ಆ್ಯಪ್ನಗರ

ಎಸ್‌ಆರ್‌ಪಿಸಿ ಲಿಖಿತ ಪರೀಕ್ಷೆ ಅಂತಿಮ ಸರಿಯುತ್ತರಗಳು ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯು ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್‌ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) - 2420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ..

Vijaya Karnataka Web 11 Jan 2021, 9:01 pm
ಕರ್ನಾಟಕ ಪೊಲೀಸ್ ಇಲಾಖೆಯು ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್‌ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) - 2420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ 22-11-2020 ರಂದು ನಡೆಸಿದ ಲಿಖಿತ ಪರೀಕ್ಷೆಯ ಅಂತಿಮ ಸರಿಯುತ್ತರಗಳನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಪೊಲೀಸ್ ಇಲಾಖೆ ಅಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಸರಿಯುತ್ತರಗಳನ್ನು ಚೆಕ್‌ ಮಾಡಿಕೊಳ್ಳಬಹುದು.
Vijaya Karnataka Web srpc written exam final answer key 2020
srpc written exam final answer key 2020


ಕೆಎಸ್‌ಪಿಯು ದಿನಾಂಕ 30-11-2020 ರಂದು ಸದರಿ ಹುದ್ದೆಗಳ ಲಿಖಿತ ಪರೀಕ್ಷೆಗೆ ತಾತ್ಕಾಲಿಕ ಸರಿಯುತ್ತರ ಪ್ರಕಟಿಸಿತ್ತು. ಹಾಗೂ ಈ ಸರಿಯುತ್ತರಗಳಿಗೆ ಆಕ್ಷೇಪಣೆಯನ್ನು ಅಭ್ಯರ್ಥಿಗಳಿಂದ ಆಹ್ವಾನಿಸಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿ ಪ್ರಸ್ತುತ ಅಭ್ಯರ್ಥಿಗಳ ಮಾಹಿತಿಗಾಗಿ ಅಂತಿಮ ಸರಿಯುತ್ತರಗಳನ್ನು ಬಿಡುಗಡೆ ಮಾಡಲಾಗಿದೆ.

ಎಸ್‌ಆರ್‌ಪಿಸಿ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) (ಪುರುಷ ಮತ್ತು ಮಹಿಳಾ) 2420 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಫೈನಲ್ ಸರಿಯುತ್ತರಗಳನ್ನು ಚೆಕ್‌ ಮಾಡಲು ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ www.ksp.gov.in ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ

Final Answer Key For Post of Spl.RPC 2420

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ