ಆ್ಯಪ್ನಗರ

ಆನ್‌ಲೈನ್‌ನಲ್ಲಿ ಕೆಪಿಎಸ್‌ಸಿ ದಾಖಲೆ ಪರಿಶೀಲನೆ

ಕರ್ನಾಟಕ ಲೋಕಸೇವಾ ಆಯೋಗವು ಮುಂದೂಡಿದ್ದ FDA, SDA ಹುದ್ದೆಗಳ ಭರ್ತಿಗೆ ಸಂಬಂಧ ಮೂಲ ದಾಖಲೆಗಳ ವೆರಿಫಿಕೇಶನ್ ಅನ್ನು ಈಗ ಆನ್‌ಲೈನ್‌ ಮೂಲಕ ನಡೆಸಲಾಗುತ್ತದೆ.

Vijaya Karnataka Web 18 May 2020, 6:43 pm

ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಮುಂದೂಡಿದ್ದ ನ್ಯಾಯಾಂಗ ಘಟಕಗಳಲ್ಲಿನ ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಸಂಬಂಧ ಮೂಲ ದಾಖಲೆಗಳ ವೆರಿಫಿಕೇಶನ್ ಅನ್ನು ಈಗ ಆನ್‌ಲೈನ್‌ ಮೂಲಕ ನಡೆಸಲಾಗುತ್ತದೆ.
Vijaya Karnataka Web kpsc document verification 2020
kpsc document verification 2020


ಅರ್ಹ ಅಭ್ಯರ್ಥಿಗಳು ಮೀಸಲಾತಿಗೆ ಅನುಗುಣವಾಗಿ ಜನ್ಮದಿನ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿ ಪೂರಕ ಪ್ರಮಾಣ ಪತ್ರಗಳ ಮೇಲೆ ಅಭ್ಯರ್ಥಿಗಳ ಸಹಿ, ಹೆಸರು, ನೋಂದಣಿ ಸಂಖ್ಯೆಯನ್ನು ನಮೂದಿಸಿ ಸ್ವಯಂ ದೃಢೀಕರಿಸಿ ಎರಡು ಭಾವಚಿತ್ರ, ಆನ್‌ಲೈನ್‌ ಅರ್ಜಿ / ಪ್ರವೇಶ ಪತ್ರದ ಪ್ರತಿ ಹಾಗೂ ಯಾವುದಾದರೊಂದು ಗುರುತಿನ ಚೀಟಿ ಹಾಗೂ ಆನ್‌ಲೈನ್‌ ಮೂಲಕ ನೀಡಲಾದ ಆಧ್ಯತಾ ಪ್ರತಿಯೊಂದಿಗೆ ಸ್ಪೀಡ್ ಪೋಸ್ಟ್‌ ಮೂಲಕ ಕಳಿಸಬೇಕು.

FDA, SDA 2018 ರ ನೇಮಕಾತಿಗೆ ಸಂಬಂಧಿಸಿದ ಶೀರ್ಷಿಕೆಯೊಂದಿಗೆ ಕಾರ್ಯದರ್ಶಿ, ಕೆಪಿಎಸ್‌ಸಿ, ಉದ್ಯೋಗ ಸೌಧ, ಬೆಂಗಳೂರು-01 ವಿಳಾಸಕ್ಕೆ ಮೇ 30 ರೊಳಗೆ ತಲುಪುವಂತೆ ಅಂಚೆಯ ಮೂಲಕ ದಾಖಲೆಗಳನ್ನು ಸಲ್ಲಿಸಬೇಕು.

ಕರ್ನಾಟಕ SSLC, PUC ಪರೀಕ್ಷೆ ದಿನಾಂಕ ನಿಗದಿ; ವೇಳಾಪಟ್ಟಿ ಇಲ್ಲಿದೆ

ಕೊರೊನಾ ಕಾರಣದಿಂದ ಅಭ್ಯರ್ಥಿಗಳಿಗೆ ಖುದ್ದು ಭೇಟಿ ನಿಷೇಧಿಸಲಾಗಿದೆ. ತಪ್ಪು ಮಾಹಿತಿ ಅಥವಾ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸುವವರ ವಿರುದ್ಧ ನಿಯಮದಂತೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ಜಿಲ್ಲೆ 500 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಆಯ್ಕೆಪಟ್ಟಿ ಪ್ರಕಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ