ಆ್ಯಪ್ನಗರ

ಎಸ್‌ಎಸ್‌ಸಿ-ಸಿಜಿಎಲ್‌ 9,284 ಹುದ್ದೆಗೆ ನೇಮಕ

2017ನೇ ಸಾಲಿನ ಎಸ್‌ಎಸ್‌ಸಿ ಸಿಜೆಎಲ್‌ ಪರೀಕ್ಷೆಯ ಮೂಲಕ ಒಟ್ಟು 9,284 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಸಿಬ್ಬಂದಿ ನೇಮಕಾತಿ ಆಯೋಗ ಪ್ರಕಟಿಸಿದೆ.

Agencies 19 Jun 2019, 11:59 am
ಹೊಸದಿಲ್ಲಿ: ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) 2017ನೇ ಸಾಲಿನ 'ಕಂಬೈನ್ಡ್‌ ಗ್ರ್ಯಾಜುಯೇಟ್‌ ಲೆವೆಲ್‌ ಎಗ್ಸಾಮ್‌' (ಸಿಜಿಎಲ್‌) ಪರೀಕ್ಷೆಯ ಮೂಲಕ ಕೇಂದ್ರ ಸರಕಾರದಲ್ಲಿನ ಒಟ್ಟು 9,284 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಿಸಿದೆ.
Vijaya Karnataka Web Job


ಈ ಹುದ್ದೆಗಳು ಗ್ರೂಪ್‌ ಎ,ಬಿ,ಸಿ ಮತ್ತು ಡಿ ಗೆ ಸೇರಿದ ಹುದ್ದೆಗಳಾಗಿದ್ದು, ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳಿಗೆ ನೇಮಕಮಾಡಿಕೊಳ್ಳಲಾಗುತ್ತಿದೆ ಎಂಬ ವಿವರವಾದ ಮಾಹಿತಿಯನ್ನು ಆಯೋಗದ ವೆಬ್‌ನಲ್ಲಿ ಒದಗಿಸಿದೆ.

ಈ ಪರೀಕ್ಷೆ ಮೂಲಕ ನೇಮಕಗೊಂಡಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ನೋಡಿಕೊಂಡು, ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಇಲಾಖೆ ಮತ್ತು ಸಂಸ್ಥೆಗಳ ರಾಜ್ಯವಾರು ಮತ್ತು ವಲಯವಾರು ಹುದ್ದೆಗಳ ಮಾಹಿತಿಗೆ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಬೇಕೆಂದು ಎಸ್‌ಎಸ್‌ಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯವಾಗಿ ತೆರಿಗೆ ಇಲಾಖೆಯಲ್ಲಿನ ಹೆಚ್ಚು ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಮೊದಲಿಗೆ 9,475 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಹೆಚ್ಚಿನ ಮಾಹಿತಿಗೆ ವೆಬ್‌: https://ssc.nic.in/

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ