ಆ್ಯಪ್ನಗರ

24 ಗಂಟೆಯೊಳಗೆ ಹೊಸ ಉದ್ಯೋಗ ಹುಡುಕಲು ಈ ಟಿಪ್ಸ್‌ಗಳನ್ನು ಫಾಲೋ ಮಾಡಿ..

ಪ್ರಸ್ತುತದ ಉದ್ಯೋಗ ಬೋರ್‌ ಆಗಿದೆಯೇ? ಹೊಸ ಉದ್ಯೋಗ ಮತ್ತು ಕಂಪನಿಗೆ ಸೇರಬೇಕೆ? ಹೊಸ ಉದ್ಯೋಗ ಹುಡುಕುವ, ಪ್ರಸ್ತುತ ಜಾಬ್‌ ಬೋರ್‌ ಆಗಿ ಮಾನಸಿಕ ಒತ್ತಡ ಅನುಭವಿಸುವವರಿಗಾಗಿಯೇ..

Vijaya Karnataka Web 16 Nov 2020, 4:14 pm
ಪ್ರಸ್ತುತದ ಉದ್ಯೋಗ ಬೋರ್‌ ಆಗಿದೆಯೇ? ಹೊಸ ಉದ್ಯೋಗ ಮತ್ತು ಕಂಪನಿಗೆ ಸೇರಬೇಕೆ? ಹೊಸ ಉದ್ಯೋಗ ಹುಡುಕುವ, ಪ್ರಸ್ತುತ ಜಾಬ್‌ ಬೋರ್‌ ಆಗಿ ಮಾನಸಿಕ ಒತ್ತಡ ಅನುಭವಿಸುವವರಿಗಾಗಿಯೇ.. 24 ಗಂಟೆಯೊಳಗೆ ಜಾಬ್‌ ಹುಡುಕಲು ಕೆಲವು ಸುಲಭ ಮತ್ತು ಸರಳವಾದ ಹ್ಯಾಕ್ಸ್‌ ಇಲ್ಲಿ ತಿಳಿಸಲಾಗಿದೆ. ಈ ಟಿಪ್ಸ್‌ಗಳು ಉದ್ಯೋಗ ಹುಡುಕಲು ಪ್ರತಿಯೊಬ್ಬರಿಗೂ ಸಹಾಯಕವಾಗಲಿವೆ. ಅವುಗಳನ್ನು ಈ ಕೆಳಗಿನಂತೆ ಓದಿ ತಿಳಿಯಿರಿ.
Vijaya Karnataka Web how to find a new job quickly
how to find a new job quickly


- ಉತ್ತಮ ಕರಿಯರ್‌ ಮಾರ್ಗದರ್ಶನಕ್ಕಾಗಿ ನೀವು ಯಾರನ್ನು ನಂಬಿದ್ದೀರೋ ಅವರಲ್ಲಿ ಹೊಸ ಉದ್ಯೋಗಕ್ಕಾಗಿ ಅಪ್ರೋಚ್ ಮಾಡಿರಿ. ಅವರೊಂದಿಗೆ ನೀವು ಹೊಸ ಕಂಪನಿ, ಉದ್ಯೋಗಕ್ಕೆ ಬದಲಾಗಲು ಕಾರಣ, ಹತಾಸೆಗಳನ್ನು ತಿಳಿಸಿ. ನಂತರ ಅವರು ತಿಳಿಸುವ ಟಿಪ್‌ಗಳನ್ನು ನಿಮ್ಮ ರೆಸ್ಯೂಮ್‌ಗೂ ಅಳವಡಿಸಿಕೊಳ್ಳಿ.

- ನಿಮ್ಮ ಸಹೋದ್ಯೋಗಿಗಳೊಂದಿಗೆ ಹೊಸ ಉದ್ಯೋಗ ಹುಡುಕಲು, ಪ್ರೊಫೇಶನಲ್ ಕರಿಯರ್‌ಗೆ ಹೆಲ್ಪ್‌ ಮಾಡಲು ಕೇಳಿ. ನಿಮ್ಮ ಸಹೋದ್ಯೋಗಿಗಳಲ್ಲಿ ಯಾರು ಉತ್ತಮ ಕಾಂಟ್ಯಾಕ್ಟ್‌ಗಳನ್ನು ಹೊಂದಿರುತ್ತಾರೆ ಎಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ ಉತ್ತಮ ರಿಲೇಶನ್‌ಶಿಪ್‌ ಅನ್ನು ಎಲ್ಲರೊಂದಿಗೂ ಇಟ್ಟುಕೊಂಡಿರಿ. ಆದರೆ ಗಾಸಿಪ್‌ ಆಗುವ ಮಾಹಿತಿಗಳನ್ನು ಶೇರ್‌ ಮಾಡುವುದನ್ನು ನಿಲ್ಲಿಸಿ.

KPSC ಅನ್ನು ರದ್ದು ಪಡಿಸುವುದೇ ಸೂಕ್ತ: ಹೈಕೋರ್ಟ್ ಹೇಳಿಕೆ

- ರೆಸ್ಯೂಮ್‌ ಅನ್ನು ರೆಡಿ ಮಾಡಿ ಇಟ್ಟುಕೊಂಡಿರಿ. ಅವಕಾಶಗಳು ಬಂದ ತಕ್ಷಣ ನಿಮ್ಮ ರೆಡಿ ರೆಸ್ಯೂಮ್‌ ಅನ್ನು ತಕ್ಷಣ ಶೇರ್ ಮಾಡುವುದನ್ನು ಮರೆಯದಿರಿ. ಇದರಿಂದ ನಿಮ್ಮ ಆಸಕ್ತಿ ಮತ್ತು ಉತ್ಸಾಹ ಎರಡನ್ನು ನೇಮಕಾತಿದಾರರಲ್ಲಿ ತೋರಲು ಉತ್ತಮ ಮಾರ್ಗ ಇದೇ ಎಂದೇಳಬಹುದು. ಅಲ್ಲದೇ ಕೊನೆ ಕ್ಷಣದಲ್ಲಿ ಎಡಿಟ್ ಮಾಡುವುದನ್ನು ತಪ್ಪಿಸಬಹುದು.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯನ್ನು ಕೆಲಸದಿಂದ ತೆಗೆಯಲಿರುವ ಸೂಚನೆಗಳಿವು...

- ನಿಮ್ಮ ಪ್ರೊಫೇಶನಲ್ ನೆಟ್‌ವರ್ಕ್‌ಗಳಲ್ಲಿ ಜಾಬ್‌ ಬದಲಾಯಿಸಲು ಸರ್ಚ್‌ ಮಾಡುತ್ತಿರುವ ಕುರಿತು ಹೇಳಿ ಮತ್ತು ಅವರಿಗೆ ಒಂದು ಇ-ಮೇಲ್‌ ಬರೆಯಿರಿ. ನಿಮ್ಮ ಇ-ಮೇಲ್ ಪ್ರಸ್ತುತ ಯಾವ ಹುದ್ದೆ ನಿರ್ವಹಿಸುತ್ತಿದ್ದೀರಿ, ಮುಂದೆ ಯಾವ ಹುದ್ದೆಗೆ ಹೋಗಬೇಕು, ಅಪ್‌ಡೇಟ್ ಮಾಡಲಾದ ರೆಸ್ಯೂಮ್‌ ಅನ್ನು ಒಳಗೊಂಡಿರಲಿ. ಅಲ್ಲದೇ ನಿಮಗೆ ಸಹಾಯ ಆಗುವಂತಹವರೊಂದಿಗೆ ಕನೆಕ್ಟ್‌ ಮಾಡಲು ಇ-ಮೇಲ್‌ನ ಕೊನೆಯಲ್ಲಿ ಕೇಳಿಕೊಳ್ಳಿ.

2000 ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ