ಆ್ಯಪ್ನಗರ

ಎಸ್‌ಎಸ್‌ಸಿ: ಎಂಟಿಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಸಂಜೆ ಡೆಡ್‌ಲೈನ್‌

ಎಸ್‌ಎಸ್‌ಸಿ ಎಂಟಿಎಸ್‌ ಸಿಬಿಟಿ 1(ಕಂಪ್ಯೂಟರ್ ಆಧಾರಿತ ಪರೀಕ್ಷೆ ) ಪೇಪರ್ 1 ಆಗಸ್ಟ್‌ 2 ರಿಂದ ಸೆಪ್ಟೆಂಬರ್‌ 6 ರವರೆಗೆ ನಡೆಯಲಿದೆ. ಎರಡನೇ ಹಂತದ ಎಸ್‌ಎಸ್‌ಸಿ ಎಂಟಿಎಸ್‌ ಪರೀಕ್ಷೆ ವಿವರಣಾತ್ಮಕವಾಗಿರಲಿದ್ದು ನವೆಂಬರ್ 17, 2019ರಂದು ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕಡೆಯ ದಿನವಾಗಿದೆ.

Vijaya Karnataka Web 29 May 2019, 10:21 am
ಹೊಸದಿಲ್ಲಿ: ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಮಲ್ಟಿ ಟಾಸ್ಕಿಂಗ್‌ (ನಾನ್‌-ಟೆಕ್ನಿಕಲ್‌) ಸ್ಟಾಫ್‌ ಪರೀಕ್ಷೆಗೆ (ಎಂಟಿಎಸ್‌) ಅರ್ಜಿ ಸಲ್ಲಿಸಲು ಇಂದು ಕಡೆಯ ದಿನವಾಗಿದೆ. ಮಲ್ಟಿ ಟಾಸ್ಕಿಂಗ್‌ (ನಾನ್‌-ಟೆಕ್ನಿಕಲ್‌) ಸ್ಟಾಫ್‌ ಪರೀಕ್ಷೆ, 2019ರ ಪರೀಕ್ಷೆಗೆ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಇಂದು ಸಂಜೆ 5 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Vijaya Karnataka Web staff selection commission


ಶುಲ್ಕ ಪಾವತಿಗೆ ಮೇ 31, 2019 ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶವಿದ್ದು, ಚಲನ್‌ನಲ್ಲಿ ಶುಲ್ಕ ಪಾವತಿಸಲು ಜೂನ್‌ 1 ರವರೆಗೆ ಅವಕಾಶವಿದೆ.

ಇನ್ನು, ಮೊದಲನೇ ಹಂತದ ಎಸ್‌ಎಸ್‌ಸಿ ಎಂಟಿಎಸ್‌ ಸಿಬಿಟಿ 1(ಕಂಪ್ಯೂಟರ್ ಆಧಾರಿತ ಪರೀಕ್ಷೆ ) ಆಗಸ್ಟ್‌ 2 ರಂದು ಆರಂಭವಾಗಲಿದ್ದು, ಸೆಪ್ಟೆಂಬರ್‌ 6 ರವರೆಗೆ ನಡೆಯಲಿದೆ. ಎರಡನೇ ಹಂತದ ಎಸ್‌ಎಸ್‌ಸಿ ಎಂಟಿಎಸ್‌ ಪರೀಕ್ಷೆ ವಿವರಣಾತ್ಮಕವಾಗಿರಲಿದ್ದು ನವೆಂಬರ್ 17, 2019ರಂದು ನಡೆಯಲಿದೆ.

ಇನ್ನು, ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸಂಬಂಧ ಅಧಿಕೃತ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುವ ಆಯೋಗ, ''ಮಲ್ಟಿ ಟಾಸ್ಕಿಂಗ್‌ (ನಾನ್‌-ಟೆಕ್ನಿಕಲ್‌) ಸ್ಟಾಫ್‌ ಪರೀಕ್ಷೆಯನ್ನು ಬರೆಯಲು ಇಚ್ಛೆ ವ್ಯಕ್ತಪಡಿಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಂತಿಮ ದಿನಾಂಕ ಮೇ 29,2019 ಕ್ಕೂ ಮುನ್ನವೇ ಅರ್ಜಿಗಳನ್ನು ಸಲ್ಲಿಸಿ. ಕೊನೆಯ ದಿನಕ್ಕಾಗಿ ಕಾಯಬೇಡಿ. ಯಾಕೆಂದರೆ ಕೊನೆಯ ದಿನಗಳಲ್ಲಿ ಸರ್ವರ್‌ಗಳಲ್ಲಿ ಹೆಚ್ಚು ಟ್ರಾಫಿಕ್ ಇರುತ್ತದೆ'' ಎಂದು ಮೂರು ಬಾರಿ ಸಲಹೆ ನೀಡಿತ್ತು. ಎಸ್‌ಎಸ್‌ಸಿ ನೇಮಕಾತಿಗೆ ಈ ರೀತಿ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ https://ssc.nic.in ಅನ್ನು ಭೇಟಿ ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ