ಆ್ಯಪ್ನಗರ

KSP Key Answer: ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ಕೀ ಉತ್ತರಗಳು ಪ್ರಕಟ

ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರಗಳನ್ನು ಡೌನ್‌ಲೋಡ್‌ ಮಾಡಲು ಕೆಎಸ್‌ಪಿ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ.

Vijaya Karnataka Web 19 Dec 2019, 5:10 pm
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ) (ಸಿಎಆರ್‌ / ಡಿಎಆರ್) ಹುದ್ದೆಗೆ ನಡೆಸಿದ್ದ ಲಿಖಿತ ಪರೀಕ್ಷೆಗೆ ಸಂಬಂಧಿಸಿದ, ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಸರಿ ಉತ್ತರ ತಿಳಿಯಲು ತಾತ್ಕಾಲಿಕ ಕೀ ಉತ್ತರಗಳನ್ನು ಸೀರೀಸ್‌ ಪ್ರಕಾರ ಡೌನ್‌ಲೋಡ್ ಮಾಡಿಕೊಂಡು ಚೆಕ್‌ ಮಾಡಿಕೊಳ್ಳಬಹುದು.
Vijaya Karnataka Web armed police constable key answer 2019
ksp armed police car dar key answer 2019


ಪೊಲೀಸ್ ಇಲಾಖೆಯು 1013 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ದಿನಾಂಕ 01-12-2019 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಗುರುವಾರ (ಡಿಸೆಂಬರ್ 19) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರಗಳನ್ನು ಡೌನ್‌ಲೋಡ್‌ ಮಾಡಲು ಕೆಎಸ್‌ಪಿ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ.

KSP Armed Police Constable Provisional Key Answer 2019

ಪ್ರಸ್ತುತ ಪ್ರಕಟಿಸಲಾಗಿರುವ ತಾತ್ಕಾಲಿಕ ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬಹುದು. ಡಿಸೆಂಬರ್ 26 ರ ನಂತರ ಬಂದ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಆಕ್ಷೇಪಣೆ ಅರ್ಜಿ ಸಲ್ಲಿಸಬೇಕಾದ ವಿಳಾಸ : ಹೆಚ್ಚುವರಿ ನಿರ್ದೇಶಕರು, ಜೆನೆರಲ್ ಪೊಲೀಸ್, ನೇಮಕಾತಿ, ಕಾರ್ಲ್‌ಟನ್ ಹೌಸ್, ಪ್ಯಾಲೇಸ್ ರೋಡ್, ಬೆಂಗಳೂರು-560 001.

ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ : 26-12-2019

ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ET, PST ಪರೀಕ್ಷೆ ಮುಂದೂಡಿಕೆ

ಈ ಹುದ್ದೆಗಳಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ