ಆ್ಯಪ್ನಗರ

ಪೂರ್ವ ಕರಾವಳಿ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕ; ಅರ್ಜಿ ಆಹ್ವಾನ

ಪೂರ್ವ ಕರಾವಳಿ ರೈಲ್ವೆ ಕೋವಿಡ್‌ ಕೇರ್‌ ಕೇಂದ್ರಗಳ ಕೋಚ್‌ಗಳಲ್ಲಿ, ಕೆಯುಆರ್‌ ಘಟಕಗಳ ಮೆಡಿಕಲ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

Vijaya Karnataka Web 16 May 2020, 6:59 pm
ಈಸ್ಟ್‌ ಕೋಸ್ಟ್‌ ರೈಲ್ವೆಯು ಆಸಕ್ತ ವ್ಯಕ್ತಿಗಳನ್ನು ಪ್ಯಾರಾ ಮೆಡಿಕಲ್ ಸ್ಟಾಫ್‌ (ಸ್ಟಾಫ್‌ ನರ್ಸ್‌, ನರ್ಸಿಂಗ್ ಸುಪೆರಿಂಟೆಂಡೆಂಟ್), ಫಾರ್ಮಾಸಿಸ್ಟ್‌ ಮತ್ತು ಡ್ರೆಸರ್ಸ್‌, ಓಟಿಎ, ಹಾಸ್ಟಿಟಲ್‌ ಅಟೆಂಡಂಟ್ಸ್‌ ಲೆವೆಲ್‌-1 ಪೋಸ್ಟ್‌ಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಕೋವಿಡ್‌ ಕೇರ್‌ ಕೇಂದ್ರಗಳ ಕೋಚ್‌ಗಳಲ್ಲಿ, ಕೆಯುಆರ್‌ ಘಟಕಗಳ ಮೆಡಿಕಲ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.
Vijaya Karnataka Web railway jobs 2020
east coast railway recruitment 2020


ಪೂರ್ವ ಕರಾವಳಿ ರೈಲ್ವೆಯು ಒಟ್ಟು 561 ಹುದ್ದೆಗಳನ್ನು ನೇಮಕ ಮಾಡಲಿದ್ದು, ಮೇ 22, 2020 ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

ನೇಮಕಾತಿ ಮಾಡುವ ಹುದ್ದೆಗಳ ವಿವರ
ನರ್ಸಿಂಗ್ ಸುಪೆರಿಂಟೆಂಡಂಟ್ 255
ಫಾರ್ಮಾಸಿಸ್ಟ್‌ 51
ಡ್ರೆಸರ್ಸ್‌ / ಓಟಿಎ / ಹಾಸ್ಟಿಟಲ್ ಅಟೆಂಡಂಟ್ 255
ಒಟ್ಟು 561

ವಯೋಮಿತಿ ಅರ್ಹತೆಗಳು

ನರ್ಸಿಂಗ್ ಸುಪೆರಿಂಟೆಂಡಂಟ್ ಹುದ್ದೆಗಳಿಗೆ 20-38 ವರ್ಷ, ಫಾರ್ಮಸಿಸ್ಟ್‌ ಹುದ್ದೆಗಳಿಗೆ 20-35 ವರ್ಷ, ಡ್ರೆಸರ್ಸ್‌ / ಓಟಿಎ / ಹಾಸ್ಟಿಟಲ್ ಅಟೆಂಡಂಟ್ ಹುದ್ದೆಗಳಿಗೆ 18-33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇ-ಮೇಲ್ ವಿಳಾಸ srdmohkur@gmail.com ಕ್ಕೆ ಸೂಕ್ತ ಬಯೋಡಾಟಾದೊಂದಿಗೆ ಅರ್ಜಿ ಕಳುಹಿಸಬೇಕು.

ಬಯೋಡಾಟಾದೊಂದಿಗೆ ಕಾರ್ಯಾನುಭವ, ಶಿಕ್ಷಣ ದಾಖಲೆಗಳ ಸಾಫ್ಟ್‌ಕಾಪಿಯನ್ನು ಕಳುಹಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ರಿಪೋರ್ಟ್‌ ಮಾಡಿಕೊಳ್ಳಲು ಇ-ಮೇಲ್‌ ಕಳುಹಿಸಿದ ವೇಳೆ ಮೂಲ ದಾಖಲೆಗಳನ್ನು ನೀಡಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗೆ ಅಭ್ಯರ್ಥಿಗಳು ಈಸ್ಟ್‌ ಕೋಸ್ಟ್‌ ರೈಲ್ವೆಯ ವೆಬ್‌ಸೈಟ್‌ eastcoastrail.indianrailways.gov.in ಗೆ ಭೇಟಿ ನೀಡಿರಿ.

ಉದ್ಯೋಗ ವಿವರ

INR 20000 to 50000 /Month
ಹುದ್ದೆಯ ಹೆಸರುಪೂರ್ವ ಕರಾವಳಿ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕ
ವಿವರದೆಹಲಿ ಈಸ್ಟ್‌ ಕೋಸ್ಟ್‌ ರೈಲ್ವೆ ಘಟಕದಲ್ಲಿ ವಿವಿಧ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನ
ಪ್ರಕಟಣೆ ದಿನಾಂಕ2020-05-16
ಕೊನೆ ದಿನಾಂಕ2020-05-22
ಉದ್ಯೋಗ ವಿಧಗುತ್ತಿಗೆ
ಉದ್ಯೋಗ ಕ್ಷೇತ್ರರೈಲ್ವೆ ಉದ್ಯೋಗ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ---
ವಿದ್ಯಾರ್ಹತೆಮೆಡಿಕಲ್, ಫಾರ್ಮಸಿ, ಇತರೆ ವೈದ್ಯಕೀಯ ಕೋರ್ಸ್‌ಗಳು
ಕಾರ್ಯಾನುಭವ1 - 5 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಪೂರ್ವ ಕರಾವಳಿ ರೈಲ್ವೆ
ವೆಬ್‌ಸೈಟ್‌ ವಿಳಾಸhttps://eastcoastrail.indianrailways.gov.in/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಪೂರ್ವ ಕರಾವಳಿ ರೈಲ್ವೆ
ಸ್ಥಳದೆಹಲಿ
ಪ್ರದೇಶದೆಹಲಿ
ಅಂಚೆ ಸಂಖ್ಯೆ110001
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ