ್ದೆಗಳಿಗೆ ಕಲಬುರಗಿ ಇಎಸ್‌ಐಸಿಯಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಸೇಡಂ ರಸ್ತೆಯಲ್ಲಿರುವ ಇಎಸ್‌ಐಸಿ ಆಸ್ಪತ್ರೆಯಲ್ಲಿ ಜುಲೈ 2 ಮತ್ತು 3ರಂದು ಸಂದರ್ಶನ ನಡೆಯಲಿದೆ.

Vijaya Karnataka 29 Jun 2019, 10:08 am
ಕಲಬುರಗಿ: ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಕಲಬುರಗಿ ಮೆಡಿಕಲ್‌ ಕಾಲೇಜಿನಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಿದೆ. ಈ ಕುರಿತಾಗಿ ಪ್ರಕಟಣೆ ಹೊರಡಿಸಿರುವ ಇಎಸ್‌ಐಸಿ, ಸೀನಿಯರ್‌ ರೆಸಿಡೆಂಟ್‌ ಹುದ್ದೆಗಳಿಗೆ ಜುಲೈ 3ರಂದು ಮತ್ತು ಪ್ರೊಫೆಸರ್‌, ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಜುಲೈ 2ರಂದು ಸಂದರ್ಶನ ನಡೆಯಲಿದೆ ಎಂದು ತಿಳಿಸಿದೆ.
Vijaya Karnataka Web ESIC


ಅರ್ಹತೆಗಳೇನು?: ಸೀನಿಯರ್‌ ರೆಸಿಡೆಂಟ್‌: ಜನರಲ್‌ ಮೆಡಿಸಿನ್‌, ಪೀಡಿಯಾಟ್ರಿಕ್ಸ್‌, ಡರ್ಮಟಾಲಜಿ, ಸೈಕ್ಯಾಟ್ರಿ, ಆರ್ಥೋಪೆಡಿಕ್‌, ಇಎನ್‌ಟಿ, ಒಬಿಜಿ, ಆರ್ಥೋಪೆಡಿಕ್‌, ಅನಸ್ತೇಷಿಯಾ, ರೇಡಿಯೋ ಡಯಾಗ್ನಾಸಿಸ್‌, ಆಪ್ತಲ್ಮಾಲಜಿ ಮತ್ತು ಟಿಬಿ-ಚೆಸ್ಟ್‌ ವಿಭಾಗದಲ್ಲಿ ಒಟ್ಟು 28 ಹುದ್ದೆಗಳು ಖಾಲಿ ಇವೆ. ಸಂಬಂಧಪಟ್ಟ ವಿಷಯಗಳಲ್ಲಿ / ವಿಭಾಗಗಳಲ್ಲಿ ಮೆಡಿಕಲ್‌ ಪಿಜಿ ಡಿಗ್ರಿ ಮಾಡಿರುವ ಮತ್ತು ಕರ್ನಾಟಕ / ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಹೆಸರು ನೋಂದಾಯಿಸಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 39 ವರ್ಷ.

ಪ್ರೊಫೆಸರ್‌/ ಅಸೋಸಿಯೇಟ್‌ ಪ್ರೊಫೆಸರ್‌/ ಅಸಿಸ್ಟೆಂಟ್‌ ಪ್ರೊಫೆಸರ್‌: ಜನರಲ್‌ ಮೆಡಿಸಿನ್‌, ರೇಡಿಯೋ ಡಯಾಗ್ನಾಸಿಸ್‌ ಮತ್ತು ಆಪ್ತಲ್ಮಾಲಜಿ ವಿಭಾಗಗಳಲ್ಲಿ ತಲಾ ಒಂದು ಪ್ರೊಫೆಸರ್‌ ಹುದ್ದೆಗೆ ನೇಮಕ ನಡೆಯಲಿದೆ. ಪೆಥಾಲಜಿ, ಡರ್ಮಟಾಲಜಿ, ಆರ್ಥೋಪೆಡಿಕ್‌, ರೇಡಿಯೋ ಡಯಾಗ್ನಾಸಿಸ್‌, ಸೈಕ್ಯಾಟ್ರಿ, ಜನರಲ್‌ ಸರ್ಜರಿ, ಜನರಲ್‌ ಮೆಡಿಸಿನ್‌ ಮತ್ತು ಇಎನ್‌ಟಿ ವಿಷಯಗಳಲ್ಲಿ ಒಟ್ಟು 9 ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗಳಿವೆ. ಡರ್ಮಟಾಲಜಿ, ಜನರಲ್‌ ಸರ್ಜರಿ, ಅನಸ್ತೇಷಿಯಾ, ಸೈಕ್ಯಾಟ್ರಿ, ಆರ್ಥೋಪೆಡಿಕ್‌, ರೇಡಿಯೋ ಡಯಾಗ್ನಾಸಿಸ್‌, ಕಮ್ಯುನಿಟಿ ಮೆಡಿಸಿನ್‌ ಮತ್ತು ಅಪ್ತಲ್ಮಾಲಜಿ ವಿಷಯಗಳಿಗೆ ಒಟ್ಟು 10 ಅಸಿಸ್ಟೆಂಟ್‌ ಪ್ರೊಫೆಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಈ ಹುದ್ದೆಗಳ ಸಂದರ್ಶನದಲ್ಲಿ ಭಾಗವಹಿಸುವವರು ಎಂಬಿಬಿಎಸ್‌ ಮತ್ತು ಸಂಬಂಧಪಟ್ಟ ತಜ್ಞ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇದರೊಂದಿಗೆ ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು ಮತ್ತು ನಿಗದಿತ ಅವಧಿಯ ಸೇವಾನುಭವ ಹೊಂದಿರಬೇಕಾಗುತ್ತದೆ. ಇವುಗಳ ಸಂಪೂರ್ಣ ವಿವರ ವೆಬ್‌ನಲ್ಲಿ ಲಭ್ಯ.

ಪ್ರೊಫೆಸರ್‌ ಮತ್ತು ಸೀನಿಯರ್‌ ರೆಸಿಡೆಂಟ್‌ ಹುದ್ದೆಗಳಿಗೆ ಸಂದರ್ಶನ
- ಒಟ್ಟು ಹುದ್ದೆಗಳು 42
- ಸಂದರ್ಶನ ನಡೆಯುವ ದಿನಾಂಕ: ಜುಲೈ 02 ಮತ್ತು 03, 2019
- ಸಂದರ್ಶನ ನಡೆಯುವ ಸ್ಥಳ: ಇಎಸ್‌ಐಸಿ ಆಸ್ಪತ್ರೆ,ಸೇಡಂ ರಸ್ತೆ, ಕಲಬುರಗಿ
- ಸಹಾಯವಾಣಿ: 08472-265545

ಹೆಚ್ಚಿನ ಮಾಹಿತಿಗೆ: http://www.esicmcglb.org/

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ