ಆ್ಯಪ್ನಗರ

ಕಿಚನ್‌ ಗಾರ್ಡನ್‌ ಯೋಜನೆ: 39 ಸಾವಿರ ಶಾಲೆಗಳಲ್ಲಿ ಅನುಷ್ಠಾನ

ಕಿಚನ್‌ ಗಾರ್ಡನ್‌ ಎಂಬ ಹೊಸ ಯೋಜನೆ ಜಾರಿಗೆ ಬರಲಿದ್ದು ಪ್ರಾಯೋಗಿಕವಾಗಿ ರಾಜ್ಯದ 39 ಸಾವಿರ ಶಾಲೆ ಆಯ್ಕೆಮಾಡಲಾಗಿದೆ.

Vijaya Karnataka 20 Jul 2019, 11:09 am
ಕಲಾದಗಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಉಪಹಾರ ಯೋಜನೆಯ ಸಮರ್ಥ ಅನುಷ್ಠಾನಕ್ಕೆ 'ಕಿಚನ್‌ ಗಾರ್ಡನ್‌'ಎಂಬ ಹೊಸ ಯೋಜನೆ ಜಾರಿಯಲ್ಲಿ ಬರಲಿದ್ದು ಇದಕ್ಕಾಗಿ ಪ್ರಾಯೋಗಿಕವಾಗಿ ರಾಜ್ಯದ 39 ಸಾವಿರ ಶಾಲೆ ಆಯ್ಕೆಮಾಡಲಾಗಿದೆ ಎಂದು ಮಧ್ಯಾಹ್ನ ಉಪಹಾರ ಯೋಜನೆಯ ಬೆಂಗಳೂರಿನ ಜಂಟಿನಿರ್ದೇಶಕರ ಕಛೇರಿಯ ಸಹಾಯ ನಿರ್ದೇಶಕ ಎಸ್‌.ಸಿ.ಮಂಜುನಾಥ ಹೇಳಿದ್ದಾರೆ.
Vijaya Karnataka Web Kitchen Garden


ಮಧ್ಯಾಹ್ನದ ಉಪಹಾರ ಯೋಜನೆ ಅನುಷ್ಠಾನ ಪರಿಶೀಲಿಸಲು ಜಿಲ್ಲೆಗೆ ಆಗಮಿಸಿ ನಾನಾ ಕಡೆಯಲ್ಲಿನ ಶಾಲೆಗಳಿಗೆ ಭೆಟಿ ನೀಡಿರುವ ಅವರು ಗುರುವಾರ ಇಲ್ಲಿನ ಹಣ್ಣುಬೆಳೆಗಾರರ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ 'ಪತ್ರಿಕೆ'ಯೊಂದಿಗೆ ಮಾತನಾಡಿದರು. ಮಕ್ಕಳಿಗೆ ಉತ್ತಮ ಉಪಹಾರ ಸಿಗಬೇಕು ಎಂಬ ಆಶಯದಿಂದ ತರಕಾರಿ ಬೆಳೆಯಲು ಯಾವ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಯಿದೆಯೋ ಅಂಥಹ ಶಾಲೆಗಳಿಗೆ 'ಕಿಚನ್‌ ಗಾರ್ಡನ್‌' ಅನ್ವಯಗೊಳ್ಳಲಿದೆ. ಈ ಶಾಲೆಗಳಿಗೆ ಪ್ರೋತ್ಸಾಹಧನವಾಗಿ ಕೇಂದ್ರಸರಕಾರ ವಾರ್ಷಿಕ 5 ಸಾವಿರ ರೂ.ಗಳನ್ನು ನೀಡುತ್ತಿದ್ದು ಇದು ಪ್ರಸಕ್ತವರ್ಷದಿಂದಲೇ ಜಾರಿಯಾಗಲಿದೆ ಎಂದರು.

ಮಕ್ಕಳ ಹಾಜರಾತಿಗೆ ಅನುಗುಣವಾಗಿ ಅಡುಗೆ ಪರಿಕರಗಳನ್ನು ತೆಗೆದುಕೊಳ್ಳಲು ಪ್ರತಿ ಶಾಲೆಗೆ ಕನಿಷ್ಠ 15 ಸಾವಿರ ರೂ ನೀಡುಲಾಗುವುದು. ಅಡುಗೆ ಮಾಡುವವರ ಸಂಭಾವನೆ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಗೆ ಪ್ರಶಂಸೆ: ಜಿಲ್ಲೆಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಪ್ರಶಂಸಿದ ಅವರು ಕಿಚನ್‌ ಗಾರ್ಡನ್‌ ಯೋಜನೆಯ ಜಿಲ್ಲೆಯ 35 ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ ಎಂದರು. ಮಧ್ಯಾಹ್ನ ಉಪಹಾರ ಯೋಜನೆಯ ತಾಲೂಕಾ ಅಧಿಕಾರಿ ಹರಿಯಂಥ ರಾಮತೀರ್ಥ,ಶಾಲೆಯ ಮುಖ್ಯಗುರುಗಳಾದ ಆರ್‌.ಪಿ.ಜೋಶಿ,ಆರ್‌.ವಿ.ಜಾಧವ ಈ ಸಂದರ್ಭದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ