ಆ್ಯಪ್ನಗರ

ಮೌಲಾನಾ ಅಜಾದ್ ಮುಖ್ಯೋಪಾಧ್ಯಾಯರು, ಶಿಕ್ಷಕರ ನೇಮಕ: ಮೂಲ ದಾಖಲೆಗಳನ್ನು ಸಲ್ಲಿಸಲು ಸೂಚನೆ

ಅಲ್ಪಸಂಖ್ಯಾತರ ಇಲಾಖೆಯ ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು ಮತ್ತು ವಿವಿಧ ವಿಷಯಗಳ ಸಹ ಶಿಕ್ಷಕರುಗಳ ನೇಮಕಾತಿಗೆ ಸಂಬಂಧಿಸಿದಂತೆ...

Vijaya Karnataka Web 19 Jun 2020, 9:07 pm
ಅಲ್ಪಸಂಖ್ಯಾತರ ಇಲಾಖೆಯ ಅಲ್ಪಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು ಮತ್ತು ವಿವಿಧ ವಿಷಯಗಳ ಸಹ ಶಿಕ್ಷಕರುಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ಮೂಲ ದಾಖಲೆಗಳನ್ನು ಸಲ್ಲಿಸಲು ಸೂಚಿಸಿ ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಣೆ ಹೊರಡಿಸಿದೆ.
Vijaya Karnataka Web moulana azad head master document verification list
moulana azad head master document verification list


ಈ ಹುದ್ದೆಗಳಿಗೆ ದಿನಾಂಕ 06-02-2020, 14-02-2020, 10-03-2020, 24-04-2020 ರಂದು ಪ್ರಕಟಿಸಲಾದ ಆಯೋಗದ ಅರ್ಹತಾ ಪಟ್ಟಿಯಂತೆ, ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿಯಲ್ಲಿ ಕೋರಲಾದ ಮೀಸಲಾತಿಗಳಿಗನುಗುಣವಾಗಿ ಪೂರಕ ಪ್ರಮಾಣ ಪತ್ರಗಳು, ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪೂರಕ ಪ್ರಮಾಣ ಪತ್ರಗಳನ್ನು ಗೆಜೆಟೆಡ್ ಅಧಿಕಾರಿಯವರಿಂದ ದೃಢೀಕರಿಸಿ, ಅಭ್ಯರ್ಥಿಯ ಸಹಿ, ಹೆಸರು, ನೋಂದಣಿ ಸಂಖ್ಯೆಯನ್ನು ನಮೂದಿಸಿದ ಎರಡು ಜೆರಾಕ್ಸ್‌ ಪ್ರತಿಗಳನ್ನು ಎರಡು ಭಾವಚಿತ್ರ ಮತ್ತು ಯಾವುದಾದರೊಂದು ಗುರುತಿನ ಚೀಟಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೆಪಿಎಸ್‌ಸಿ ಸೂಚಿಸಿದೆ.

ದಾಖಲೆಗಳನ್ನು ತಲುಪಿಸಬೇಕಾದ ವಿಳಾಸ : ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001.

ಅಗ್ನಿಶಾಮಕ ಠಾಣಾಧಿಕಾರಿ ನೇಮಕ: ಲಿಖಿತ ಪರೀಕ್ಷೆ ಮಾದರಿ ಹೇಗಿರಲಿದೆ ಗೊತ್ತೇ?

ಈ ಮೇಲಿನ ವಿಳಾಸಕ್ಕೆ ಮುಖ್ಯೋಪಾಧ್ಯಾಯರು ಹುದ್ದೆಗಳ ಅಭ್ಯರ್ಥಿಗಳು ದಿನಾಂಕ - 26-06-2020 ರೊಳಗೆ ವಿವಿಧ ವಿಷಯಗಳ ಸಹ ಶಿಕ್ಷಕರ (ಕನ್ನಡ, ಇಂಗ್ಲಿಷ್, ಉರ್ದು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಹುದ್ದೆಗಳ ಅಭ್ಯರ್ಥಿಗಳು ದಿನಾಂಕ -01-07-2020 ರೊಳಗೆ ತಲುಪುವಂತೆ ಕಳುಹಿಸಬೇಕು. ಅಭ್ಯರ್ಥಿಗಳಿಗೆ ಈ ಬಗ್ಗೆ ಈಗಾಗಲೇ ಸೂಚನಾ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೊನಾ ನಿಯಂತ್ರಿಸುವ ಸಲುವಾಗಿ ಯಾವುದೇ ಕಾರಣಕ್ಕೂ ಆಯೋಗಕ್ಕೆ ಖುದ್ದಾಗಿ ಭೇಟಿ ನೀಡಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದಿಲ್ಲ.

ಮೂಲ ದಾಖಲೆಗಳನ್ನು ಕಳುಹಿಸುವ ಸಂದರ್ಭದಲ್ಲಿ ಲಕೋಟೆಯ ಮೇಲೆ ತಾವು ಅರ್ಹರಾಗಿರುವ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

ಕವಿಪ್ರನಿನಿ, ಎಸ್ಕಾಂಗಳ ಪರಿಚಾರಕ ಮತ್ತು ಪವರ್‌ಮ್ಯಾನ್‌ ಸಹನಾ ಶಕ್ತಿ ಪರೀಕ್ಷೆಗೆ 2ನೇ ಬಾರಿ ಆಯ್ಕೆಪಟ್ಟಿ ಪ್ರಕಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ