ಆ್ಯಪ್ನಗರ

ದಕ್ಷಿಣ ರೈಲ್ವೆಯಲ್ಲಿ 3585 ವಿವಿಧ ಉದ್ಯೋಗಾವಕಾಶಗಳು: ಆನ್‌ಲೈನ್‌ ಅರ್ಜಿ ಆಹ್ವಾನ

ಇಂಡಿಯನ್ ರೈಲ್ವೆಯ ದಕ್ಷಿಣ ರೈಲ್ವೆ ವಲಯದಲ್ಲಿ 3585 ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು, ವಿವಿಧ ಟ್ರೇಡ್‌ಗಳ ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

Vijaya Karnataka Web 30 Dec 2019, 4:18 pm
ಇಂಡಿಯನ್ ರೈಲ್ವೆಯ ದಕ್ಷಿಣ ರೈಲ್ವೆ ವಲಯದಲ್ಲಿ 3585 ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು, ವಿವಿಧ ಟ್ರೇಡ್‌ಗಳ ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
Vijaya Karnataka Web southern railway recruitment cell invites online application for 3585 apprentice recruitment 2019
ದಕ್ಷಿಣ ರೈಲ್ವೆಯಲ್ಲಿ 3585 ವಿವಿಧ ಉದ್ಯೋಗಾವಕಾಶಗಳು: ಆನ್‌ಲೈನ್‌ ಅರ್ಜಿ ಆಹ್ವಾನ



ಹುದ್ದೆಗಳ ವಿವರ

ಕ್ಯಾರಿಯೇಜ್ ವರ್ಕ್ಸ್‌ ಪೆರಂಬೂರ್ : 1208

ಸೆಂಟ್ರಲ್ ವರ್ಕ್‌ಶಾಪ್‌-ಗೋಲ್ಡನ್ ರಾಕ್ : 728

ಸಿಗ್ನಲ್, ಟೆಲಿಕಂಮ್ಯೂನಿಕೇಷನ್ ವರ್ಕ್‌ಶಾಪ್‌/ ಪೆರಂಬೂರ್: 1654

ಈ ಹುದ್ದೆಗಳನ್ನು ದಕ್ಷಿಣ ರೈಲ್ವೆಯ ವಿವಿಧ ಡಿವಿಷನ್‌ಗಳು, ವರ್ಕ್‌ಶಾಪ್‌ಗಳು, ಘಟಕಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.

ದಕ್ಷಿಣ ರೈಲ್ವೆ ಅಧೀನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಲಕ್ಷ್ಯದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳು ಬರಲಿದ್ದು, ಈ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ಟ್ರೇಡ್‌ಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಕೆಳಗಿನ ಸ್ಲೈಡ್‌ನಲ್ಲಿ ನೀಡಲಾದ ಅಧಿಸೂಚನೆ ಲಿಂಕ್‌ಗಳನ್ನು ಕ್ಲಿಕ್ ಮಾಡಿ ತಿಳಿಯಬಹುದು.

ಕ್ಯಾರಿಯೇಜ್ ವರ್ಕ್ಸ್‌ ಹುದ್ದೆಗಳ ವಿವರ

ಒಟ್ಟು 1208 ಹುದ್ದೆಗಳನ್ನು ಕಾರ್‌ಪೆಂಟರ್, ಫಿಟ್ಟರ್, ಎಂಎಂವಿ, ಪೇಂಟರ್, ವೆಲ್ಡರ್ ಮತ್ತು ಇತರೆ ಟ್ರೇಡ್‌ಗಳ ಅಡಿಯಲ್ಲಿ ಪೆರಂಬೂರ್ ಮತ್ತು ಚೆನ್ನೈ ಡಿವಿಷನ್‌ಗಳ ವರ್ಕ್‌ಶಾಪ್‌ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಪೂರೈಸಿರಬೇಕು. ಜಾತಿವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಅರ್ಜಿ ಶುಲ್ಕ ರೂ.100 ಪಾವತಿಸಬೇಕು. ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳ ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ಲಿಂಕ್‌ ಕ್ಲಿಕ್ ಮಾಡಿ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಸೆಂಟ್ರಲ್ ವರ್ಕ್‌ಶಾಪ್‌-ಗೋಲ್ಡನ್ ರಾಕ್ ಹುದ್ದೆಗಳ ವಿವರ

ಒಟ್ಟು 723 ಹುದ್ದೆಗಳಿಗೆ ಐಟಿಐ, ಅಥವಾ ಪಿಯುಸಿ ಸೈನ್ಸ್‌ ವಿಭಾಗದಲ್ಲಿ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರಬೇಕು.

ಫಿಟ್ಟರ್, ವೆಲ್ಡರ್ ಮೆಕ್ಯಾನಿಸ್ಟ್, ಇಲೆಕ್ಟ್ರೀಷಿಯನ್, ಡಿಎಸ್‌ಎಲ್‌ ಮೆಕ್ಯಾನಿಕ್, ಮೆಕ್ಯಾನಿಕ್ ರೆಫ್ಟ್ರಿಜೆರೇಷನ್ ಮತ್ತು ಏರ್ ಕಂಡೀಷನಿಂಗ್, ಎಂಎಂವಿ, ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್‌ ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತದೆ. ನೇಮಕಾತಿಯಲ್ಲಿ ಜಾತಿವಾರು ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಬೇಕಾಗಿದೆ. ಹುದ್ದೆಗಳ ವಿವರದ ಬಗ್ಗೆ ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ಲಿಂಕ್‌ ಕ್ಲಿಕ್ ಮಾಡಿ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಸಿಗ್ನಲ್, ಟೆಲಿಕಂಮ್ಯೂನಿಕೇಷನ್ ವರ್ಕ್‌ಶಾಪ್‌ ಹುದ್ದೆಗಳ ವಿವರ

ಒಟ್ಟು 1654 ಹುದ್ದೆಗಳನ್ನು ಪೆರಂಬೂರ್ ನ ಕೊಯಂಬತೂರ್, ತ್ರಿವೇಡ್ರಂ, ಪಾಲ್ಘಟ್, ಸೇಲಂ ಡಿವಿಷನ್‌ಗಳ ಸಿಗ್ನಲ್ ಮತ್ತು ಟೆಲಿಕಂಮ್ಯೂನಿಕೇಷನ್ ವರ್ಕ್‌ಶಾಪ್‌ಗಳಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SSLC ವಿದ್ಯಾರ್ಹತೆಯನ್ನು ಶೇ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್ ಮಾಡಿರಬೇಕು. ಕಡ್ಡಾಯವಾಗಿ ಐಟಿಐ ಅಥವಾ ಪಿಯುಸಿ ಸೈನ್ಸ್‌ ವಿದ್ಯಾರ್ಹತೆಯನ್ನು ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಡೆದಿರಬೇಕು. ಅಪ್ರೆಂಟಿಸ್ ಹುದ್ದೆಗಳ ಅವಧಿ 1 ವರ್ಷ ಮಾತ್ರ. ಈ ಹುದ್ದೆಗಳ ಬಗ್ಗೆ ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ಲಿಂಕ್‌ ಕ್ಲಿಕ್ ಮಾಡಿ.

ಅಧಿಸೂಚನೆಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-12-2019 (ಸಂಜೆ 5 ಗಂಟೆ ವರೆಗೆ)

ಮೇಲೆ ತಿಳಿಸಿದ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಆನ್‌ಲೈನ್‌ ಅರ್ಜಿಗೆ ಕೆಳಗೆ ಡೈರೆಕ್ಟ್‌ ಲಿಂಕ್‌ ನೀಡಲಾಗಿದ್ದು, ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಮೇಲಿನ ಲಿಂಕ್‌ ಕ್ಲಿಕ್ ಮಾಡಿದಾಗ ಓಪನ್ ಆಗುವ ಪೇಜ್‌ನಲ್ಲಿ 'REGISTER' ಎಂಬಲ್ಲಿ ಕ್ಲಿಕ್ ಮಾಡಿ, ಬೇಸಿಕ್ ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಆಗಿ. ನಂತರ ತಮ್ಮ ಇತರೆ ಅಗತ್ಯ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್ ಪೂರ್ಣಗೊಳಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ