ಆ್ಯಪ್ನಗರ

ಸೇನೆಯಲ್ಲಿ ವೈದ್ಯರಿಗೆ ಅವಕಾಶ: ಎಂಬಿಬಿಎಸ್‌ ಓದಿರುವ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನ

ಮೊದಲ ಅಥವಾ ಎರಡನೇ ಅಟೆಂಪ್ಟ್‌ನಲ್ಲಿ ಎಂಬಿಬಿಎಸ್‌ ತೇರ್ಗಡೆಯಾದವರಿಗೆ ಮಾತ್ರ ಅವಕಾಶ. 2019ರ ಜೂನ್‌ 30ಕ್ಕೆ ಇಂಟರ್‌ನ್‌ಶಿಪ್‌ ಪೂರ್ಣಗೊಳಿಸುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.

Vijaya Karnataka 1 Jul 2019, 12:21 pm
ಹೊಸದಿಲ್ಲಿ: ಪ್ರತಿ ವರ್ಷ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಭಾರತೀಯ ಸೇನೆಯು ಇದೀಗ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಶಾರ್ಟ್‌ ಸರ್ವಿಸ್‌ ಕಮೀಷನ್‌ನಡಿ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಲು ಮುಂದಾಗಿರುವ ಭಾರತೀಯ ಸೇನೆಯು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 21ರೊಳಗೆ ಅರ್ಜಿ ಸಲ್ಲಿಸಬಹುದು. ಈ ಬಾರಿ 150 ಅಭ್ಯರ್ಥಿಗಳಿಗೆ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.
Vijaya Karnataka Web Medical


ಅರ್ಹತೆಗಳೇನು?
ಅಭ್ಯರ್ಥಿಗಳು ಭಾರತದ ಯಾವುದೇ ಅಂಗೀಕೃತ ವೈದ್ಯಕೀಯ ಸಂಸ್ಥೆಯಿಂದ ಎಂಬಿಬಿಎಸ್‌ ವ್ಯಾಸಂಗ ಪೂರ್ಣಗೊಳಿಸಿ, ನಿಗದಿತ ಅವಧಿಯ ಇಂಟರ್‌ನ್‌ಶಿಪ್‌ ಮುಗಿಸಿರಬೇಕು. ಮೊದಲ ಅಥವಾ ಎರಡನೇ ಅಟೆಂಪ್ಟ್‌ನಲ್ಲಿ ಎಂಬಿಬಿಎಸ್‌ ತೇರ್ಗಡೆಯಾದವರಿಗೆ ಮಾತ್ರ ಅವಕಾಶ. 2019ರ ಜೂನ್‌ 30ಕ್ಕೆ ಇಂಟರ್‌ನ್‌ಶಿಪ್‌ ಪೂರ್ಣಗೊಳಿಸುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.

ವಯೋಮಿತಿ/ ಶುಲ್ಕ ವಿವರ: 2019ರ ಡಿಸೆಂಬರ್‌ 31ಕ್ಕೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ ಆಗಿರಬೇಕು. ನಿಗದಿಪಡಿಸಿದ 200 ರೂ. ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಸೂಚಿಸಲಾಗಿದೆ.

ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ನಿಗದಿತ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳ ಕಿರುಪಟ್ಟಿಯನ್ನು ಸಿದ್ಧಪಡಿಸಿ, ಅಂಥ ಅಭ್ಯರ್ಥಿಗಳಿಗೆ ಸೇನೆಯ ನೇಮಕ ಮಂಡಳಿಯು ಸಂದರ್ಶನಕ್ಕೆ ಆಹ್ವಾನಿಸುತ್ತದೆ. 2019ರ ಜುಲೈನಲ್ಲಿಯೇ ದಿಲ್ಲಿಯಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಬಾರಿ ಸಂದರ್ಶನಕ್ಕೆ ಭಾಗವಹಿಸುತ್ತಿರುವ ಅಭ್ಯರ್ಥಿಗಳಾಗಿದ್ದಲ್ಲಿ ಬಸ್‌ ಅಥವಾ ರೈಲು ಪ್ರಯಾಣ ಭತ್ಯೆಯನ್ನು ಸೇನೆಯೇ ಒದಗಿಸಲಿದೆ.

ನಿಮಗಿದು ತಿಳಿದಿರಲಿ
  • ಸಂದರ್ಶನದಲ್ಲಿ ಆಯ್ಕೆಯಾದರೆ ಅದೇ ಅಂತಿಮ ಆಯ್ಕೆ ಎಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಅಭ್ಯರ್ಥಿಗಳ ಎನ್‌ಸಿಸಿ ಹಿನ್ನೆಲೆಯನ್ನೂ ಗಮನಿಸಿ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲಾಗುತ್ತದೆ.
  • ಎಸ್‌ಎಸ್‌ಸಿ ಆಫೀಸರ್‌ಗಳಾಗಿ ಸೇನೆಯ ಯಾವುದೇ ವಿಭಾಗಕ್ಕಾದರೂ (ವಾಯುಸೇನೆ, ಭೂಸೇನೆ ಅಥವಾ ನೌಕಾಸೇನೆ) ನೇಮಿಸಬಹುದು.
  • ವೈದ್ಯಾಧಿಕಾರಿಗಳಿಗೆ ಕ್ಯಾಪ್ಟನ್‌ ರ್ಯಾಂಕ್‌ ನೀಡಲಾಗುತ್ತದೆ. ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಮೇಜರ್‌ ಹಾಗೂ 11 ವರ್ಷ ಸೇವೆ ಸಲ್ಲಿಸಿದ ಬಳಿಕ ಲೆಫ್ಟಿನೆಂಟ್‌ ಕರ್ನಲ್‌ ರ್ಯಾಂಕ್‌ಅನ್ನೂ ನೀಡಲಾಗುತ್ತದೆ.
ಒಟ್ಟು ಹುದ್ದೆಗಳು 150
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 21, 2019
ಸಂದರ್ಶನ ನಡೆಯುವ ಸ್ಥಳ: ಸೇನಾ ಆಸ್ಪತ್ರೆ, ದಿಲ್ಲಿ ಕಂಟೋನ್ಮೆಂಟ್‌, ದಿಲ್ಲಿ
ಸಹಾಯವಾಣಿ: 011-ಧಿ23093740
ಅರ್ಜಿ ಸಲ್ಲಿಸಲು ಮತ್ತು ವಿವರಗಳಿಗೆ: ಡಿಡಿಡಿ.aಞ್ಚss್ಚಛ್ಞಿಠ್ಟಿy.ಜಟv.ಜ್ಞಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ