ಆ್ಯಪ್ನಗರ

ಭಾರತೀಯ ಸೇನೆ ನೇಮಕಾತಿ 2020; ಎಸ್‌ಎಸ್‌ಬಿ ಪರೀಕ್ಷೆಗಳು ಮುಂದೂಡಿಕೆ

ಇಂಡಿಯನ್ ಆರ್ಮಿ 2020ರ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಸರ್ವೀಸ್ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಬ್ಯಾಚ್‌ನ ನೇಮಕಾತಿ ಪ್ರಕ್ರಿಯೆಗಳನ್ನು ಈ ತಿಂಗಳ ಅಂತ್ಯದವರೆಗೆ ಮುಂದೂಡಲಾಗಿದೆ.

Vijaya Karnataka Web 18 Mar 2020, 3:26 pm

ಭಾರತೀಯ ಮಿಲಿಟರಿ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು, ಕೊರೊನಾ ವೈರಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಮುಂದೂಡಿದೆ. ಅಲ್ಲದೇ ತನ್ನ ಸಿಬ್ಬಂದಿಗಳನ್ನು ಅಗತ್ಯವಿದ್ದಲ್ಲಿ ಮಾತ್ರ ಕೆಲಸಕ್ಕೆ ಹಾಜರಾಗಲು ತಿಳಿಸಿದೆ.
Vijaya Karnataka Web indian army jobs 2020
India Army Recruitment 2020 exams


ದೇಶದಾದ್ಯಂತ ಜನರ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಹಲವು ಸೂಚನೆಗಳನ್ನು ನೀಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳನ್ನು ಸಹ ಒಂದು ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಜೊತೆಗೆ ಸೇನಾ ಸಿಬ್ಬಂದಿಗಳನ್ನು ಸಹ ಅಗತ್ಯವಿದ್ದಲ್ಲಿ ಮಾತ್ರ ಡ್ಯುಟಿಗೆ ವರದಿ ಮಾಡಿಕೊಳ್ಳಲು ತಿಳಿಸಲಾಗಿದ್ದು, ವಿಡಿಯೋ ಕಾನ್ಫರೆನ್ಸ್‌ ಸೌಲಭ್ಯಗಳನ್ನು ಬಳಸಲು ಸಲಹೆ ನೀಡಲಾಗಿದೆ.

ಇಂಡಿಯನ್ ಆರ್ಮಿ 2020ರ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಸರ್ವೀಸ್ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಬ್ಯಾಚ್‌ನ ನೇಮಕಾತಿ ಪ್ರಕ್ರಿಯೆಗಳನ್ನು ಈ ತಿಂಗಳ ಅಂತ್ಯದವರೆಗೆ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಪರಿಸ್ಥಿತಿಯನ್ನು ನೋಡಿಕೊಂಡು ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳ ಪ್ರಕಾರ ತಿಳಿದಿದೆ.

ಟಾಪ್‌ 10 ವರ್ಕ್‌ ಫ್ರಮ್ ಹೋಮ್‌ ಉದ್ಯೋಗಗಳ ಪಟ್ಟಿ ಇಲ್ಲಿದೆ..

ದೇಶದಾದ್ಯಂತ ಹಲವು ರಾಜ್ಯಗಳ ನಾಗರಿಕ ಸೇವಾ ಆಯೋಗಗಳು ಸಹ ದಾಖಲೆ ಪರಿಶೀಲನೆ, ಪರೀಕ್ಷೆಗಳನ್ನು ಕೊರೊನಾ ಭಯದಿಂದ ಮುಂದೂಡಿ ಪ್ರಕಟಣೆ ಹೊರಡಿಸಿವೆ. ಕರ್ನಾಟಕದಲ್ಲಿ ಕೆಪಿಎಸ್‌ಸಿಯು ಸಹ ವಿವಿಧ ಹುದ್ದೆಗಳ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಶಾಲಾ-ಕಾಲೇಜುಗಳನ್ನು 15 ದಿನಗಳವರೆಗೆ ಮುಚ್ಚಲು ಸರ್ಕಾರ ಆದೇಶ ನೀಡಿದೆ. ಆದರೆ ಕೊರೊನಾ ವೈರಸ್ ಹರಡುವಿಕೆ, ಸೋಂಕಿತರ ಹೆಚ್ಚಳ ಆಗುತ್ತಿರುವುದನ್ನು ಗಮನಿಸಿದರೆ ಅನಿರ್ದಿಷ್ಟಾವಧಿ ನಿಷೇಧ ಹೇರುವ ಅವಕಾಶ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ