ಆ್ಯಪ್ನಗರ

ಕೊಡಗು ಸೈನಿಕ ಶಾಲೆಯಲ್ಲಿ ನೇಮಕ: ಅರ್ಜಿ ಸಲ್ಲಿಕೆಗೆ ಜುಲೈ 13 ಕೊನೆಯ ದಿನ

ಪದವಿ ಜೊತೆಗೆ ಬಿಎಡ್‌/ಡಿಎಡ್‌ ಮಾಡಿರುವ ಅಥವಾ ಬಿಎ, ಬಿಎಡ್‌ ಪೂರ್ಣಗೊಳಿಸಿರುವ, ಸಿಟಿಇಟಿ/ಟಿಇಟಿ ಅರ್ಹತೆ ಇರುವ ಅಭ್ಯರ್ಥಿಗಳು ಕೊಡಗು ಸೈನಿಕ ಶಾಲೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Vijaya Karnataka 3 Jul 2019, 11:17 am
ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ 21 ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅಂಚೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 13ರೊಳಗೆ ಅರ್ಜಿ ಕಳುಹಿಸಬಹುದು. ಇವು ಗುತ್ತಿಗೆಯಾಧಾರಿತ ಹುದ್ದೆಗಳಾಗಿರುತ್ತವೆ.
Vijaya Karnataka Web Job


ಹುದ್ದೆ ಮತ್ತು ಅರ್ಹತೆ
ಟ್ರೇನ್ಡ್‌ ಗ್ರ್ಯಾಜುಯೇಟ್‌ ಟೀಚರ್‌: ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಜೊತೆಗೆ ಬಿಎಡ್‌/ಡಿಎಡ್‌ ಮಾಡಿರುವ ಅಥವಾ ಬಿಎ, ಬಿಎಡ್‌ ಪೂರ್ಣಗೊಳಿಸಿದ್ದು, ಸಿಟಿಇಟಿ/ಟಿಇಟಿ ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಟ್‌ ಮಾಸ್ಟರ್‌: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರಾಯಿಂಗ್‌ ಅಥವಾ ಪೇಂಟಿಂಗ್‌ನಲ್ಲಿ ಪದವಿ ಅಥವಾ ಆರ್ಟ್‌/ ಫೈನ್‌ ಆರ್ಟ್‌ನಲ್ಲಿ ಪದವಿ ಅಥವಾ ಎಂಎ ಮಾಡಿರಬೇಕು ಅಥವಾ ಹೈಯರ್‌ ಸೆಕೆಂಡರಿ/ ಇಂಟರ್‌ಮೀಡಿಯೇಟ್‌/ ಸೀನಿಯರ್‌ ಸೆಕೆಂಡರಿ ಎಗ್ಸಾಮಿನೇಷನ್‌ ಜೊತೆಗೆ ಪೇಂಟಿಂಗ್‌/ ಫೈನ್‌ ಆರ್ಟ್ಸ್ ನಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಮಾಡಿರಬೇಕು.

ಕ್ರಾಫ್ಟ್‌ ಇನ್‌ಸ್ಟ್ರಕ್ಟರ್‌: ಎಸ್‌ಎಸ್‌ಎಲ್‌ಸಿ ತೇರ್ಗಡೆ ಮತ್ತು ಎರಡು ವರ್ಷದ ಟ್ರೇಡ್‌ ಸರ್ಟಿಫಿಕೇಟ್‌ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡುವ ಪರಿಣತಿ ಹೊಂದಿರಬೇಕು.

ಬ್ಯಾಂಡ್‌ ಮಾಸ್ಟರ್‌: ಎಇಸಿ ಟ್ರೇನಿಂಗ್‌ ಕಾಲೇಜಿನಿಂದ ಪೊಟೆನ್ಷಯಲ್‌ ಬ್ಯಾಂಡ್‌ ಮಾಸ್ಟರ್‌/ ಬ್ಯಾಂಡ್‌ ಮೇಜರ್‌/ ಡ್ರಮ್‌ ಮೇಜರ್‌ ಕೋರ್ಸ್‌ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬ್ಯಾಂಡ್‌ ಮಾಸ್ಟರ್‌ ಆಗಿ ಕನಿಷ್ಠ ಮೂರು ವರ್ಷ ಕೆಲಸ ಮಾಡಿದವರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹಾರ್ಸ್‌ ರೈಡಿಂಗ್‌ ಇನ್‌ಸ್ಟ್ರಕ್ಟರ್‌: ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ಮತ್ತು ರೇಸ್‌ಕೋರ್ಸ್‌ ಕ್ಲನ್‌/ ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಮೂರು ವರ್ಷ ಹಾರ್ಸ್‌ ರೈಡಿಂಗ್‌ ಇನ್‌ಸ್ಟ್ರಕ್ಟರ್‌ ಆಗಿ ಕೆಲಸ ಮಾಡಿದವರು ಅರ್ಜಿ ಸಲ್ಲಿಸಬಹುದು.

ವಾರ್ಡ್‌ಬಾಯ್‌ ಮತ್ತು ಜನರಲ್‌ ಎಂಪ್ಲಾಯ್‌: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಜೊತೆಗೆ ನಿಗದಿತ ಸೇವಾನುಭವ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ: ವಾರ್ಡ್‌ ಬಾಯ್‌ ಮತ್ತು ಜನರಲ್‌ ಎಂಪ್ಲಾಯ್‌ ಹುದ್ದೆಗಳಿಗೆ 18ರಿಂದ 50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹಾರ್ಸ್‌ ರೈಡಿಂಗ್‌ ಇನ್‌ಸ್ಟ್ರಕ್ಟರ್‌ ಹುದ್ದೆಗಳಿಗೆ 21ರಿಂದ 50 ವರ್ಷದೊಳಗಿನವರು ಮತ್ತು ಉಳಿದೆಲ್ಲಾ ಹುದ್ದೆಗಳಿಗೆ 21ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ನಿಗದಿ ಪಡಿಸಿರುವ 300 ರೂ. ಅರ್ಜಿ ಶುಲ್ಕವನ್ನು 'ದಿ ಪ್ರಿನ್ಸಿಪಾಲ್‌, ಸೈನಿಕ ಶಾಲೆ, ಕೊಡಗು' ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಲು ಸೂಚಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ವೆಬ್‌ನಲ್ಲಿ ಒದಗಿಸಲಾಗಿದ್ದು, ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ, ಡಿಡಿಯೊಂದಿಗೆ ಸಲ್ಲಿಸಬೇಕಿರುತ್ತದೆ.

ಒಟ್ಟು ಹುದ್ದೆಗಳು ಸಂಖ್ಯೆ: 21
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 13, 2019
ಅರ್ಜಿ ಕಳುಹಿಸಲು ವಿಳಾಸ: The Principal, Sainik School Kodagu, PO:Kudige, Somwarpet Taluk, Dist. Kodagu, Karnataka. PIN–571 232.
ಹೆಚ್ಚಿನ ಮಾಹಿತಿಗೆ: www.sainikschoolkodagu.edu.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ