ಆ್ಯಪ್ನಗರ

ಸರ್ಕಾರಿ ನೌಕರರ ಅಮಾನತಿಗೆ ಮತ್ತಷ್ಟು ಕಟ್ಟುನಿಟ್ಟು ನಿಯಮಗಳು: ಆದೇಶ ಪ್ರಕಟ

ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕ ಅನಗತ್ಯ ಹೊರೆ , ನೌಕರರಿಗೆ ಕಿರುಕುಳ ತಪ್ಪಿಸಲು ಅಮಾನತು ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದು, ಸಂಬಂಧಿಸಿದ ನೀತಿಗಳನ್ನು ತಿದ್ದುಪಡಿ ಮಾಡಿದ ಅಧಿಕೃತ ಆದೇಶ ಪ್ರಕಟಿಸಿದೆ...

Vijaya Karnataka Web 26 Nov 2020, 9:53 am
ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕ ಅನಗತ್ಯ ಹೊರೆ , ನೌಕರರಿಗೆ ಕಿರುಕುಳ ತಪ್ಪಿಸಲು ಅಮಾನತು ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದು, ಸಂಬಂಧಿಸಿದ ನೀತಿಗಳನ್ನು ತಿದ್ದುಪಡಿ ಮಾಡಿದ ಅಧಿಕೃತ ಆದೇಶ ಪ್ರಕಟಿಸಿದೆ.
Vijaya Karnataka Web govt employees suspension rules
govt employees suspension rules


ಅಧಿಕಾರ ದುರ್ಬಳಕೆ, ಕರ್ತವ್ಯಲೋಪ ಹಾಗೂ ಇತರೆ ಆರೋಪಗಳಡಿ ಅಮಾನತಾದ ಸರ್ಕಾರಿ ಉದ್ಯೋಗಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು 6 ತಿಂಗಳು ಗಡುವು ವಿಧಿಸಲಾಗಿದೆ. ಸಕ್ಷಮ ಪ್ರಾಧಿಕಾರ ಇದರಲ್ಲಿ ವಿಫಲವಾದರೆ 6 ತಿಂಗಳು ಅವಧಿ ಪೂರ್ಣಗೊಂಡ ದಿನಾಂಕದಿಂದ ಅಮಾನತು ಆದೇಶ ತನ್ನಿಂದ ತಾನೇ (ಡೀಮ್ಡ್) ರದ್ದಾಗಲಿದೆ, ಹಾಗೂ ಲೋಕಾಯುಕ್ತ ಪ್ರಕರಣಗಳಿಗೂ ಇದೇ ನಿಯಮವನ್ನು ಅನ್ವಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 10 ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಬುಧವಾರ ಆದೇಶಿಸಿದೆ.

ರಾಮನಗರ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಉದ್ಯೋಗಾವಕಾಶ

ಸರ್ಕಾರಿ ನೌಕರರು ಅಮಾನತುಗೊಂಡ 6 ತಿಂಗಳ ಒಳಗೆ ಅಪಾದಿತ ನೌಕರನ ವಿರುದ್ಧ ಸಂಬಂಧಿಸಿದ ಇಲಾಖೆ ವಿಚಾರಣೆ ಪ್ರಾರಂಭಿಸಬೇಕು ಇಲ್ಲವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎಂದು ತಿದ್ದುಪಡಿ ನಿಯಮದಲ್ಲಿ ಸೂಚಿಸಲಾಗಿದೆ. ಈ ಅವಧಿಯೊಳಗೆ ತೀರ್ಮಾನ ಕೈಗೊಳ್ಳಲು ವಿಫಲವಾದರೆ ಅವಧಿ ಪೂರ್ಣಗೊಂಡ ದಿನಾಂಕದಿಂದ ಸ್ವಯಂಚಾಲಿತ (ಡೀಮ್ಡ್‌) ಆಧಾರದಲ್ಲಿ ಅಮಾನತು ರದ್ದಾಗಲಿದೆ.

ಅಮಾನತನಿಗೆ ಸಂಬಂಧಿಸಿದ ಪ್ರಮುಖ ಕ್ರಮಗಳು

- ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಖಲಿಸಿಕೊಂಡ ಪ್ರಕರಣಗಳಿಗೂ ಇದೇ ನಿಯಮ ಅನ್ವಯಿಸಲಾಗಿದೆ.

- ಅಮಾನತು ರದ್ದಾದ ಬಳಿಕ ಅಂತಹ ನೌಕರನ ನೇಮಕ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನು ತಕ್ಷಣವೇ ಕೋರಬೇಕು. ಇಲ್ಲವಾದರೆ ಕರ್ತವ್ಯಕ್ಕೆ ಅನಧಿಕೃತ ಗೈರಾಗಿದ್ದಾನೆ ಎಂದು ಪರಿಗಣಿಸಬೇಕು.

- ನಿಗದಿತ ಅವಧಿಯೊಳಗೆ ಇಲಾಖೆ ವಿಚಾರಣೆ ಪ್ರಾರಂಭ ಇಲ್ಲವೇ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಅಂತಹ ನೌಕರನನ್ನು ಪ್ರಾರಂಭ ಇಲ್ಲವೇ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಅಂತಹ ನೌಕರರನ್ನು ಮರು ಸೇವೆಗೆ ನಿಯುಕ್ತಿ ಕುರಿತು ಸಕ್ಷಮ ಪ್ರಾಧಿಕಾರಿಯು ನಿರ್ಧರಿಸಬಹುದಾಗಿದೆ.

- ಅಮಾನತು ತೆರವಾದ ಬಳಿಕ ಆ ನೌಕರನು ಯಾವ ಹುದ್ದೆ / ಸ್ಥಾನದಲ್ಲಿದ್ದಾಗ ಅಮಾನತಾಗಿದ್ದನೋ ಮತ್ತದೆ ಹುದ್ದೆ / ಸ್ಥಾನದಲ್ಲಿ ನೇಮಿಸುವಂತಿಲ್ಲ.

ದಲಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ವಿದ್ಯಾರ್ಹತೆ 4ನೇ ತರಗತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ