ಆ್ಯಪ್ನಗರ

ಕೆಎಎಸ್ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ: ಮುಖ್ಯ ಪರೀಕ್ಷೆಗೆ ಆಯ್ಕೆಪಟ್ಟಿ, ಕಟ್‌ಆಪ್‌ ಲಿಸ್ಟ್‌ ಇಲ್ಲಿದೆ..

ಕರ್ನಾಟಕ ಲೋಕಸೇವಾ ಆಯೋಗವು 2017-18ನೇ ಸಾಲಿನ ಗ್ರೂಪ್ 'ಎ' ಮತ್ತು ಗ್ರೂಪ್‌ 'ಬಿ' ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ..

Vijaya Karnataka Web 23 Oct 2020, 9:40 pm
ಕರ್ನಾಟಕ ಲೋಕಸೇವಾ ಆಯೋಗವು 2017-18ನೇ ಸಾಲಿನ ಗ್ರೂಪ್ 'ಎ' ಮತ್ತು ಗ್ರೂಪ್‌ 'ಬಿ' ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ಚೆಕ್‌ ಮಾಡಬಹುದು.
Vijaya Karnataka Web kpsc kas prelims exam result 2020
kpsc gazetted probationers prelims result 2020


2017-18ನೇ ಸಾಲಿನ ಗ್ರೂಪ್‌ 'ಎ' ಮತ್ತು ಗ್ರೂಪ್‌ 'ಬಿ' ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಮತ್ತು ವರ್ಗವಾರು ಸ್ಥಳೀಯ ವೃಂದದ ಕೊನೆ ಯ ಅಭ್ಯರ್ಥಿ ಹಾಗೂ ಹೈದೆರಾಬಾದ್ ಕರ್ನಾಟಕ ವೃಂದದ ಕೊನೆಯ ಅಭ್ಯರ್ಥಿ ಕಟ್‌ಆಫ್‌ ಅಂಕಗಳನ್ನು ಪ್ರಕಟಿಸಲಾಗಿದೆ.

ಆಯೋಗವು ಆಗಸ್ಟ್‌ 24 ರಂದು ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಪ್ರಿಲಿಮ್ಸ್‌ ಪರೀಕ್ಷೆ ನಡೆಸಿತ್ತು. ಕೊರೊನಾ ಕಾರಣ ಈ ಪರೀಕ್ಷೆಯನ್ನು ಹಲವು ಬಾರಿ ಮುಂದೂಡಲಾಗಿತ್ತು.

ಅತೀ ಹೆಚ್ಚು ಸಂಬಳ ನೀಡುವ ಭಾರತದ ಟಾಪ್‌ 10 ಸರ್ಕಾರಿ ಹುದ್ದೆಗಳು ಯಾವುವು ಗೊತ್ತೇ?

ಕೆಪಿಎಸ್‌ಸಿ ಕೆಎಎಸ್‌ ಮುಖ್ಯ ಪರೀಕ್ಷೆಯ ಅರ್ಹತಾ ಪಟ್ಟಿ ಮತ್ತು ಮುಖ್ಯ ಪರೀಕ್ಷೆಯ ಕಟ್‌ಆಫ್‌ ಅಂಕಗಳ ಪಟ್ಟಿಯನ್ನು ಚೆಕ್‌ ಮಾಡಲು ವೆಬ್‌ಸೈಟ್‌ ವಿಳಾಸ kpsc.kar.nic.in ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿರಿ.

KPSC KAS ಮುಖ್ಯ ಪರೀಕ್ಷೆಯ ಅರ್ಹತಾ ಪಟ್ಟಿ

KPSC KAS ಮುಖ್ಯ ಪರೀಕ್ಷೆಯ ಕಟ್‌ಆಫ್‌ ಅಂಕಗಳ ಪಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ