ಆ್ಯಪ್ನಗರ

ಪಿಎಸ್‌ಐ, ಆರ್‌ಎಸ್‌ಐ ಹುದ್ದೆಗಳ ಸಹಿಷ್ಣುತೆ, ದೇಹದಾರ್ಢ್ಯತೆ ಪರೀಕ್ಷೆ ಮುಂದೂಡಿಕೆ

ನಾಗರಿಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ರಿಸರ್ವ್‌ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಸಿಎಆರ್ / ಡಿಎಆರ್‌ (ಸೇವಾನಿರತ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ...

Vijaya Karnataka 12 Sep 2020, 8:19 pm
ನಾಗರಿಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ರಿಸರ್ವ್‌ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಸಿಎಆರ್ / ಡಿಎಆರ್‌ (ಸೇವಾನಿರತ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ನಿಗದಿಪಡಿಸಿದ ದೈಹಿಕ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ಮುಂದೂಡಲಾಗಿದೆ.
Vijaya Karnataka Web ಪಿಎಸ್‌ಐ, ಆರ್‌ಎಸ್‌ಐ ಹುದ್ದೆಗಳ ಸಹಿಷ್ಣುತೆ, ದೇಹದಾರ್ಢ್ಯತೆ ಪರೀಕ್ಷೆ ಮುಂದೂಡಿಕೆ
karnataka et pst exam postpone


ಪಿಎಸ್‍ಐ ಮತ್ತು ಆರ್‍ಎಸ್‍ಐ ಸಿಎಆರ್/ಡಿಎಆರ್(ಸೇವಾನಿರತ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ಸೆಪ್ಟೆಂಬರ್ 07 ರಿಂದ 11 ರವರೆಗೆ ಹಾಗೂ ಸೆಪ್ಟೆಂಬರ್ 14 ರಂದು ಒಟ್ಟು 6 ದಿನಗಳ ಕಾಲ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ಕೆಎಸ್‌ಪಿ ಇಂದ ನಿರ್ದೇಶನ ನೀಡಲಾಗಿತ್ತು. ಆದರೆ ದಾವಣಗೆರೆಯಲ್ಲಿ ಸೆ.08 ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ಅತಿಯಾದ ತೇವಾಂಶವಿರುವುದರಿಂದ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳ ಚಟುವಟಿಕೆಗಳನ್ನು ನಡೆಸಲು ಅನುಕೂಲಕರವಾಗಿಲ್ಲದ ಕಾರಣ ಈ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಅಲ್ಲದೇ ಇನ್ನೂ 5-6 ದಿನಗಳ ಕಾಲ ಅತಿಯಾಗಿ ಮಳೆಯಾಗುವ ಸಂಭವಿರುವುದರಿಂದ ಸೆ.09 ರಿಂದ ಸೆ.11 ರವರೆಗೆ ನಡೆಸಬೇಕಿದ್ದ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ನಡೆಸಲು ಕಷ್ಟ ಸಾಧ್ಯಾವಾಗಬಹುದು. ಕಾರಣ ಈ ಪರೀಕ್ಷೆಗಳನ್ನು ಸೆ.15 ರಿಂದ 21 ರವರೆಗೆ ನಡೆಸಲು ನಿರ್ಧರಿಸಲಾಗಿರುತ್ತದೆ. ಆದಕಾರಣ ಪರೀಕ್ಷೆಗೆ ಹಾಜರಾಗಬೇಕಿದ್ದ ಅಭ್ಯರ್ಥಿಗಳು, ಇಲಾಖೆಯ ಅಧಿಕೃತ ವೆಬ್‌ಸೈಟ್‌ http://rsi20.ksp-online.in/ ಗೆ ಭೇಟಿ ನೀಡಿ ಇಟಿ/ಪಿಎಸ್‍ಟಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ಈಗಾಗಲೇ ಸೂಚಿಸಿರುವಂತೆ ನಿಗದಿತ ಸಮಯಕ್ಕೆ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕೆಂದು ಪೊಲೀಸ್ ಮಹಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಣ್ಣುಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಡಿಪ್ಲೊಮ ಪ್ರವೇಶಾತಿ: ಅರ್ಜಿ ಆಹ್ವಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ