ಆ್ಯಪ್ನಗರ

ಎಸ್‌ಎಸ್‌ಸಿ ಸಿಜಿಎಲ್ ಲೆವೆಲ್ 2 ಪರೀಕ್ಷೆಗೆ ಸಿದ್ಧತೆ ಹೇಗೆ? ಹೆಚ್ಚು ಅಂಕ ಗಳಿಸುವುದು ಹೇಗೆ?

ಸ್ಟಾಫ್‌ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್‌ ಲೆವೆಲ್ 2 ಪರೀಕ್ಷೆ ಸಿದ್ಧತೆಗೆ ಸಲಹೆಗಳು ಇಲ್ಲಿವೆ.

Vijaya Karnataka Web 9 May 2020, 6:31 pm
ಕೇಂದ್ರ ಲೋಕಸೇವಾ ಆಯೋಗದ ನಂತರ ವಿದ್ಯಾರ್ಥಿಗಳಿಗೆ ಬಹುಮುಖ್ಯ ಎನಿಸುವ ಪರೀಕ್ಷೆ ಸಿಬ್ಬಂದಿ ಆಯ್ಕೆ ಆಯೋಗ ನಡೆಸುವ ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್‌ 2 ಪರೀಕ್ಷೆ ಆಗಿದೆ. ಹಲವು ಅಭ್ಯರ್ಥಿಗಳು ಈ ಪರೀಕ್ಷೆ ಪಾಸ್ ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಹಾಗೆ ಈ ಪರೀಕ್ಷೆ ಪಾಸ್ ಮಾಡಲು ಓದಲು ಕೂರುವ ಮೊದಲು ಪರೀಕ್ಷಾ ವಿಧಾನ, ಎಷ್ಟು ಪೇಪರ್ ಗಳಿರುತ್ತವೆ ಎಂದು ತಿಳಿದುಕೊಳ್ಳುವುದು ಉತ್ತಮ ತಯಾರಿಯ ಮೊದಲ ಹಂತವಾಗಿದೆ.
Vijaya Karnataka Web staff selection commission cgl tier ii preparation tips in kannada check here
ಎಸ್‌ಎಸ್‌ಸಿ ಸಿಜಿಎಲ್ ಲೆವೆಲ್ 2 ಪರೀಕ್ಷೆಗೆ ಸಿದ್ಧತೆ ಹೇಗೆ? ಹೆಚ್ಚು ಅಂಕ ಗಳಿಸುವುದು ಹೇಗೆ?



ಪ್ರಶ್ನೆ ಪತ್ರಿಕೆಗಳು

SSC CGL Tier 2 ಪರೀಕ್ಷೆಯಲ್ಲಿ 2 ಪ್ರಶ್ನೆ ಪತ್ರಿಕೆಗಳಿದ್ದು, 200 ಅಂಕಗಳಿಗೆ 200 ಪ್ರಶ್ನೆಯ ಇಂಗ್ಲಿಷ್ ಭಾಷೆ ಮತ್ತು ಗ್ರಹಿಕೆ ಪೇಪರ್ ಇರುತ್ತದೆ. ಹಾಗೂ 200 ಅಂಕಗಳ 100 ಪ್ರಶ್ನೆ ಇರುವ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪೇಪರ್ ಇರುತ್ತದೆ. ಪ್ರತಿ ಪೇಪರ್‌ಗೂ 2 ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಈ ವಿಷಯಗಳು ಅಭ್ಯರ್ಥಿಗಳ ಬುದ್ಧಿವಂತಿಕೆಯನ್ನು ಮೌಲ್ಯಮಾಪನ ಮಾಡಲು ಸಹಾಯಕವಾಗಿರುತ್ತವೆ.

ಪರೀಕ್ಷೆ ಪಾಸ್‌ ಮಾಡಲು ಬೇಕಾದ ಪ್ರಮುಖ ಸಾಮರ್ಥ್ಯಗಳು

- ಕಡಿಮೆ ಸಮಯದಲ್ಲಿ ವೇಗವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು.

- ನಿಖರ ಉತ್ತರಗಳಿಗೆ ಮೊದಲು ಉತ್ತರಿಸಬೇಕು.

- ಸಮಸ್ಯೆಗಳನ್ನು ಬಿಡಿಸಲು ಶಾರ್ಟ್‌ಕಟ್ ವಿಧಾನ ಅನುಸರಿಸುವುದು.

- ಸುಲಭ ಪ್ರಶ್ನೆಗಳನ್ನು ಮೊದಲು ಬಿಡಿಸಲು ಗಮನಹರಿಸಬೇಕು.

- ಕೆಲವೊಮ್ಮೆ ತುಂಬಾ ಸಮಯ ತೆಗೆದುಕೊಳ್ಳುವ ಪ್ರಶ್ನೆಗೆ ಉತ್ತರ ಗೊತ್ತು ಎಂಬ ಕಾರಣಕ್ಕೆ ಸಮಯ ಹಾಳು ಮಾಡಬಾರದು.

ಪರೀಕ್ಷೆಗೆ ಕೂರುವ ಮುನ್ನ ನೆನಪಿಡಬೇಕಾದ ಅಂಶಗಳು

- ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್‌ ಅಂಕಗಳು ಇರುತ್ತವೆ.

- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.50 ನೆಗೆಟಿವ್‌ ಅಂಕಗಳು ಇರುತ್ತವೆ.

- ಮೊದಲ ಪೇಪರ್ ಮತ್ತು ಎರಡನೇ ಪೇಪರ್ ಪರೀಕ್ಷೆ ನಡುವೆ 2 ತಾಸು ಸಮಯ ಗ್ಯಾಪ್‌ ಇರುತ್ತದೆ. ಈ ವೇಳೆ ಅಗತ್ಯ ಟಾಪಿಕ್‌ಗಳ ಪುನರಾವರ್ತನೆ ಮಾಡಬಹುದು.

- ಎಲ್ಲಾ ರೀತಿಯ ಹುದ್ದೆಗಳಿಗೂ ಎರಡು ಪೇಪರ್‌ಗಳು ಕಡ್ಡಾಯ.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚು ಅಂಕಗಳಿಸಲು ಈ ಟಿಪ್ಸ್‌

- ಗಣಿತ ಪ್ರಶ್ನೆಗಳಿಗೆ ಹೆಚ್ಚು ಸಮಯ ನಿಗದಿ ಮಾಡಿ. ನೀವು, ನಿಮ್ಮ ಅಲೋಚನೆ ಎಲ್ಲೇ ಇದ್ದರೂ ಸಹ ಅಂದಿನ ದಿನದ ಗಣಿತ ಪ್ರಶ್ನೆಗಳ ಅಭ್ಯಾಸ ಮುಗಿಯಬೇಕು.

- ಕನಿಷ್ಟ 3-4 ಗಂಟೆಗಳ ಸಮಯ ಪರೀಕ್ಷಾ ತಯಾರಿಗಾಗಿ ಮೀಸಲಿಡಿ.

- ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳು ಕಠಿಣವಾಗಿರುವುದಿಲ್ಲ. ಸುಲಭದ ಪ್ರಶ್ನೆಗಳು ಇರುತ್ತವೆ. ಆದ್ದರಿಂದ ತಯಾರಿ ಈ ಎರಡು ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಮಿಶ್ರಿತವಾಗಿರಲಿ.

- ಕೇವಲ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮಾತ್ರವಲ್ಲದೇ ಅಣಕು ಪರೀಕ್ಷೆ ತೆಗೆದುಕೊಂಡು ಅಭ್ಯಾಸ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ವೇಗ ಹೆಚ್ಚಿಸಿಕೊಳ್ಳಬಹುದು.

- ಪ್ರತಿ ಪ್ರಶ್ನೆ ಪತ್ರಿಕೆ ಬಿಡಿಸಿದ ನಂತರ ಹೆಚ್ಚು ಸಮಯ ತೆಗೆದುಕೊಂಡ ಪ್ರಶ್ನೆಗಳ ಬಗ್ಗೆ ಗಮನಹರಿಸಿ.

ಶಾರ್ಟ್‌ ಕಟ್ ವಿಧಾನ ಬಳಸಿ

- ಗಣಿತ ಪ್ರಶ್ನೆಗಳನ್ನು ಬಿಡಿಸಲು ಶಾರ್ಟ್‌ಕಟ್ ಬಳಸಿ. ಸಾಮಾನ್ಯವಾಗಿ ಬಳಸುವ ಶಾರ್ಟ್‌ಕಟ್‌ ಅನ್ನೇ ಯಾವಾಗಲು ಬಳಸಿ. ಸಮಯ ಉಳಿಸಿಕೊಳ್ಳಬಹುದು.

- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸುವಾಗ ಹೊಸ ಬಗೆಯ ಪ್ರಶ್ನೆಗಳು ಇದ್ದಲ್ಲಿ, ಅವುಗಳಿಗೆ ಸರಳವಾಗಿ ಉತ್ತರಿಸಲು ಉಪಾಯ ಕಂಡುಕೊಳ್ಳಿ.

- ದೀರ್ಘ ಸಮಯ ತೆಗೆದುಕೊಂಡ ಪ್ರಶ್ನೆಗೆ ಶಾರ್ಟ್‌ಕಟ್‌ ಹುಡುಕಿಕೊಂಡು ಉತ್ತರಿಸಲು ಪ್ರಯತ್ನಿಸಿ. ಹೀಗೆ ಮಾಡದಿದ್ದಲ್ಲಿ, ಪರೀಕ್ಷೆಯಲ್ಲಿ ನಿಮ್ಮ ಕಾರ್ಯಕ್ಷಮತೆ ಕ್ಷೀಣಿಸುತ್ತದೆ.

- ಹೊಸ ಟೆಸ್ಟ್‌ ತೆಗೆದುಕೊಂಡಾಗ ಎಲ್ಲಿ ಮಿಸ್‌ಟೇಕ್‌ ಮಾಡುತ್ತಿದ್ದೇನೆ ಎಂದು ಕಂಡುಕೊಳ್ಳಿ. ನೋಟ್‌ಬುಕ್‌ ನಲ್ಲಿ ಬರೆದುಕೊಂಡು ಪರೀಕ್ಷೆಗೆ ಹೋಗುವ ಮೊದಲು ನೋಡಿಕೊಳ್ಳಿ.

- ನಿಮ್ಮ ಸಾಮರ್ಥ್ಯವನ್ನು Test Series ಮೂಲಕ ಅಭಿವೃದ್ಧಿಪಡಿಸಿಕೊಳ್ಳಿ.

- ಪ್ರಶ್ನೆ ಓದುವಾಗ ನಿರ್ದಿಷ್ಟ ಸಮಯ ನೀಡಿ. ಆಗ ಮಾತ್ರ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.

ಇಂಗ್ಲಿಷ್ ಪತ್ರಿಕೆಯಲ್ಲಿ ಹೆಚ್ಚು ಸ್ಕೋರ್ಗೆ ಸಲಹೆಗಳಿವು

- 2 ತಾಸುಗಳನ್ನು ಇಂಗ್ಲಿಷ್ ಕಾಂಪ್ರೆಹೆನ್ಸನ್ ಅಭ್ಯಾಸಕ್ಕಾಗಿ ದಿನನಿತ್ಯ ನೀಡಿ. ಈ ಕೆಳಗಿನ ಸಲಹೆಗಳನ್ನು ಫಾಲೋ ಮಾಡುವ ಮೂಲಕ 160 ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಸಾಧ್ಯತೆ ಇದೆ.

- ಹೊಸ ಪದಗಳನ್ನು ಕಲಿಯುವ ಮೂಲಕ ದಿನವನ್ನು ಆರಂಭಿಸಿ. ಆ ಪದಗಳನ್ನು ನೋಟ್‌ಬುಕ್‌ನಲ್ಲಿ ಬರೆದಿಟ್ಟುಕೊಳ್ಳಿ ಮತ್ತು ಓದುವಿಕೆ ಬಿಡುವಿನಲ್ಲಿ ಆ ಪದಗಳ ಕಡೆ ಆಗಾಗ ಗಮನಹರಿಸಿ.

- ಹೊಸ ಪದಗಳನ್ನು ಹೆಚ್ಚು ಹೆಚ್ಚು ಕಲಿಯಲು ಇಂಗ್ಲಿಷ್ ಕ್ವಿಜ್‌ ತೆಗೆದುಕೊಳ್ಳಿ.

- ಮೊಬೈಲ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ಕ್ವಿಜ್‌ ತೆಗೆದುಕೊಳ್ಳಬಹುದು.

- ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಹೊಸದಾಗಿ ಸೇರಿಸಿದ ಪಠ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಿ.

- ಕಠಿಣ ಪರಿಶ್ರಮ ಮತ್ತು ಅಭ್ಯಾಸ ಇಲ್ಲದೇ ವಾಯ್ಸ್‌ ಮತ್ತು ನರೇಶನ್‌ ವಿಷಯಗಳು ನಿಯಮಗಳ ಆಧಾರದಲ್ಲಿದ್ದು, ಹೆಚ್ಚು ಸ್ಕೋರ್ ಮಾಡಬಹುದು.

- ಪರೀಕ್ಷೆಯಲ್ಲಿ ಒತ್ತಡ ಕಡಿಮೆ ಮಾಡಲು ಮೊದಲಾರ್ಧದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

- 50-55 ಕ್ಕೂ ಹೆಚ್ಚು ಪ್ರಶ್ನೆಗಳು ಓದುವ ಹವ್ಯಾಸಕ್ಕೆ ಸಂಬಂಧಪಟ್ಟಿರುತ್ತವೆ. ಆದ್ದರಿಂದ ಇಂಗ್ಲಿಷ್ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಿ.

ರಿವಿಷನ್ ಮರೆಯದಿರಿ

ಪುನರಾವರ್ತನೆ ಪ್ರಮುಖ ಅಂಶ ಎಂಬುದನ್ನು ಮರೆಯದಿರಿ. ಈ ಸಮಯದಲ್ಲಿ ಹೆಚ್ಚು ರಿಲ್ಯಾಕ್ಸ್ ಆಗಿಯೇ ಓದಿಕೊಳ್ಳಿ. ಪರೀಕ್ಷೆ ಹತ್ತಿರ ಬಂದಹಾಗೆ ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಇದನ್ನು ಕಡಿಮೆ ಮಾಡಲು ಸರಳ ವ್ಯಾಯಾಮಗಳನ್ನು ಮಾಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ