ಆ್ಯಪ್ನಗರ

ಭಾರತೀಯ ಸೇನೆ ನೇಮಕಾತಿ 2020: ಎಸ್‌ಎಸ್‌ಸಿ ಪುರುಷ, ಮಹಿಳಾ ಇಂಜಿನಿಯರ್ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯು 56ನೇ ಬ್ಯಾಚ್‌ನ ಎಸ್‌ಎಸ್‌ಸಿ ಪುರುಷ ಇಂಜಿನಿಯರ್ ಮತ್ತು 27ನೇ ಬ್ಯಾಚ್‌ ಎಸ್‌ಎಸ್‌ಸಿ ಮಹಿಳಾ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ....

Vijaya Karnataka Web 14 Oct 2020, 7:26 pm
ಭಾರತೀಯ ಸೇನೆಯು 56ನೇ ಬ್ಯಾಚ್‌ನ ಎಸ್‌ಎಸ್‌ಸಿ ಪುರುಷ ಇಂಜಿನಿಯರ್ ಮತ್ತು 27ನೇ ಬ್ಯಾಚ್‌ ಎಸ್‌ಎಸ್‌ಸಿ ಮಹಿಳಾ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಕ್ಷಣಾ ಇಲಾಖೆ ಸಿಬ್ಬಂದಿ ಅಭ್ಯರ್ಥಿ, ಕರ್ತವ್ಯ ವೇಳೆ ಮೃತಪಟ್ಟಿದಲ್ಲಿ ಅಂತಹ ಅಭ್ಯರ್ಥಿಯ ಪತ್ನಿಯು ಅರ್ಜಿ ಸಲ್ಲಿಸಬಹುದಾಗಿದ್ದು ಕೋರ್ಸ್‌ 2021 ರ ಏಪ್ರಿಲ್‌ ನಿಂದ ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿ(OTA) ನಲ್ಲಿ ಆರಂಭಗೊಳ್ಳಲಿದೆ.
Vijaya Karnataka Web army ssc engineering recruitment 2020
indian army recruitment 2020


ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14-10-2020

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 12-11-2020 ಮಧ್ಯಾಹ್ನ 3 ಗಂಟೆವರೆಗೆ

SSC ಜೂನಿಯರ್ ಇಂಜಿನಿಯರ್ 2020 ನೋಟಿಫಿಕೇಶನ್ ಬಿಡುಗಡೆ: ಅರ್ಜಿ ಆಹ್ವಾನ

ವಯೋಮಿತಿ ಅರ್ಹತೆ

ಎಸ್‌ಎಸ್‌ಸಿ ಟೆಕ್ ಪುರುಷ ಮತ್ತು ಮಹಿಳಾ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ರಕ್ಷಣಾ ಇಲಾಖೆ ಸಿಬ್ಬಂದಿ ಅಭ್ಯರ್ಥಿ, ಕರ್ತವ್ಯ ವೇಳೆ ಮೃತಪಟ್ಟಿದಲ್ಲಿ ಅಂತಹ ಅಭ್ಯರ್ಥಿಯ ಪತ್ನಿಯು ಅರ್ಜಿ ಸಲ್ಲಿಸಬಹುದಾಗಿದ್ದು, 01-04-2021 ಕ್ಕೆ ಗರಿಷ್ಠ 35 ವರ್ಷ ಮೀರದ ವಿಧವೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ

ಇಂಜಿನಿಯರಿಂಗ್ ಪದವಿ ಪಾಸ್‌ ಮಾಡಿರುವ ಮತ್ತು ಪ್ರಸ್ತುತ ಅಂತಿಮ ಇಂಜಿನಿಯರ್ ಪದವಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಎಸ್‌ಎಸ್‌ಸಿ ಟೆಕ್‌ ಮಹಿಳಾ ಮತ್ತು ಪುರುಷ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.

300 ಪಿಎಸ್‌ಐ ಹುದ್ದೆಗಳಿಗೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: ಇಲ್ಲಿ ಚೆಕ್‌ ಮಾಡಿ..

ಎಸ್‌ಎಸ್‌ಸಿ ಮಹಿಳಾ ವಿಧವಾ ಪೋಸ್ಟ್‌ಗಳಿಗೆ ನಾನ್‌-ಟೆಕ್‌, ನಾನ್‌-ಯುಪಿಎಸ್‌ಸಿ, ಬಿಇ / ಬಿ.ಟೆಕ್ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಎಸ್‌ಎಸ್‌ಸಿ ಪುರುಷ ಹುದ್ದೆಗಳು175
ಎಸ್‌ಎಸ್‌ಸಿ ಮಹಿಳಾ ಹುದ್ದೆಗಳು14
ಡಿಫೆನ್ಸ್‌ ಪರ್ಸೊನೆಲ್ (ವಿಧವಾ) ಅಗತ್ಯ ಹುದ್ದೆಗಳು2

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ನೋಟಿಫಿಕೇಶನ್ ಪಿಡಿಎಫ್‌ ಫೈಲ್‌ ಈ ಕೆಳಗಿನಂತಿದೆ.
Notification-Indian-Army-55th-SSC-Men-26th-SSC-Women

ಸೆಂಟ್ರಲ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ