ಆ್ಯಪ್ನಗರ

ಹೊಸ ಉದ್ಯೋಗಕ್ಕಾಗಿ ಅಭ್ಯರ್ಥಿ ತನ್ನನ್ನು ಉತ್ತಮ ಬ್ರ್ಯಾಂಡ್‌ ಮಾಡಿಕೊಳ್ಳುವುದು ಹೇಗೆ?

ಉದ್ಯೋಗ ಹುಟುಕಾಟ ಸಮಯದಲ್ಲಿ ಅಭ್ಯರ್ಥಿ ತನ್ನನ್ನು ತಾನು ಉತ್ತಮ ಬ್ರ್ಯಾಂಡ್ ಆಗಿ ಕ್ರಿಯೇಟ್‌ ಮಾಡಿಕೊಳ್ಳಲು ಇಲ್ಲಿವೆ ಸುಲಭ ಟಿಪ್ಸ್‌ಗಳು.

Vijaya Karnataka Web 22 Oct 2020, 2:20 pm
ಉದ್ಯೋಗ ಹುಡುಕಾಟ ರೆಸ್ಯೂಮ್‌ನಿಂದ ಆರಂಭವಾಗುತ್ತದೆ. ನೇಮಕಾತಿದಾರರು ಮೊದಲು ಪರಿಗಣಿಸುವ ದಾಖಲೆ ಎಂದರೆ ಅದು ರೆಸ್ಯೂಮ್‌. ಇನ್ನೂ ಸಂದರ್ಶನಕ್ಕೆ ಆಯ್ಕೆಯಾದ ನಂತರ ಕಾನ್ಫಿಡೆನ್ಸ್‌, ಸಂವಹನ ಕೌಶಲ ಮತ್ತು ಇತರೆ ಕೌಶಲಗಳು ಉದ್ಯೋಗಕ್ಕೆ ಆಯ್ಕೆಮಾಡಲು ಸಜ್ಜುಗೊಳಿಸುವ ಇತರೆ ಅಗತ್ಯಾಂಶಗಳು.
Vijaya Karnataka Web top ways to use personal branding to enhance job search in kannada check here
ಹೊಸ ಉದ್ಯೋಗಕ್ಕಾಗಿ ಅಭ್ಯರ್ಥಿ ತನ್ನನ್ನು ಉತ್ತಮ ಬ್ರ್ಯಾಂಡ್‌ ಮಾಡಿಕೊಳ್ಳುವುದು ಹೇಗೆ?


ಉದ್ಯೋಗ ಗಿಟ್ಟಿಸುವ ವೇಳೆ ಅಭ್ಯರ್ಥಿಗಳು ತಮ್ಮನ್ನು ಉತ್ತಮ ಬ್ರ್ಯಾಂಡ್‌ ಮಾಡಿಕೊಳ್ಳುವುದು ಹೇಗೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

​ಬ್ರ್ಯಾಂಡಿಂಗ್ ಸ್ಟೇಟ್ಮೆಂಟ್ ಕ್ರಿಯೇಟ್ ಮಾಡಿ

ಬ್ರ್ಯಾಂಡಿಂಗ್ ಸ್ಟೇಟ್‌ಮೆಂಟ್‌ ಶಾರ್ಟ್‌ ಮತ್ತು ಆಕರ್ಷಕವಾಗಿರಬೇಕು. ಇದು ಇತರೆ ಅಭ್ಯರ್ಥಿಗಳಿಗಿಂತ ನಿಮ್ಮನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಅಣಿಗೊಳಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಕೆಲಸಕ್ಕೆ ಸಂಬಂಧಪಟ್ಟಂತೆ ಅಥವಾ ಮುಂದಿನ ಭವಿಷ್ಯದ ಗೋಲ್‌ಗೆ ಸಂಬಂಧಪಟ್ಟಂತೆ ಅನನ್ಯವಾದ ವಾಕ್ಯವನ್ನು ರೆಸ್ಯೂಮ್‌ನಲ್ಲಿ ಬರೆಯಬೇಕು.

ಪ್ಲಾನ್‌

ಶಿಕ್ಷಣ ಪಡೆಯುವ ಹಂತದಲ್ಲೇ ಅಥವಾ ಶಿಕ್ಷಣ ಮುಗಿಸಿದ ನಂತರವಾದರೂ ಸರಿ, ಕುಳಿತು ಒಂದು ಉತ್ತಮ ಪ್ಲಾನ್‌ ಅನ್ನು ಸಿದ್ಧತೆಗೊಳಿಸಬೇಕು. ಅಂದರೆ ಮುಂದೆ ಏನು ಮಾಡಬೇಕು, ಗುರಿಗಳೇನು, ಆ ಗುರಿಗಳನ್ನು ಮುಟ್ಟಲು ಸರಿಯಾದ ದಾರಿಗಳು ಯಾವುವು ಎಂದು ಪ್ಲಾನ್‌ಗಳನ್ನು ಬರೆದಿಟ್ಟುಕೊಳ್ಳಬೇಕು.

​ಸಾಮಾಜಿಕ ಜಾಲತಾಣ ಖಾತೆಗಳ ಅಪ್‌ಡೇಟ್‌

ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ರೆಸ್ಯೂಮ್‌ನಲ್ಲಿ ನೀಡಲಾದ ಮಾಹಿತಿಗಳು ಮ್ಯಾಚ್‌ ಆಗಬೇಕು. ನೇಮಕಾತಿದಾರರು ಈ ಮಾಹಿತಿಗಳನ್ನು ಪರಿಶೀಲನೆ ಮಾಡುತ್ತಾರೆ. ಆದ್ದರಿಂದ ಅಭ್ಯರ್ಥಿಯ ಅನುಭವಗಳನ್ನು ಕರಿಯರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಡೇಟ್‌ ಮಾಡಿರಬೇಕು.

ಬಿ.ಟೆಕ್ ಪದವೀಧರರಿಗೆ ಖಾಸಗಿ ವಲಯ ಮತ್ತು ಸರ್ಕಾರಿ ವಲಯ ಉದ್ಯೋಗದಲ್ಲಿ ಯಾವುದು ಬೆಸ್ಟ್‌?

​ರೀಬ್ರ್ಯಾಂಡ್‌ ಯುವರ್‌ಸೆಲ್ಫ್‌

ಪ್ರಮುಖ ಉದ್ಯೋಗ ಬದಲಾವಣೆ ಹಾಗೂ ಕರಿಯರ್‌ ಬದಲಾವಣೆ ಸಂದರ್ಭದಲ್ಲಿ, ರೀಬ್ರ್ಯಾಂಡಿಂಗ್ ಚಟುವಟಿಕೆಗಳು ನಿಧಾನವಾಗಿ ಮತ್ತು ಜಾಗರೂಕತೆಯಿಂದ ನಡೆಯಬೇಕು. ಈ ಅಗತ್ಯ ಚಟುವಟಿಕೆಗಳು ನಿಮ್ಮ ಭವಿಷ್ಯದ ಉದ್ಯೋಗವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಹಾಯವಾಗುವಂತಿರಬೇಕು. ಉತ್ತಮ ಬ್ರ್ಯಾಂಡ್‌ ಆಗುವ ಮೂಲಕ ಯಶಸ್ವಿಯಾಗಿ ಕರಿಯರ್ ವೃದ್ಧಿಸಿಕೊಳ್ಳಬೇಕು.

ಬ್ಯುಸಿನೆಸ್ ಅನಾಲಿಸ್ಟ್‌(ಬಿಎ) ಜಾಬ್ ಪಡೆಯಬೇಕೇ.. ಹಾಗಿದ್ರೆ ಈ 10 ಟಿಪ್ಸ್ ಫಾಲೋಮಾಡಿ

​ರೆಸ್ಯೂಮ್‌ ಅಪ್‌ಡೇಟ್‌

ಫ್ರೆಶರ್‌ ಆಗಿಯೇ ಉದ್ಯೋಗ ಹುಡುಕುತ್ತಿರಲಿ ಅಥವಾ ಅನುಭವಿಗಳೇ ಉದ್ಯೋಗ ಹುಡುಕುತ್ತಿರಲಿ. ರೆಸ್ಯೂಮ್‌ನಲ್ಲಿ ಉತ್ತಮ ಪದಗಳ ಬಳಕೆ ಇರಬೇಕು. ಈಗಾಗಲೇ ಎಕ್ಸ್‌ಪೀರಿಯನ್ಸ್‌ ಪಡೆದಿರುವ ಅಭ್ಯರ್ಥಿಗಳು ತಮ್ಮ ರೈಸ್ಯೂಮ್‌ ಅನ್ನು ರೀ-ರೈಟ್‌ ಮಾಡಬೇಕು. ಅಪ್ಲೈ ಮಾಡುತ್ತಿರುವ ಜಾಬ್‌ ರೋಲ್‌ ಕುರಿತು ಪರಿಣಾಮಕಾರಿ ಪದ ಬಳಕೆ ಮೂಲಕ ವಿವರಣೆ ನೀಡಬೇಕು.

ಬ್ಯುಸಿನೆಸ್‌ ಸ್ಟಡಿ ಪದವೀಧರರಿಗೆ ಈ ಎಲ್ಲಾ ಕ್ಷೇತ್ರದಲ್ಲಿವೆ ಉದ್ಯೋಗಾವಕಾಶ..!

ಈ ಮೇಲಿನ ಕೆಲವು ಆಕರ್ಷಕ ಹಾಗೂ ಸ್ಮಾರ್ಟ್‌ ವರ್ಕ್‌ ಮೂಲಕ ಅಭ್ಯರ್ಥಿಯು ತಮ್ಮನ್ನು ಉತ್ತಮ ಬ್ರ್ಯಾಂಡ್‌ ಮಾಡಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ