ಆ್ಯಪ್ನಗರ

ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳ ನೇಮಕ

ಮಂಗಳೂರು ತಾಲೂಕಿನ ಶಿಶು ಅಭಿವೃದ್ದಿ ಯೋಜನೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಬಬ್ಬರಂತೆ ವಿಕಲಚೇತನರನ್ನು...

Vijaya Karnataka Web 16 Sep 2020, 5:31 pm
ಮಂಗಳೂರು ತಾಲೂಕಿನ ಶಿಶು ಅಭಿವೃದ್ದಿ ಯೋಜನೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಬಬ್ಬರಂತೆ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ನೇಮಕ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.
Vijaya Karnataka Web ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳ ನೇಮಕ
Rural Rehabilitation Activists recruitment 2020


ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪಾಸ್‌ ಆದ ಹಾಗೂ 18-45 ವರ್ಷ ವಯೋಮಿತಿಯೊಳಗಿನ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ಖಾಲಿ ಇರುವ ಗ್ರಾಮಪಂಚಾಯತ್ ವಿವರ ಈ ಕೆಳಗಿನಂತಿದೆ

ಅಡ್ಯಾರ್, ಅಂಬ್ಲಮೊಗರು, ಅತಿಕಾರಿಬೆಟ್ಟು, ಬಾಳ, ಬಳ್ಕುಂಜೆ, ಬೆಳ್ಮ, ಬೋಳಿಯಾರು, ಗಂಜಿಮಠ, ಗುರುಪುರ, ಹಳೆಯಂಗಡಿ, ಹರೇಕಳ, ಜೋಕಟ್ಟೆ, ಕಂದಾವರ, ಕೆಮ್ರಾಲ್, ಕಿನ್ನಿಗೋಳಿ, ಕಿನ್ಯ, ಕೊಣಾಜೆ, ಕುಪ್ಪೆಪದವು, ಮಳವೂರು, ಮಲ್ಲೂರು, ಮಂಜನಾಡಿ, ಮುನ್ನೂರು, ಮುತ್ತೂರು, ನೀರುಮಾರ್ಗ, ಪಡುಪಣಂಬೂರು, ಪಡುಪೆರಾರ, ಪಾವೂರು, ಸೂರಿಂಜೆ, ತಲಪಾಡಿ, ಉಳಾಯಿಬೆಟ್ಟು, ಬೆಳುವಾಯಿ, ದರೆಗುಡ್ಡೆ, ಹೊಸಬೆಟ್ಟು, ಇರುವೈಲು, ಕಲ್ಲಮುಂಡ್ಕೂರು, ನೆಲ್ಲಿಕಾರು, ಪಡುಮಾರ್ನಾಡು, ಪಾಲಡ್ಕ, ಪುತ್ತಿಗೆ, ಶಿರ್ತಾಡಿ, ತೆಂಕಮಿಜಾರು ಮತ್ತು ವಾಲ್ಪಾಡಿ ಗ್ರಾಮ ಪಂಚಾಯತ್ ಗಳಲ್ಲಿ ಹುದ್ದೆ ಖಾಲಿ ಇವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ವಿವಿಧ ಹುದ್ದೆಗಳ ನೇಮಕ

ಅರ್ಹ ಮತ್ತು ಆಸಕ್ತ ವಿಕಲಚೇತನರು ಅಕ್ಟೋಬರ್ 14 ರೊಳಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿ, ಮಂಗಳೂರು ಗ್ರಾಮಾಂತರ, ಮೂಡುಶೆಡ್ಡೆ, ವಾಮಂಜೂರು, ಮಂಗಳೂರು-28 ಈ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಸದರಿ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2263199 ಸಂಪರ್ಕಿಸುವಂತೆ ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ