ಆ್ಯಪ್ನಗರ

300 PSI ಹುದ್ದೆಗಳ ಲಿಖಿತ ಪರೀಕ್ಷೆಯ ಅಂತಿಮ ಸರಿ ಉತ್ತರಗಳಿಗೆ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ

ನಾನ್‌ ಹೈದೆರಾಬಾದ್ ಕರ್ನಾಟಕ 300 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಅಂತಿಮ ಸರಿ ಉತ್ತರಗಳನ್ನು ರಾಜ್ಯ ಪೊಲೀಸ್‌ ಇಲಾಖೆ ಪ್ರಕಟಿಸಿದೆ.

Vijaya Karnataka Web 21 May 2020, 6:35 pm
ನಾನ್‌ ಹೈದೆರಾಬಾದ್ ಕರ್ನಾಟಕ 300 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಅಂತಿಮ ಸರಿ ಉತ್ತರಗಳನ್ನು ರಾಜ್ಯ ಪೊಲೀಸ್‌ ಇಲಾಖೆ ಪ್ರಕಟಿಸಿದೆ. ಅಂತಿಮ ಕೀ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ಗೆ ಭೇಟಿ ನೀಡಿ ಚೆಕ್‌ ಮಾಡಬಹುದು.
Vijaya Karnataka Web civil psi final answer key 2019
civil psi final answer key


ನಾಗರಿಕ ಪಿಎಸ್‌ಐ ಹುದ್ದೆಗಳಿಗೆ 2020 ರ ಮಾರ್ಚ್‌ 08 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಮಾರ್ಚ್‌ 17 ರಂದು ಪ್ರಕಟಿಸಲಾಗಿತ್ತು.

ಈ ಕೀಉತ್ತರಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು. ನಂತರ ಅಂತಿಮ ಕೀ ಉತ್ತರಗಳನ್ನು ಏಪ್ರಿಲ್ 28 ರಂದು ಪ್ರಕಟಿಸಿತ್ತು. ಆದರೂ ಸಹ ಹಲವು ಅಭ್ಯರ್ಥಿಗಳು ತಾತ್ಕಾಲಿಕ ಮತ್ತು ಅಂತಿಮ ಸರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯು ಮತ್ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ಏಪ್ರಿಲ್ 28 ರಂದು ಪ್ರಕಟಿಸಿರುವ ಉತ್ತರಗಳೇ ಸರಿ ಎಂದು ಪ್ರಕಟಣೆಯಲ್ಲಿ ತಿಳಿಸಿ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದೆ.

ಪಂಚಾಯತ್ ರಾಜ್‌ ವಿಭಾಗದಲ್ಲಿ ಬೃಹತ್ ನೇಮಕಾತಿ; 7021 ಹುದ್ದೆಗೆ ಕರಡು ಅಧಿಸೂಚನೆ

ಈ ಹುದ್ದೆಗಳಿಗೆ ರಾಜ್ಯ ಪೊಲೀಸ್ ಇಲಾಖೆಯು 2019 ರ ಅಕ್ಟೋಬರ್‌ 16 ರಂದು ಅಧಿಸೂಚನೆ ಹೊರಡಿಸಿತ್ತು. ನವೆಂಬರ್ 06, 2020 ರವರೆಗೆ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿತ್ತು.

ಅಂತಿಮ ಸರಿ ಉತ್ತರಗಳಿಗೆ ಸ್ಪಷ್ಟನೆ

ಅಂತಿಮ ಸರಿ ಉತ್ತರಗಳು

ತಾತ್ಕಾಲಿಕ ಉತ್ತರಗಳು

2672 KSRP ಪೊಲೀಸ್ ಕಾನ್ಸ್‌ಟೇಬಲ್ ನೇಮಕ; ಅರ್ಜಿ ಸಲ್ಲಿಕೆ ಆರಂಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ